ದಾವಣಗೆರೆ: ಯುವ ಪೀಳಿಗೆಗೆ ಗಾಂಧೀಜಿಯವರ ಜೀವನಾದರ್ಶನಗಳನ್ನು ಸಾರಲು ಬೆಣ್ಣೆನಗರಿಯಲ್ಲೊಂದು ಗಾಂಧಿಭವನ ನಿರ್ಮಾಣವಾಗಿದೆ.
ಈ ಭವನದಲ್ಲಿ ಬಾಪು ಅವರ ಜೀವನಾದರ್ಶಗಳು, ಅವರ ತತ್ವಗಳು, ಹೋರಾಟಗಳನ್ನು ಅನಾವರಣ ಮಾಡಲಾಗಿದೆ. ಇದಲ್ಲದೆ ಮಹಾತ್ಮನ ಸುಂದರ ಕಲಾಕೃತಿಗಳು ತಲೆ ಎತ್ತಿದ್ದು, ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಕ್ಕೆ ಮುನ್ನುಡಿ ಬರೆದಿದ್ದ ಹೋರಾಟಗಾರರ ಕಲಾಕೃತಿಗಳು ಜನರ ಗಮನ ಸೆಳೆಯುತ್ತಿವೆ.
ಇನ್ನು ಭವನದ ಒಳಭಾಗದಲ್ಲಿ 22 ಲಕ್ಷ ಮೌಲ್ಯದ ಗ್ರಾನೈಟ್ ಕಲ್ಲಿನ ಭವ್ಯ ಪ್ರತಿಮೆ ಹಾಗೂ ಸತ್ಯ ಮೇವ ಜಯತೆ ಎಂಬ ಬರಹಗಳು ಪ್ರತಿಯೊಬ್ಬರನ್ನು ಸ್ವಾಗತಿಸುತ್ತಿದ್ದು, ಈ ಕಲಾಕೃತಿಗಳನ್ನು ಶಿವಮೊಗ್ಗ ಮೂಲದ ಕಲಾವಿದರಾದ ಪರಶುರಾಮ ಹಾಗೂ ಹೊನ್ನಮ್ಮನವರ್ ಸೇರಿದಂತೆ ಅವರ ಸಹಾಯಕರು ನಿರ್ಮಿಸಿದ್ದಾರೆ.