ದಾವಣಗೆರೆ: ಪ್ರವಿತ್ರ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಬಾಂಧವರು ಮೆರವಣಿಗೆ (ಜುಲೂಸ್) ಮೂಲಕ ಅದ್ಧೂರಿಯಾಗಿ ಆಚರಿಸಿದರು. ನಗರದ ಆಖ್ತರ್ ರಜಾ ವೃತ್ತದಿಂದ ಆರಂಭವಾದ ಮಿಲಾದ್ ಮೆರವಣಿಗೆ ಅಹ್ಮದ್ ನಗರ, ಕೆಆರ್ ಮಾರುಕಟ್ಟೆ, ಮಂಡಿಪೇಟೆ, ಗಡಿಯಾರ ಕಂಭ ತಲುಪಿ ಪಿಬಿ ರಸ್ತೆ ಸಾಗುವ ಮೂಲಕ ಗಾಂಧಿ ವೃಗ್ತ ಸಾಗಿ ಮಿಲಾದ್ ಮೈದಾನದಲ್ಲಿ ಕೊನೆಗೊಂಡಿತು.
ಮಿಲಾದ್ ಮೆರವಣಿಗೆಯಲ್ಲಿ ಲಕ್ಷಾಂತರ ಮುಸ್ಲಿಂ ಬಾಂಧವರು ಭಾಗಿಯಾಗಿ ಪೈಗಂಬರ್ ಅವರನ್ನು ನೆನೆಯುತ್ತ ಭಕ್ತಿ ಗೀತೆಗಳನ್ನು ಹಾಡುತ್ತ ಸಾಗಿದರು. ಈ ಬಾರಿ ಅಂಜುಮನ್ ಏ ಇಸ್ಲಾಂ ಕಮಿಟಿಯಿಂದ ಡಿಜೆ ತರದಂತೆ ಮುಸ್ಲಿಂರಿಗೆ ತಾಕೀತು ಮಾಡಲಾಗಿತ್ತು. ಈ ಬಾರಿ ಡಿಜೆ ಇಲ್ಲದೆ ಯುವಕರಿಗೆ ಡ್ಯಾನ್ಸ್ ಮಾಡಲು ಅವಕಾಶ ಸಿಗಲಿಲ್ಲ. ಅದರ ಬದಲಾಗಿ ಮೈಕ್ ಸೆಟ್ ಹಾಕಿ, ಭಕ್ತಿ ಗೀತೆಗಳನ್ನು ಹಾಡುತ್ತ ಶಾಂತಿಯಿಂದ ಮುಸ್ಲಿಂರು ಮೆರವಣಿಗೆ ನಡೆಸಿದರು.
ಮೆರವಣಿಗೆಯಲ್ಲಿ ಮೆಕ್ಕಾ ಮದೀನಾ ಮಾದರಿಯ ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು. ಮುಂಜಾಗ್ರತವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದ್ದು, ಶಾಂತಿಯುತವಾಗಿ ಮಿಲಾದ್ ಹಬ್ಬ ಯಶಸ್ವಿಯಾಯಿತು.
ಇದನ್ನೂ ಓದಿ: ಈದ್ ಮಿಲಾದ್ ಮೆರವಣಿಗೆ: ಹೈಟೆನ್ಷನ್ ತಂತಿ ತಗುಲಿ ಮೂವರು ಮಕ್ಕಳು ಸೇರಿ ಆರು ಜನರ ಸಾವು