ದಾವಣಗೆರೆ: ಧಾರವಾಡದಲ್ಲಿ ಇತ್ತೀಚೆಗೆ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟ 9 ಮಹಿಳೆಯರ ಚಿನ್ನಾಭರಣ ಮತ್ತು ಕೆಲ ವಸ್ತುಗಳನ್ನು ಆಯಾ ಕುಟುಂಬಸ್ಥರಿಗೆ ಒಪ್ಪಿಸಲಾಗಿದ್ದು, ಕುಟುಂಬಸ್ಥರು ಆ ಆಭರಣಗಳನ್ನು ದೇವಾಲಯಕ್ಕೆ ನೀಡಿದ್ದಾರೆ.
ಎಲ್ಲ ವಸ್ತುಗಳನ್ನು ಸ್ವೀಕರಿಸಿದ ಮೃತರ ಸಂಬಂಧಿಕರು ಭಾವುಕರಾಗಿ ಚಿನ್ನಾಭರಣಗಳನ್ನು ದಾವಣಗೆರೆ ನಗರದ ದೊಡ್ಡಪೇಟೆಯ ಬಸವೇಶ್ವರ ಮತ್ತು ದಾನಮ್ಮ ದೇವಾಲಯದಲ್ಲಿ ಪೊಲೀಸರು ಹಾಗೂ ದೇವಾಲಯದ ಟ್ರಸ್ಟಿಗಳ ಸಮ್ಮುಖದಲ್ಲಿ ದೇಣಿಗೆಯಾಗಿ ನೀಡಿದರು. ಮೃತಪಟ್ಟವರ ವಾಚ್‌ಗಳು, ಬಂಗಾರದ ಆಭರಣಗಳು, ಉಂಗುರ, ಚೈನ್ಗಳು, ಅರ್ಧಕ್ಕೆ ಕಟ್ ಆಗಿದ್ದ ಕಿವಿಯೋಲೆಗಳನ್ನು ಕುಟುಂಬಸ್ಥರು ದೇವಾಲಯಕ್ಕೆ ನೀಡಿದರು.
ಇನ್ನು ರಾಜೇಶ್ವರಿ ಬಂದಮ್ಮನವರ್ ಅವರ ಮಾಂಗಲ್ಯ ಸರವನ್ನು ಅಪಘಾತವಾದ ದಿನವೇ ಕೊಟ್ಟು ಕಳುಹಿಸಲಾಗಿತ್ತು. ಆದರೆ ವಾಪಸ್ ತರಿಸಿ ಪೊಲೀಸರ ಸಮ್ಮುಖದಲ್ಲಿ ನೀಡಲಾಯಿತು.