ETV Bharat / state

ದಾವಣಗೆರೆ: ನಾಲ್ವರು ವಿದ್ಯಾರ್ಥಿಗಳು, ಓರ್ವ ಶಿಕ್ಷಕನಿಗೆ ಕೊರೊನಾ - coronavirus update

ಚನ್ನಗಿರಿ ತಾಲೂಕಿನ ಒಬ್ಬ ಪ್ರೌಢ ಶಾಲಾ ಶಿಕ್ಷಕ, ಹರಿಹರದಲ್ಲಿ ಒಬ್ಬ ಪಿಯುಸಿ ವಿದ್ಯಾರ್ಥಿ, ದಾವಣಗೆರೆ ತಾಲೂಕಿನಲ್ಲಿ ಇಬ್ಬರು ಪ್ರೌಢ ಶಾಲೆ ವಿದ್ಯಾರ್ಥಿಗಳು, ಒಬ್ಬ ಪಾಲಿಟೆಕ್ನಿಕ್ ವಿದ್ಯಾರ್ಥಿಗೆ ಸೋಂಕು ತಗುಲಿದೆ.

corona virus
ಕೊರೊನಾ ವೈರಸ್​
author img

By

Published : Jan 9, 2021, 8:40 PM IST

ದಾವಣಗೆರೆ: ಜಿಲ್ಲೆಯಲ್ಲಿ ನಾಲ್ವರು ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂದು ಸರ್ವೇಕ್ಷಣಾಧಿಕಾರಿ ರಾಘವನ್ ಮಾಹಿತಿ ನೀಡಿದರು.

ಇದನ್ನೂ ಓದಿ...ರಾಜ್ಯದಲ್ಲಿಂದು 899 ಮಂದಿಗೆ ಕೊರೊನಾ ಪಾಸಿಟಿವಿ : ನಾಲ್ವರು ಸೋಂಕಿತರು ಬಲಿ

ಚನ್ನಗಿರಿ ತಾಲೂಕಿನ ಒಬ್ಬ ಪ್ರೌಢ ಶಾಲಾ ಶಿಕ್ಷಕನಿಗೆ ಸೋಂಕು ತಗುಲಿದೆ. ಹರಿಹರದಲ್ಲಿ ಒಬ್ಬ ಪಿಯುಸಿ ವಿದ್ಯಾರ್ಥಿ, ದಾವಣಗೆರೆ ತಾಲೂಕಿನಲ್ಲಿ ಇಬ್ಬರು ಪ್ರೌಢ ಶಾಲೆ ವಿದ್ಯಾರ್ಥಿಗಳು, ಒಬ್ಬ ಪಾಲಿಟೆಕ್ನಿಕ್ ವಿದ್ಯಾರ್ಥಿಗೆ ಸೋಂಕು ತಗುಲಿದೆ ಎಂದರು.

ಜನವರಿಯಿಂದ ಶಾಲಾ‌-ಕಾಲೇಜುಗಳು ಪ್ರಾರಂಭವಾದ ಹಿನ್ನೆಲೆ‌ಯಲ್ಲಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೋವಿಡ್ ಪರೀಕ್ಷೆಗೆ ಒಳಪಟ್ಟಿದ್ದರು. ವರ್ಷದ ಆರಂಭದಿಂದ ಈವರೆಗೂ ನಾಲ್ವರು ಶಿಕ್ಷಕರು ಮತ್ತು ನಾಲ್ವರು ವಿದ್ಯಾರ್ಥಿಗಳಲ್ಲಿ ಮಹಾಮಾರಿ ವಕ್ಕರಿಸಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.