ETV Bharat / state

ಸಿಂಗಲ್ ಫೇಸ್​ ಕರೆಂಟ್ ಕಣ್ಣಾಮುಚ್ಚಾಲೆಗೆ ಒಣಗುತ್ತಿದೆ ಬೆಳೆ: ಮಂಡಲೂರಿನ ರೈತರ ಬವಣೆ - water pumping motor are burned by low voltage

ದಾವಣಗೆರೆ ತಾಲೂಕಿನ ಮಂಡಲೂರು ಗ್ರಾಮದಲ್ಲಿ ವಿದ್ಯುತ್​ ವೋಲ್ಟೇಜ್​​ ಕಡಿಮೆಯಾಗಿ ಬೋರ್​ವೆಲ್​ಗೆ ಅಳವಡಿಸಿದ್ದ ಮೋಟಾರುಗಳು ಸುಟ್ಟು ಹೋಗಿವೆ. ಬೆಳೆಗಳಿಗೆ ಹಾಯಿಸಲು ನೀರಲ್ಲಿದೇ ರೈತರು ಹೈರಾಣಾಗಿದ್ದಾರೆ.

electricity-from-single-phase-farmers-of-mandalur-are-in-trouble
ಸಿಂಗಲ್ ಫೇಸ್​ನಿಂದ ವಿದ್ಯುತ್ ಕಣ್ಣಾಮುಚ್ಚಾಲೆ, ಒಣಗುತ್ತಿವೆ ಬೆಳೆಗಳು, ಮಂಡಲೂರಿನ ರೈತರು ಬದುಕು ಅತಂತ್ರ…!
author img

By

Published : Feb 20, 2023, 10:02 PM IST

Updated : Feb 20, 2023, 10:58 PM IST

ಸಿಂಗಲ್ ಫೇಸ್​ ಕರೆಂಟ್ ಕಣ್ಣಾಮುಚ್ಚಾಲೆಗೆ ಒಣಗುತ್ತಿದೆ ಬೆಳೆ: ಮಂಡಲೂರಿನ ರೈತರ ಬವಣೆ

ದಾವಣಗೆರೆ: ರೈತರು ಒಣ ಭೂಮಿಯಲ್ಲಿ ಬೆಳೆಯುವ ಬೆಳೆಗಳಿಗೆ ಭರಪೂರ ನೀರು ಹಾಯಿಸಲು ಮೋಟರ್ ಜೊತೆಗೆ ವಿದ್ಯುತ್ ಕೂಡ ಅತ್ಯವಶ್ಯಕ. ಆದರೆ ದಾವಣಗೆರೆ ತಾಲೂಕಿನ ಮಂಡಲೂರು ಗ್ರಾಮದಲ್ಲಿ ವಿದ್ಯುತ್ ವೋಲ್ಟೇಜ್​ ಕಡಿಮೆ ಆಗುತ್ತಿದ್ದು, ಸಿಂಗಲ್ ಪೇಸ್​ನಿಂದಾಗಿ ನೂರಾರು ಮೋಟರ್​ಗಳು ಹಾಗೂ ವಿದ್ಯುತ್ ಟೀಸಿಗಳು ಸುಟ್ಟು ಕರಕಲಾಗಿವೆ. ನೀರು ಹಾಯಿಸಲಾಗದೆ ಬೆಳೆಗಳು ಒಣಗುತ್ತಿದ್ದು ರೈತರು ಕಂಗಾಲಾಗಿದ್ದಾರೆ.

ಮಂಡಲೂರು ಬಡಪೀಡಿತ ಗ್ರಾಮ. ರೈತರು ಕೊಳವೆ ಬಾವಿಯನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ. ಆದರೆ ಇಲ್ಲಿ ವಿದ್ಯುತ್ ಕಣ್ಣಾಮುಚ್ಚಾಲೆ ಆಡುತ್ತಿದೆ. ಕಳೆದ ವರ್ಷ ಉತ್ತಮ ಮಳೆಯಾಗಿದ್ದು ಈ ಭಾಗದ ನೂರಾರು ಬೋರ್​ವೆಲ್​ಗಳಲ್ಲಿ ಒಳ್ಳೆಯ ನೀರು ದೊರೆಯುತ್ತಿದೆ.

ಮಂಡಲೂರು ಗ್ರಾಮ ಆನಗೋಡು ವಿದ್ಯುತ್ ಸರಬರಾಜು ಕೇಂದ್ರದ ಕಟ್ಟಕಡೆಯ ಹಳ್ಳಿಯಾಗಿದೆ. ಇಲ್ಲಿನ ಕೆಲವು ಅಧಿಕಾರಿಗಳು ನೀರ್ಥಡಿ ಹಾಗೂ ಮಂಡಲೂರು ಗ್ರಾಮಕ್ಕೆ ಐದು ತಾಸು ವಿದ್ಯುತ್ ಕೊಡುವುದಾಗಿ ಹೇಳಿ ನೂತನ ಲೈನ್​ ಹಾಕಲು ಮುಂದಾಗಿದ್ದರು. ಇದೀಗ ಕಾಮಗಾರಿ ನಡೆಯುತ್ತಿದೆ. ತಿಂಗಳುಗಳೇ ಕಳೆದರೂ ಮಂಡಲೂರಿಗೆ 250ಕ್ಕೂ ಹೆಚ್ಚು ವೋಲ್ಟೇಜ್ ನೀಡುವ ಬದಲು ಕೇವಲ 150 ವೋಲ್ಟೇಜ್​ ವಿದ್ಯುತ್ ನೀಡುತ್ತಿದ್ದಾರೆ.

ರೈತ ತಿಮ್ಮನ ಗೌಡ ಮಾತನಾಡಿ, "ಬೆಸ್ಕಾಂ ಅಧಿಕಾರಿಗಳು ಹೊಸ ಲೈನ್ ಮಾಡುವ ಮೂಲಕ ಹೆಬ್ಬಾಳು ಹಾಗೂ ಆನಗೋಡು ಮಧ್ಯೆ ಬರುವ 40 ಟೀಸಿಗಳಿಗೆ ಲೈನ್ ಎಳೆದುಕೊಟ್ಟ ಬೆನ್ನಲ್ಲೇ ನಮ್ಮ ಗ್ರಾಮಕ್ಕೆ ವೋಲ್ಟೇಜ್​ ಡ್ರಾಪ್ ಆಗ್ತಿದೆ. ನಮ್ಮ ಗ್ರಾಮದಲ್ಲಿ ಸರಿಯಾದ ವಿದ್ಯುತ್ ಸಿಗ್ತಿಲ್ಲ, ಲೋ ವೋಲ್ಟೇಜ್​ ಇರುವುದರಿಂದ ಗ್ರಾಮದಲ್ಲಿ 300 ರಿಂದ 400 ಮೋಟರ್​ಗಳು ಸುಟ್ಟಿವೆ. ದಿನದಲ್ಲಿ 5 ತಾಸು ವಿದ್ಯುತ್ ಕೊಡಬೇಕು. ಆದರೆ ವಿದ್ಯುತ್ ಮಾತ್ರ ಮರೀಚಿಕೆ. ಜಮೀನುಗಳಿಗೆ ನೀರು ಹಾಯಿಸಲಾಗದೆ ಬೆಳೆಗಳು ಒಣಗುತ್ತಿವೆ. ಬೆಸ್ಕಾಂ ಅಧಿಕಾರಿಗಳು ಸರಿಪಡಿಸದಿದ್ದರೆ ವಿಷ ಕುಡಿಯುವ ಪರಿಸ್ಥಿತಿ ನಿರ್ಮಾಣ ಆಗಲಿದೆ" ಎಂದರು.

ಬೆಸ್ಕಾಂ ಎಇಇ ಪ್ರತಿಕ್ರಿಯೆ: ಬೆಸ್ಕಾಂನ ಎಇಇ ತೀರ್ಥೇಶ್​ ದೂರವಾಣಿಯಲ್ಲಿ ಮಾತನಾಡಿ, "ಮಂಡಲೂರು ಗ್ರಾಮದಲ್ಲಿ ವಿದ್ಯುತ್ ಹೆವಿ ಲೋಡ್ ಆಗಿದ್ದು, ನೂರಾರು ಮೋಟರ್​ಗಳನ್ನು ಬಳಕೆ ಮಾಡುವುದರಿಂದ ಸಮಸ್ಯೆಯಾಗಿದೆ. ಆ ಗ್ರಾಮದಲ್ಲಿ ಮೊದಲಿಗೆ 40 ವಿದ್ಯುತ್ ಲೋಡ್ ಇದ್ದದ್ದು ಇದೀಗ 80 ಲೋಡ್ ಆಗಿದೆ. ಹೊಸ ಲೈನ್ ಎಳೆಯುವ ಮೂಲಕ ಒಂದು ವಾರದಲ್ಲಿ ಸಮಸ್ಯೆ ಬಗೆಹರಿಸುತ್ತೇವೆ" ಎಂದು ಭರವಸೆ ನೀಡಿದರು.

ಇದನ್ನೂ ಓದಿ: ಮುಳ್ಳಿನ ಗದ್ದಿಗೆ ಉತ್ಸವಕ್ಕೆ ಹರಿದು ಬಂದ ಭಕ್ತಸಾಗರ.. ಆತಂಕ ಸೃಷ್ಟಿಸಿದೆ ಕಾರ್ಣಿಕ ಭವಿಷ್ಯ

Last Updated : Feb 20, 2023, 10:58 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.