ದಾವಣಗೆರೆ: ದೇಶ ಸೇವೆ ಮಾಡಿ ನಿವೃತ್ತಿ ಪಡೆದು ಹುಟ್ಟೂರಿಗೆ ಆಗಮಿಸಿದ ಯೋಧನಿಗೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹಾಗು ಎಸ್ಪಿ ಸಿ.ಬಿ ರಿಷ್ಯಂತ್ ಆತ್ಮೀಯ ಸ್ವಾಗತ ಕೋರಿದರು.
ನಗರದ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ ಯೋಧ ಸುರೇಶ್ ರಾವ್ ಘೋರ್ಪಡೆಗೆ ಹೂವಿನ ಗುಚ್ಛ ನೀಡಿ ಶಾಲು ಹಾಕಿ ಸ್ವಾಗತಿಸಲಾಯಿತು. 21 ವರ್ಷದ ಸೇವೆಯ ಬಳಿಕ ನಿವೃತ್ತಿ ಹೊಂದಿ ಸ್ವಂತ ಗ್ರಾಮ ತೋಳಹುಣಸೆಗೆ ಅವರು ವಾಪಸ್ಸಾಗಿದ್ದಾರೆ. ಯೋಧನನ್ನು ತೆರೆದ ವಾಹನದಲ್ಲಿ ನಗರದಾದ್ಯಂತ ಮೆರವಣಿಗೆ ಮಾಡಲಾಯಿತು.
ಮಾಜಿ ಸೈನಿಕ ಘೋರ್ಪಡೆ ನೂರಾರು ಸೈನಿಕರಿಗೆ ತರಬೇತುದಾರರಾಗಿದ್ದರಂತೆ. ನಕ್ಸಲ್ ಆಪರೇಷನ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಇವರು ಡೈರೆಕ್ಟರ್ ಜನರಲ್ ರೆಕಮೆಂಡೇಷನ್ ರೋಲ್ ಪದವಿ ಪುರಸ್ಕೃತರು.
ಇದನ್ನೂ ಓದಿ: ದಾವಣಗೆರೆ ಸಹೋದರಿಯರ ಹತ್ಯೆ ಪ್ರಕರಣ... ಅಕ್ಕನ ಗಂಡನೇ ಕೃತ್ಯವೆಸಗಿದ ಆರೋಪಿ!