ದಾವಣಗೆರೆ: ಕೊರೊನೊ ವೈರಸ್ ಸೋಂಕು ಹರಡದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಜಿಲ್ಲಾಡಳಿತದಿಂದ ನಗರದಲ್ಲಿ ಔಷಧ ಸಿಂಪಡಣೆ (ಫಾಗಿಂಗ್) ನಡೆಯಿತು. ಸ್ವತಃ ಜಿಲ್ಲಾಧಿಕಾರಿಗಳೇ ಮುಂದಾಳತ್ವ ವಹಿಸಿದ್ದರು.
ನಗರದಲ್ಲಿ ಸ್ವಚ್ಛತೆ ಸೋಂಕು ಹರಡದಂತೆ ತಡೆಯಲು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಮುಂದಾಳತ್ವದಲ್ಲಿ ಔಷಧ ಸಿಂಪಡಣೆ ನಡೆಯಿತು. ಡಿಸಿಗೆ ಜಿಲ್ಲಾ ಪೊಲೀಸ್ ರಕ್ಷಣಾಧಿಕಾರಿ ಹನುಮಂತರಾಯ, ಆರೋಗ್ಯ ಇಲಾಖೆ ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು ಸಾಥ್ ನೀಡಿದರು.
ನಗರದ 45 ವಾರ್ಡ್ಗಳಲ್ಲಿಯೂ ಫಾಗಿಂಗ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ.