ದಾವಣಗೆರೆ: ಜಿಲ್ಲೆಯ ಆರು ತಾಲೂಕುಗಳ ಪೈಕಿ ಮೂರು ತಾಲೂಕಗಳಾದ ದಾವಣಗೆರೆ, ಜಗಳೂರು, ಹೊನ್ನಾಳಿಯ ಗ್ರಾಪಂಗಳಿಗೆ ನಾಳೆ ಮೊದಲನೇ ಹಂತದ ಚುನಾವಣೆಗೆ ಮತದಾನ ನಡೆಯಲ್ಲಿದ್ದು, ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿವೆ.
ಇಂದು ನಗರದ ಮೋತಿ ವೀರಪ್ಪ ಕಾಲೇಜು ಆವರಣದಲ್ಲಿ ಚುನಾವಣಾ ಕರ್ತವ್ಯದಲ್ಲಿರುವ ಸಿಬ್ಬಂದಿಗೆ ಬ್ಯಾಲೆಟ್ ಪೇಪರ್ ಬಾಕ್ಸ್ಗಳನ್ನು ನೀಡಲಾಯಿತು. ಮೂರು ತಾಲೂಕುಗಳ ಚುನಾವಣಾ ಕಾರ್ಯಕ್ಕೆ 80 ಕೆಎಸ್ಆರ್ಟಿಸಿ ಬಸ್ಗಳು, 38 ಮಿನಿ ಬಸ್ ಮತ್ತು 26 ಜೀಪ್ಗಳ ವ್ಯವಸ್ಥೆ ಮಾಡಲಾಗಿದೆ. ದಾವಣಗೆರೆಗೆ 38, ಹೊನ್ನಾಳಿಗೆ 29, ಜಗಳೂರಿಗೆ 22 ಚುನಾವಣಾ ಅಧಿಕಾರಿಗಳನ್ನು ನೇಮಿಸಲಾಗಿದೆ. ಮೂರು ತಾಲೂಕುಗಳ ಒಟ್ಟು 88 ಗ್ರಾಪಂಗಳ 1,087 ಸ್ಥಾನಗಳಿಗೆ ನಾಳೆ ಮತದಾನ ನಡೆಯಲಿದ್ದು, ಒಟ್ಟು 579 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಇದನ್ನೂ ಓದಿ : ಚಿಕ್ಕೋಡಿ: ಗ್ರಾ.ಪಂ ಚುನಾವಣೆ ಅಂತಿಮ ಕಣದಲ್ಲಿ 1,628 ಅಭ್ಯರ್ಥಿಗಳು
ಮೊದಲ ಹಂತದ 88 ಗ್ರಾಪಂಗಳ ಮತದಾರರ ವಿವರ:
ದಾವಣಗೆರೆ: ಒಟ್ಟು ಮತದಾರರು 1,70,770, ಪುರುಷರು - 85,731, ಮಹಿಳೆಯರು - 85,039
ಹೊನ್ನಾಳಿ: ಒಟ್ಟು ಮತದಾರರು 99,085, ಪುರುಷರು - 49,992, ಮಹಿಳೆಯರು - 49,093
ಜಗಳೂರು: ಒಟ್ಟು ಮತದಾರರು 1,08,235, ಪುರುಷರು - 54,729, ಮಹಿಳೆಯರು - 53,506