ETV Bharat / state

ಮಾಜಿ ಗೃಹ ಸಚಿವರ ಪುತ್ರನ ಕಾರು ಅಪಘಾತ: ಆಟೋ ಚಾಲಕನಿಗೆ ಗಾಯ - ಮಾಜಿ ಸಚಿವ ಎಂಬಿ ಪಾಟೀಲ್​ ಪುತ್ರ

ಮಾಜಿ ಗೃಹ ಸಚಿವ ಎಂ ಬಿ ಪಾಟೀಲ್ ಅವರ​ ಪುತ್ರನದ್ದು ಎನ್ನಲಾದ ಕಾರು ಸರಕು ಸಾಗಣೆ ವಾಹನಕ್ಕೆ ಡಿಕ್ಕಿಯಾಗಿ ಓರ್ವ ಗಾಯಗೊಂಡಿರುವ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ.

Former Home Minister MB Patil's son's car collided with ape goods transport vehicle
ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್​​ ಪುತ್ರನ ಕಾರು ಅಪಘಾತ
author img

By

Published : Mar 20, 2020, 2:00 PM IST

ದಾವಣಗೆರೆ: ಅಪೆ ಗೂಡ್ಸ್ ವಾಹನಕ್ಕೆ ಮಾಜಿ ಗೃಹ ಸಚಿವ ಎಂ. ಬಿ. ಪಾಟೀಲ್​​ ಪುತ್ರ ಸೇರಿದಂತೆ ಇಬ್ಬರು ಪ್ರಯಾಣಿಸುತ್ತಿದ್ದರು ಎನ್ನಲಾದ ಐಷಾರಾಮಿ ಕಾರು ಡಿಕ್ಕಿಯಾಗಿ ಓರ್ವ ಗಾಯಗೊಂಡಿರುವ ಘಟನೆ ಜಗಳೂರು ತಾಲೂಕಿನ ಬೆಣ್ಣೆಹಳ್ಳಿ-ದೋಣೆಹಳ್ಳಿ ಸೇತುವೆ ಬಳಿಯ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಸಂಭವಿಸಿದೆ.

Former Home Minister MB Patil's son's car collided with ape goods transport vehicle
ಮಾಜಿ ಗೃಹ ಸಚಿವ ಎಂ.ಬಿ.ಪಾಟೀಲ್​​ ಪುತ್ರನ ಕಾರು ಅಪಘಾತ, ಆಟೋ ಚಾಲಕನಿಗೆ ಗಾಯ

ಎಂ.ಬಿ. ಪಾಟೀಲ್​ ಪುತ್ರ ಧೃವ ಪಾಟೀಲ್​ ತನ್ನ ಇಬ್ಬರು ಸ್ನೇಹಿತರೊಂದಿಗೆ ವಿಜಯಪುರಕ್ಕೆ ಕಾರಿನ ಸಂಖ್ಯೆ ಕೆ.ಎ.51, ಎಂಪಿ 6729 ನಂಬರ್​ನ ಐಷಾರಾಮಿ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು ಎನ್ನಲಾಗ್ತಿದೆ. ಈ ವೇಳೆ ಬೆಣ್ಣೆಹಳ್ಳಿ-ದೋಣೆಹಳ್ಳಿ ಸೇತುವೆ ಬಳಿ ಲಾರಿಯನ್ನು ಓವರ್ ಟೇಕ್​ ಮಾಡಲು ಹೋಗಿ ಮುಂದೆ ಚಲಿಸುತ್ತಿದ್ದ ವಾಹನಕ್ಕೆ ಕಾರು ಅಪ್ಪಳಿಸಿದೆ ಎಂದು ತಿಳಿದುಬಂದಿದೆ.

ಈ ಘಟನೆಯಲ್ಲಿ ವಾಹನ ಚಾಲಕ ವಿರೇಶ್​ ಎಂಬಾತನಿಗೆ ಎಡಗೈ, ಬಲಗಾಲು, ಮುಖ, ತಲೆ ಭಾಗದಲ್ಲಿ ಗಾಯಗಳಾಗಿದ್ದು, ಚಿತ್ರದುರ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ. ಧೃವ ಹಾಗೂ ಆತನ ಸ್ನೇಹಿತರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಜಗಳೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.