ETV Bharat / state

ಕೋವಿಡ್​ ಪ್ರಕರಣ ಹೆಚ್ಚಳ: ಹನಗವಾಡಿ ಗ್ರಾಮಸ್ಥರಿಂದ ಸ್ವಯಂ ದಿಗ್ಬಂಧನ - Davanagere

ಹರಿಹರ ತಾಲೂಕಿನ ಹನಗವಾಡಿ ಗ್ರಾಮಸ್ಥರು ಕೊರೊನಾ ನಿಯಂತ್ರಣಕ್ಕೆ ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ.

Davanagere
ಹನಗವಾಡಿ ಗ್ರಾಮಕ್ಕೆ ಸ್ವಯಂ ದಿಗ್ಬಂಧನ
author img

By

Published : Jun 2, 2021, 7:32 AM IST

ದಾವಣಗೆರೆ: ಕೊರೊನಾ 2ನೇ ಅಲೆಗೆ ಗ್ರಾಮೀಣ ಭಾಗದ ಹಳ್ಳಿಗಳು ತತ್ತರಿಸಿವೆ. ಹಳ್ಳಿಗಾಡಿನಲ್ಲಿ ಸೋಂಕು ಹೆಚ್ಚು ವರದಿಯಾಗುತ್ತಿದ್ದು, ಅದರಲ್ಲಿಯೂ ದಾವಣಗೆರೆಯಲ್ಲಿ 70%ರಷ್ಟು ಹಳ್ಳಿಗಳಲ್ಲಿ ಕೊರೊನಾ ಸೋಂಕು ಕಂಡು ಬಂದಿದೆ. ಹಾಗಾಗಿ ಗ್ರಾಮೀಣ ಭಾಗದ ಜನರು ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.

ಕೋವಿಡ್​ ಪ್ರಕರಣ ಹೆಚ್ಚಳ: ಹನಗವಾಡಿ ಗ್ರಾಮಕ್ಕೆ ಸ್ವಯಂ ದಿಗ್ಬಂಧನ

ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಗ್ರಾಮಸ್ಥರು ಕೊರೊನಾ ನಿಯಂತ್ರಣಕ್ಕೆ ಸ್ವಯಂ ದಿಗ್ಬಂಧನ ಹಾಕಿಕೊಂಡಿದ್ದಾರೆ. ಈ ಗ್ರಾಮದಲ್ಲಿ 42 ಮಂದಿಗೆ ಸೋಂಕು ದೃಢಪಟ್ಟಿದ್ದು, 6 ಜನ ಸೋಂಕಿತರು ಸಾವನ್ನಪ್ಪಿದ್ದರಿಂದ ಗ್ರಾಮಸ್ಥರು ಮುಂಜಾಗ್ರತಾ ಕ್ರಮವಾಗಿ ಗ್ರಾಮಕ್ಕೆ ಪ್ರವೇಶಿಸುವ ಎಲ್ಲಾ ರಸ್ತೆಗಳನ್ನು ಸಂಪೂರ್ಣ ಬಂದ್ ಮಾಡಿದ್ದಾರೆ.

ಮುಖ್ಯ ದ್ವಾರದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರನ್ನು ನೇಮಕ ಮಾಡಲಾಗಿದೆ. ಬೇರೆ ಜಿಲ್ಲೆಗಳಿಂದ ಗ್ರಾಮಕ್ಕೆ ಆಗಮಿಸುವರಿಗೆ ಸಂಪೂರ್ಣ ನಿಷೇಧ ವಿಧಿಸಿದ್ದು, ಏನಾದ್ರು ಮಾತನಾಡುವುದು ಇದ್ದರೆ ಸಂಬಂಧಪಟ್ಟವರನ್ನು ಹೊರಗಿನಿಂದಲೇ ಮಾತನಾಡಿಸಿ ಕಳುಹಿಸುತ್ತಿದ್ದಾರೆ.

ಅಲ್ಲದೆ ಗ್ರಾಮದ ಜನರು ನಗರಕ್ಕೆ ಹೋಗಿ ಬಂದರೆ ಅವರಿಗೆ ಥರ್ಮಲ್ ಸ್ಕ್ಯಾನಿಂಗ್​​ನಿಂದ ಟೆಂಪರೇಚರ್ ಚೆಕ್ ಮಾಡಿ ಕೈಗಳಿಗೆ ಸ್ಯಾನಿಟೈಸರ್ ಹಾಕಿ ಒಳಗೆ ಬಿಡುತ್ತಿದ್ದಾರೆ. ಪಂಚಾಯಿತಿ ಸಿಬ್ಬಂದಿ ಪಾಳೆಯಲ್ಲಿ ಕೆಲಸ ಮಾಡುತ್ತಾ ಮುಖ್ಯ ದ್ವಾರದಲ್ಲಿ‌ ನಿಂತು ಜನರನ್ನು ಒಳ ಬಿಡುತ್ತಿದ್ದಾರೆ. ಸೋಂಕು ಹೆಚ್ಚಾದ ಹಿನ್ನೆಲೆ ಹನಗವಾಡಿ ಗ್ರಾಮಸ್ಥರು ಹಾಗೂ ಅಧಿಕಾರಿಗಳು ಸ್ವಯಂ ದಿಗ್ಬಂಧನ ಮಾಡಿರುವುದು ಸಂತಸದ ವಿಚಾರ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.