ದಾವಣಗೆರೆ: ಮನೆಗೆ ಆಧಾರವಾಗಿದ್ದ ಹಿರಿಯ ಮಗನ ಎರಡೂ ಕಿಡ್ನಿ ವೈಫಲ್ಯಗೊಂಡಿದ್ದರಿಂದ ಈ ಕುಟುಂಬಕ್ಕೆ ದಿಕ್ಕುತೋಚದಂತಾಗಿದೆ. ತಾಲೂಕಿನ ಮಾಳಗೊಂಡನಹಳ್ಳಿ (ಮಾಗನಹಳ್ಳಿ)ಯ ನಿವಾಸಿ ಪರಸಪ್ಪ ಹಾಗೂ ಗೌರಮ್ಮ ಇವರ ಕುಟುಂಬ ಈಗ ಕಣ್ಣೀರಲ್ಲಿ ಕೈತೊಳೆಯುತ್ತಿದೆ.
ಕುಟುಂಬದ ಹಿರಿಯ ಮಗ ಕೋರಿಯರ್ ಬಾಯ್ ಕೆಲಸ ಮಾಡುತ್ತಾ ಕುಟುಂಬ ಸಾಕುತ್ತಿದ್ದ. ಆದರೆ, ಇದೀಗ ಆತನ ಎರಡು ಕಿಡ್ನಿಗಳು ವೈಫಲ್ಯವಾಗಿವೆ. ಇದಕ್ಕೂ ಮುನ್ನ ಮತ್ತೊಬ್ಬ ಮಗ ಜಾಂಡೀಸ್ಗೆ ಬಲಿಯಾಗಿದ್ದ. ಹೀಗಾಗಿ ಈಗ ಕುಟುಂಬಕ್ಕೆ ದಿಕ್ಕು ಕಾಣದಂತಾಗಿದೆ. ಕಿಡ್ನಿ ವೈಫಲ್ಯದಿಂದ ಮನನೊಂದಿರುವ ತಾಯಿ ತನ್ನ ಕಿಡ್ನಿಯನ್ನೇ ಮಗನಿಗೆ ನೀಡಲು ಮುಂದಾಗಿದ್ದಾಳೆ. ಆದರೆ, ಚಿಕಿತ್ಸೆಗೆ ಹಣವಿಲ್ಲದೆ ಪರದಾಡುತ್ತಿದ್ದಾರೆ.
ಕೆಲವು ದಿನಗಳ ಹಿಂದೆ ಕಲ್ಲೇಶ್ಗೆ ಹೊಟ್ಟೆ ನೋವು ಎದುರಾದಾಗ ಮಣಿಪಾಲ್ ಆಸ್ಪತ್ರೆಯಲ್ಲಿ ತೋರಿಸಿದ್ದಾರೆ. ಅಲ್ಲಿ ವೈದ್ಯರು ಪರಿಶೀಲನೆ ನಡೆಸಿ ಎರಡೂ ಕಿಡ್ನಿ ಫೇಲ್ ಆಗಿರುವುದಾಗಿ ತಿಳಿಸಿದ್ದಾರೆ. ಹೀಗಾಗಿ, ಮಗನ ಪರಿಸ್ಥಿತಿಗೆ ಮರುಗಿರುವ ತಾಯಿ ತನ್ನ ಕಿಡ್ನಿಗಳನ್ನು ದಾನವಾಗಿ ನೀಡಲು ಮುಂದೆ ಬಂದಿದ್ದು, ಇಲ್ಲಿಯವರೆಗೆ ಸುಮಾರು 10 ಲಕ್ಷ ಖರ್ಚು ಮಾಡಿದ್ದಾರೆ. ಆದರೆ, ಚಿಕಿತ್ಸೆಗೆ ಹಣ ಹೊಂದಿಸಲಾಗದೆ ಇದೀಗ ಸಹಾಯದ ಮೊರೆ ಹೋಗಿದ್ದಾರೆ. ಈ ಕುಟುಂಬಕ್ಕೆ ಸಹೃದಯರ ಸಹಾಯ ಬೇಕಿದ್ದು, ಸಹಾಯ ಮಾಡಬಯಸುವವರು 9845601182 ಸಂಖ್ಯೆಗೆ ಗೂಗಲ್ ಪೇ ಮಾಡಬಹುದಾಗಿದೆ.
ಓದಿ: ಸಿಡಿ ಪ್ರಕರಣ.. ಮಾಜಿ ಸಚಿವ ರಮೇಶ್ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲು