ETV Bharat / state

ದಾವಣಗೆರೆ: ಲವರ್​ಗೆ​ ಕೈಕೊಟ್ಟು ಇನ್ನೊಬ್ಬಳ ಕೈ ಹಿಡಿದ ಗ್ರಾ.ಪಂ ಸದಸ್ಯ: ಯುವಕನ ಮನೆ ಮುಂದೆ ವಿಷ ಕುಡಿದ ಪ್ರಿಯತಮೆ!

ಹಾಲೇಶ್ ತನ್ನ ತಾಯಿಗೆ ಆರೋಗ್ಯ ಸರಿ‌ ಇಲ್ಲದ ವೇಳೆ ಸಂತ್ರಸ್ತೆಯನ್ನು ಮನೆಗೆ ಕರೆದುಕೊಂಡು‌ ಹೋಗಿ ಮನೆಯಲ್ಲಿಯೇ ಇರಿಸಿಕೊಂಡಿದ್ದನಂತೆ. ಇದೀಗ ಆಕೆಗೆ ಕೈ ಕೊಟ್ಟು ಬೇರೆ ಯುವತಿಯನ್ನು ಮದುವೆಯಾಗಿ ಮೋಸ ಮಾಡಿದ್ದಾನೆ ಎನ್ನಲಾಗ್ತಿದೆ.

poison
ಯುವತಿ ಕುಟುಂಬಸ್ಥರ ಅಳಲು
author img

By

Published : Jun 29, 2021, 7:32 PM IST

Updated : Jun 29, 2021, 9:42 PM IST

ದಾವಣಗೆರೆ : ಜಿಲ್ಲೆಯ ಕ್ಯಾತನಕೆರೆ ಗ್ರಾಮದ ನಿವಾಸಿ ಹಾಲೇಶ್ ಹಾಗೂ ಚಿತ್ರದುರ್ಗ ಜಿಲ್ಲೆಯ ಓಬಳಾಪುರ ಗ್ರಾಮದ ಯುವತಿ ನಾಲ್ಕು ವರ್ಷದಿಂದ ಪ್ರೀತಿಸುತ್ತಿದ್ದರಂತೆ. ಯುವತಿಯ ದೂರದ ಸಂಬಂಧಿಯಾಗಿರುವ ಹಾಲೇಶ್ ಆಕೆಯನ್ನು ಲೈಂಗಿಕವಾಗಿ ಬಳಸಿಕೊಂಡು ಬೇರೆ ಮದುವೆಯಾಗಿ ಮೋಸ ಮಾಡಿದ್ದಾನೆ. ಈ ವಿಚಾರ ತಿಳಿದ ಯುವತಿ ಕ್ಯಾತ‌ನಕೆರೆ ಗ್ರಾಮದಲ್ಲಿರುವ ಹಾಲೇಶ್‌ನ ಮನೆ ಮುಂದೆ ಧರಣಿ ನಡೆಸಿ ನ್ಯಾಯಕ್ಕಾಗಿ ವಿಷ ಸೇವಿಸಿದ್ದಾರೆ.

ಯುವತಿ ಕುಟುಂಬಸ್ಥರ ಅಳಲು

ಕೂಡಲೇ ಸಂತ್ರಸ್ತೆಯ ಸಹೋದರ ದಾವಣಗೆರೆಯ ಜಿಲ್ಲಾಸ್ಪತ್ರೆಗೆ ಆಕೆಯನ್ನು ಸೇರಿಸಿದ್ದು, ಆಕೆ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ. ಇತ್ತ ಯುವತಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ನ್ಯಾಯಕ್ಕಾಗಿ ಮಾಯಕೊಂಡ ಪೊಲೀಸ್​ ಠಾಣೆಯ ಮೆಟ್ಟಿಲೇರಿದ್ದಾರೆ.

ಯುವತಿಗೆ ನ್ಯಾಯ ಕೊಡಿಸುವಂತೆ ಆಗ್ರಹ

ಕ್ಯಾತನಕೆರೆ ಗ್ರಾಪಂ ಸದಸ್ಯನಾಗಿರುವ ಹಾಲೇಶ್ ಯುವತಿಯ ಮನೆಗೆ ಆಗಾಗ್ಗೆ ಭೇಟಿ ನೀಡ್ತಿದ್ದ. ನಾನು ಗ್ರಾಪಂ ಅಧ್ಯಕ್ಷನಾಗಿದ್ದೇನೆ ಎಂದು ನಂಬಿಸಿ, ಒಂದು ಲಕ್ಷ ಹಣ ಹಾಗೂ ಬೆಳ್ಳಿ ಬಂಗಾರ ಕೂಡ ಪಡೆದಿದ್ದಾನೆ‌ ಎಂದು ಸಂತ್ರಸ್ತೆಯ ಸಂಬಂಧಿಕರು ಆರೋಪಿಸಿದ್ದಾರೆ. ಹಾಲೇಶ್ ತನ್ನ ತಾಯಿಗೆ ಆರೋಗ್ಯ ಸರಿ‌ ಇಲ್ಲದ ವೇಳೆ ಸಂತ್ರಸ್ತೆಯನ್ನು ಮನೆಗೆ ಕರೆದುಕೊಂಡು‌ ಹೋಗಿ ಮನೆಯಲ್ಲಿಯೇ ಇರಿಸಿಕೊಂಡಿದ್ದನಂತೆ. ಇದೀಗ ಆಕೆಗೆ ಕೈ ಕೊಟ್ಟು ಬೇರೆ ಯುವತಿಯನ್ನು ಮದುವೆಯಾಗಿ ಮೋಸ ಮಾಡಿದ್ದಾನೆ ಎನ್ನಲಾಗ್ತಿದೆ.

ಇತ್ತ, ಹಾಲೇಶ್​ನನ್ನು ಕರೆಸಿ ಪಂಚಾಯ್ತಿ ಮಾಡಿ ಪ್ರಕರಣ ಇತ್ಯರ್ಥ ಮಾಡ್ತೀವಿ ಅಂದಿದ್ದ ಕ್ಯಾತನಕೆರೆಯ ಗ್ರಾಮಸ್ಥರು, ರಾತ್ರೋರಾತ್ರಿ ಆತನ ಮದುವೆ ಮಾಡಿಸಿ ಅವನನ್ನು ಬೇರೆ ಊರಿಗೆ ಕಳಿಸಿದ್ದಾರೆ ಅಂತ ಆರೋಪಿಸಿ ಸಂತ್ರಸ್ತೆಯ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Last Updated : Jun 29, 2021, 9:42 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.