ETV Bharat / state

ದೇಶದಲ್ಲೇ ಮೊದಲ‌‌ ಬಾರಿಗೆ ದಾವಣಗೆರೆಯಲ್ಲಿ ಸಿದ್ಧವಾದ ಎಪಿಕ್ ಕಾರ್ಡ್: ಇದರ ವಿಶೇಷತೆ ಹೀಗಿದೆ!

ರಾಜ್ಯ ಚುನಾವಣೆ ಆಯೋಗ ಮತದಾರರ ಚೀಟಿಯಂತೆ ಎಪಿಕ್‌ ಕಾರ್ಡ್‌ ಎಂಬ ನೂತನ ಕಾರ್ಡ್ ವೊಂದನ್ನು ಮತದಾರರಿಗಾಗಿಯೇ ಸಿದ್ದಪಡಿಸಲಾಗಿದೆ. ಈ ಎಪಿಕ್‌ ಕಾರ್ಡ್ ಸೆಕ್ಯೂರಿಟಿ ಫೀಚರ್‌ಗಳನ್ನು ಹೊಂದಿದೆ. ಇದಲ್ಲದೇ ಅಂಧತ್ವದಿಂದ ಬಳಲುತ್ತಿರುವರಿಗೆ ಬ್ರೈಲಿ ಬರಹದ ಅಚ್ಚುಗಳುಳ್ಳ ಎಪಿಕ್‌ ಕಾರ್ಡ್‌ಗಳೂ ಸಿದ್ಧವಾಗಿದ್ದು, ಇಡೀ ದೇಶದಲ್ಲೇ ಮೊದಲ ಬಾರಿಗೆ ಸಿದ್ಧತೆ ಮಾಡಿಕೊಂಡ ಜಿಲ್ಲೆ ಎಂಬ ಖ್ಯಾತಿಗೆ ಬೆಣ್ಣೆ ನಗರಿ ದಾವಣಗೆರೆ ಸಾಕ್ಷಿಯಾಗಿದೆ.

epic card
ಎಪಿಕ್ ಕಾರ್ಡ್
author img

By

Published : Dec 19, 2020, 6:25 PM IST

Updated : Dec 19, 2020, 6:43 PM IST

ದಾವಣಗೆರೆ: ಗ್ರಾ.ಪಂ ಚುನಾವಣೆಯ ಮತದಾನಕ್ಕೆ‌‌ ಕೆಲವೇ ದಿನಗಳು ಮಾತ್ರ ಬಾಕಿ ಇದ್ದು, 18 ವರ್ಷ ಪೂರ್ಣಗೊಳಿಸಿ ಹೊಸದಾಗಿ ಮತದಾರರ‌ ಪಟ್ಟಿಗೆ ಸೇರ್ಪಡೆಯಾಗಲಿರುವ ಹೊಸ ಮತದಾರರಿಗೆ ಎಪಿಕ್‌ ಕಾರ್ಡ್‌ಗಳನ್ನು ಉಚಿತವಾಗಿ ನೀಡಲು ದಾವಣಗೆರೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಬಣ್ಣದ ಹೊಸ ಮಾದರಿಯ ಪಿವಿಸಿ ಎಪಿಕ್‌ ಕಾರ್ಡ್‌ಗಳನ್ನು ಈಗಾಗಲೇ ಜಾರಿಗೆ ತರಲಾಗಿದ್ದು, ವ್ಯಕ್ತಿಗತ ಮಾಹಿತಿಗಳನ್ನು ಟ್ಯಾಂಪರ್‌ ಮಾಡದಂತೆ ಈ ಕಾರ್ಡ್ 10 ಸೆಕ್ಯೂರಿಟಿ ಫೀಚರ್ಸ್ಸ್ ಗಳನ್ನು ಹೊಂದಿದೆಯಂತೆ. ಇದನ್ನು ಹೊರತು ಪಡಿಸಿದರೆ ದೃಷ್ಟಿಹೀನರಿಗೆಂದೇ ಜಿಲ್ಲಾಡಳಿತ ವಿಶೇಷ ಬಗೆಯ ಬ್ರೈಲಿ ಎಪಿಕ್‌ ಕಾರ್ಡ್‌ಗಳನ್ನು ಕೂಡ ಜಾರಿಗೆ ತಂದಿದ್ದು, ಅಧಿಕೃತವಾಗಿ ಈ‌ ಕಾರ್ಡ್ ಗಳನ್ನು ಜನವರಿ 25ರ ರಾಷ್ಟ್ರೀಯ ಮತದಾರರ ದಿನದಂದು ಜಿಲ್ಲಾಡಳಿತ ಬಿಡುಗಡೆ ಮಾಡಲಿದೆ. ಪ್ರಯೋಗಿಕವಾಗಿ ಈಗಾಗಲೇ ದಾವಣಗೆರೆ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರದರ್ಶಿಸಲಾಯಿತು.

ಜಿಲ್ಲಾಧಿಕಾರಿ ಮಹಾಂತೇಶ್​ ಬೀಳಗಿ

ವೋಟರ್​‌ ಐಡಿ ಕಾರ್ಡ್‌ಗಳ ಜಾಗದಲ್ಲಿ ಪಿವಿಸಿ ಎಪಿಕ್‌ ಕಾರ್ಡ್‌ಗಳು ಜಾರಿಗೆ

ಆಧುನಿಕತೆ ಹಾಗೂ ತಂತ್ರಜ್ಞಾನ ಬೆಳೆದಂತೆ ಅದನ್ನು ಪ್ರತಿಯೊಂದರಲ್ಲಿ ಅಳವಡಿಸುವ ಪ್ರಯತ್ನ ನಡೆಯುತ್ತದೆ. ಅದೇ ಮಾದರಿಯಲ್ಲಿ ಇದೀಗ ಹಳೆಯ ಲ್ಯಾಮಿನೇಟೆಡ್‌ ಎಪಿಕ್‌ ಕಾರ್ಡ್‌ ಆಂದ್ರೆ ವೋಟರ್​‌ ಐಡಿ ಕಾರ್ಡ್‌ಗಳ ಜಾಗದಲ್ಲಿ ಹೊಸ ತಂತ್ರಜ್ಞಾನ ಅಳವಡಿಸಿ ಪಿವಿಸಿ ಎಪಿಕ್‌ ಕಾರ್ಡ್‌ಗಳು ಜಾರಿಗೆ ತರಲಾಗಿದೆ. ಈ ಕಾರ್ಡ್‌ಗಳನ್ನು ಮೊದಲ ಬಾರಿಗೆ ಹೊಸದಾಗಿ ಮತದಾರರ ಪಟ್ಟಿಗೆಗೆ ಸೇರಿದ ನೂತನ ಮತದಾರರಿಗೆ ಮೊದಲು ಈ ಕಾರ್ಡ್ ನೀಡಲಾಗುತ್ತದೆ. ಈಗಾಗಲೇ ಐಡಿ ಕಾರ್ಡ್‌ ಹೊಂದಿರುವ 40 ವರ್ಷ ಮೇಲ್ಪಟ್ಟ ಮತದಾರರು 30 ರೂಪಾಯಿ ನೀಡಿ ಈ ಕಾರ್ಡ್ ಪಡೆದುಕೊಳ್ಳಬಹುದಾಗಿದೆ.

ಅಂಧರಿಗೆ ಅಲ್ಟ್ರಾ ವೈಲೆಟ್‌ ಡ್ರಾಪ್ಲೆಟ್‌ ಕಾರ್ಡ್‌

ಈ ಎಪಿಕ್ ಕಾರ್ಡ್​​​ಗಳೊಂದಿಗೆ ಅಂಧತ್ವದ ಸಮಸ್ಯೆಯಿಂದ ಬಳುತ್ತಿರುವರಿಗೆ ಬ್ರೈಲಿ ಲಿಪಿ ಹೊಂದಿರುವ ವಿಶೇಷವಾದ ಯುವಿ ಡ್ರಾಪ್ಲೆಟ್‌ ಅಂದ್ರೆ ಅಲ್ಟ್ರಾ ವೈಲೆಟ್‌ ಡ್ರಾಪ್ಲೆಟ್‌ ಕಾರ್ಡ್‌ ತಂತ್ರಜ್ಞಾನದ ಕಾರ್ಡ್‌ ಸಿದ್ಧಪಡಿಸಿದೆ. ದೇಶದಲ್ಲಿ ಮೊದಲ ಬಾರಿಗೆ ಈ ಕಾರ್ಡ್‌ಗಳ ಬಗ್ಗೆ ಕಾಳಜಿ ವಹಿಸಿ ಸಿದ್ಧಪಡಿಸಲಾಗಿದೆ. ಬೆಣ್ಣೆನಗರಿ ದಾವಣಗೆರೆಯಲ್ಲಿ. ಈ ಯೋಜನೆ ಸಾಕಾರಕ್ಕೆ ಚೀಪ್‌ ಎಲೆಕ್ಟ್ರೋಲ್‌ ಅಧಿಕಾರಿ ಅವರ ಸಹಕಾರವೂ ಕಾರಣ. ಈ ಕಾರ್ಡ್‌ನ್ನು ಸಿದ್ಧಪಡಿಸಿದ್ದು, ದೇಶದಲ್ಲೆ ಇದು ಮೊದಲು. ಇಂತಹ ಕಾರ್ಡ್​ ಸಿದ್ಧಪಡಿಸಿದ ಖ್ಯಾತಿಗೆ ದಾವಣಗೆರೆ ಪಾತ್ರವಾಗಿದೆ. ಎಪಿಕ್ ಕಾರ್ಡ್ ದಾವಣಗೆರೆ ಮೂಲದ ಗುಂಡಾಲ್ ಏಜೆನ್ಸಿಯವರು ಸಿದ್ದಪಡಿಸದ್ದು, ಈ ಕಾರ್ಡ್‌ ಅಂಧ ಮತದಾರರಿಗೆ ಅನುಕೂಲವಾಗಲಿದೆ.

ವೋಟರ್​​‌ ಐಡಿ ಕಾರ್ಡ್‌ ದುರ್ಬಳಕೆಗೆ ಕಡಿವಾಣ ಬೀಳಲಿದೆಯೇ..?

ಚುನಾವಣೆಗಳಲ್ಲಿ ವೋಟರ್‌ ಐಡಿ ಕಾರ್ಡ್‌ ಗಳ ದುರ್ಬಳಕೆ ಆಗುವುದನ್ನು ತಡೆಯಬಹುದಾಗಿದೆ. ವ್ಯಕ್ತಿಗತ ಮಾಹಿತಿಗಳನ್ನು ಟ್ಯಾಂಪರ್‌ ಮಾಡದಂತೆ ಈ ಕಾರ್ಡ್ 10 ಸೆಕ್ಯೂರಿಟಿ ಫೀಚರ್ಸ್ಸ್ ಗಳನ್ನು ಹೊಂದಿದೆಯಂತೆ. ತಂತ್ರಜ್ಞಾನದ ಸದ್ಬಳಕೆಯಿಂದ ಸೆಕ್ಯೂರ್ಡ್‌ ಪಿವಿಸಿ ಹಾಗೂ ಅಂಧರಿಗೆ ಯುವಿ ಡ್ರಾಪ್ಲೆಟ್‌ ಮಾದರಿಯ ವೋಟರ್​‌ ಐಡಿ ಕಾರ್ಡ್‌ಗಳು ಬಳಕೆಗೆ ಲಭ್ಯವಾಗಲಿವೆ. ವೋಟರ್​‌ ಐಡಿ ಕಾರ್ಡ್‌ ದುರ್ಬಳಕೆ ಇನ್ನಾದ್ರೂ ಕಡಿಮೆಯಾಗುತ್ತಾ ಎಂಬುದನ್ನು ಕಾದು ನೋಡಬೇಕು.

ಓದಿ...'ರೇಣುಕಾಚಾರ್ಯ ನರ್ಸ್ ವಿಜಯಲಕ್ಷ್ಮಿ ಎಂಬುವರಿಗೆ ಮಾಡ್ಬಾರ್ದು ಮಾಡಿದವನು'

Last Updated : Dec 19, 2020, 6:43 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.