ETV Bharat / state

ಹರಿಹರ: ಗಾಂಧಿನಗರಕ್ಕೂ ಕಾಲಿಟ್ಟ ಕೊರೊನಾ - corona news‘

ಹರಿಹರದ ಗಾಂಧಿನಗರದ 34 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಕಂಡುಬಂದಿದೆ. ಅವರ ಪ್ರಥಮ ಸಂಪರ್ಕಿತ 8 ಸದಸ್ಯರನ್ನು ಕ್ವಾರಂಟೈನ್​​ ಕೇಂದ್ರಕ್ಕೆ ಕಳುಹಿಸಲಾಗಿದೆ. ಆರೋಗ್ಯ ಇಲಾಖೆಯು ಸೋಂಕಿತ ವ್ಯಕ್ತಿಯ ಮನೆಯ 100 ಮೀಟರ್ ಸುತ್ತಳತೆಯಲ್ಲಿರುವ 47 ಮನೆಯ 215 ನಿವಾಸಿಗಳ ಪ್ರದೇಶವನ್ನು ಕಂಟೈನ್​ಮೆಂಟ್ ಝೋನ್​​ ಎಂದು ಘೋಷಿಸಿದೆ.

ಗಾಂಧಿನಗರಕ್ಕೂ ಕಾಲಿಟ್ಟ ಕೊರೊನಾ
ಗಾಂಧಿನಗರಕ್ಕೂ ಕಾಲಿಟ್ಟ ಕೊರೊನಾ
author img

By

Published : Jul 1, 2020, 7:58 PM IST

ಹರಿಹರ (ದಾವಣಗೆರೆ): ಗಾಂಧಿನಗರದ 34 ವರ್ಷದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದ್ದು, ಇವರ ಮನೆಯ 100 ಮೀಟರ್ ಸುತ್ತದ ಪ್ರದೇಶವನ್ನು ಕಂಟೈನ್​ಮೆಂಟ್ ಝೋನ್​ ಎಂದು ಘೋಷಿಸಲಾಗಿದೆ.

ಈ ವ್ಯಕ್ತಿಯು ಜಿಲ್ಲಾ ಅಲ್ಪಸಂಖ್ಯಾತ ಇಲಾಖೆ ಅಧಿಕಾರಿಯ ವಾಹನ ಚಾಲಕರಾಗಿದ್ದು, ಇವರು ಕಳೆದ ಜೂ. 26ರಂದು ಉಸಿರಾಟದ ಸಮಸ್ಯೆಯಿಂದ ದಾವಣಗೆರೆಯ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿ ವೈದ್ಯರು ಗಂಟಲು ದ್ರವದ ಪರೀಕ್ಷೆಗೆ ಸೂಚಿಸಿದ್ದಾರೆ. ಕೋವಿಡ್ ಜಿಲ್ಲಾಸ್ಪತ್ರೆಯಲ್ಲಿ ಗಂಟಲು ದ್ರವ ಪಡೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ವರದಿಯು ನೆಗೆಟಿವ್ ಬಂದ ಹಿನ್ನೆಲೆಯಲ್ಲಿ ಮನೆಗೆ ಮರಳಿದ್ದರು. ಮತ್ತೆ ವ್ಯಕ್ತಿಯ ಆರೋಗ್ಯದಲ್ಲಿ ಏರುಪೇರು ಉಂಟಾದಾಗ ಪುನಃ ಬಾಪೂಜಿ ಆಸ್ಪತ್ರೆಗೆ ಜೂ. 28 ರಂದು ದಾಖಲಾಗುತ್ತಾರೆ. ವೈದ್ಯರು ಚಿಕೆತ್ಸೆ ನೀಡಿ ಜೂ.29 ರಂದು ಗಂಟಲು ದ್ರವ ಪರೀಕ್ಷೆಗೆ ಕಳುಹಿಸುತ್ತಾರೆ.

ಈ ವರದಿ ಪಾಸಿಟಿವ್ ಎಂದು ಬಂದಿದೆ. ತಕ್ಷಣ ಅಧಿಕಾರಿಗಳ ತಂಡವು ಗಾಂಧಿನಗರದ ಅವರ ನಿವಾಸಕ್ಕೆ ತೆರಳಿ ಪ್ರಥಮ ಸಂಪರ್ಕಿತ 8 ಸದಸ್ಯರನ್ನು ಕ್ವಾರಂಟೈನ್​​ ಕೇಂದ್ರಕ್ಕೆ ಕಳುಹಿಸಿದೆ. ಆರೋಗ್ಯ ಇಲಾಖೆಯು ಸೋಂಕಿತ ವ್ಯಕ್ತಿಯ ಮನೆಯ 100 ಮೀಟರ್ ಸುತ್ತಳತೆಯಲ್ಲಿರುವ 47 ಮನೆಯ 215 ನಿವಾಸಿಗಳ ಪ್ರದೇಶವನ್ನು ಕಂಟೈನ್​ಮೆಂಟ್ ಝೋನ್​​ ಎಂದು ಘೋಷಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.