ದಾವಣಗೆರೆ: ಹೊಸ ನಾಯಕನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಊಟ ಮಾಡುವ ಅಕ್ಕಿ ಹಾಗೂ ಅನ್ನದಲ್ಲಿ ಹುಳುಗಳು ಕಂಡು ಬಂದಿವೆ. ಈ ಹಿನ್ನೆಲೆ ವಿದ್ಯಾರ್ಥಿಗಳು, ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ರು.
ದಾವಣಗೆರೆ ತಾಲೂಕು ಹೊಸನಾಯಕನಹಳ್ಳಿ ಗ್ರಾಮದ ಹೊಸ ನಾಯಕನಹಳ್ಳಿ ಗ್ರಾಮದ ಸರ್ಕಾರಿ ಶಾಲೆಯ ಮಧ್ಯಾಹ್ನದ ಊಟದಲ್ಲಿ ಹುಳುಗಳು ಕಂಡು ಬಂದಿವೆ. ಮಕ್ಕಳು ಈ ವಿಷಯವನ್ನು ಪೋಷಕರಿಗೆ ತಿಳಿಸಿದ್ದಾರೆ.
ಬಳಿಕ ಶಾಲೆಗೆ ಆಗಮಿಸಿದ ಪೋಷಕರು ಕೋಪಗೊಂಡು ಅಡಿಗೆ ಬಟ್ಟರನ್ನು ಕೆಲಸದಿಂದ ಅಮಾನತು ಮಾಡುವಂತೆ ಒತ್ತಾಯಿಸಿದ್ದಾರೆ. ದಿನನಿತ್ಯ ಊಟದಲ್ಲಿ ಹುಳುಗಳು, ಸೊಳ್ಳೆಗಳು ಸಿಗುತ್ತವೆ ಎಂದು ವಿದ್ಯಾರ್ಥಿಗಳು ಅಳಲು ತೋಡಿಕೊಂಡಿದ್ದಾರೆ.