ದಾವಣಗೆರೆ : ಗ್ರಾಪಂ ಅಧ್ಯಕ್ಷನ ಕುಮ್ಮಕ್ಕಿನಿಂದ ದಲಿತ ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಆರೋಪ ಜಿಲ್ಲೆಯ ಹೊನ್ನಾಳಿ ತಾಲೂಕಿನ ತರಗನಹಳ್ಳಿ ಗ್ರಾಮದಲ್ಲಿ ಕೇಳಿ ಬಂದಿದೆ. ಹಲ್ಲೆಯಲ್ಲಿ ಒಂದೇ ಕುಟುಂಬದ ಐವರು ಗಾಯಳಾಗಿದ್ದು, ಮೂರು ಜನ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆ ಹಾಗೂ ಇಬ್ಬರನ್ನು ಹೊನ್ನಾಳಿ ತಾಲೂಕು ಆಸ್ಪತ್ರೆಗೆ ಚಿಕಿತ್ಸೆಗಾಗಿ ರವಾನಿಸಲಾಗಿದೆ. ಪಂಚಾಯತ್ ಅಧ್ಯಕ್ಷ ಟಿ ಜಿ ರಮೇಶ್ಗೌಡ ಕುಮ್ಮಕ್ಕಿನಿಂದ ಆರು ಜನ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಘಟನೆಯಲ್ಲಿ ಯಜಮಾನ ಶರಣಪ್ಪ (56) ಪತ್ನಿ ರತ್ನಮ್ಮ (52) ಪುತ್ರ ನಾಗರಾಜ್ (27) ಶರಣಪ್ಪನ ತಮ್ಮನ ಮಕ್ಕಳಾದ ಪ್ರಭಾಕರ್ (24) ಗಣೇಶ್ (26) ತೀವ್ರ ಗಾಯಗೊಂಡಿದ್ದಾರೆ. ಜಮೀನಿನ ವಿಚಾರವಾಗಿ ಜಗಳವಾಗಿದೆ ಎನ್ನಲಾಗಿದ್ದು, ಗ್ರಾಪಂ ಅಧ್ಯಕ್ಷ ರಮೇಶ್ ಗೌಡನ ಕುಮ್ಮಕ್ಕಿನಿಂದ ಗ್ರಾಪಂ ಉಪಾಧ್ಯಕ್ಷೆ ಚಂದ್ರಮ್ಮ, ಪತಿ ರಾಜಪ್ಪ ಸಂಬಂಧಿಕರಾದ ಚೌಡಪ್ಪ, ಚಂದ್ರಪ್ಪ, ವಿಶ್ವ ಹಾಗೂ ಯಶವಂತ ಸೇರಿ ಹಲ್ಲೆ ನಡೆಸಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಹೊನ್ನಾಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಪರಸ್ಪರ ಎರಡು ಕಡೆಯಿಂದಲೂ ದೂರು ದಾಖಲಿಸಿಕೊಂಡಿದ್ದಾರೆ.
ಓದಿ: ರೋಗಿಯ ಪುತ್ರನಿಂದ ವೈದ್ಯನ ಮೇಲೆ ಏಕಾಏಕಿ ಹಲ್ಲೆ ಆರೋಪ ; ಮುಂದುವರೆದ ತನಿಖೆ!