ಹರಿಹರ : ವಿಶ್ವದಲ್ಲಿ ಕೊರೊನಾ ಹೆಚ್ಚುತ್ತಿದ್ದು, ಇದರ ನಡವೆಯೇ ಶಿಕ್ಷಣ ಇಲಾಖೆಯು ವಿದ್ಯಾಗಮನ ಕಾರ್ಯಕ್ರಮವನ್ನು ಸ್ಥಗಿತಗೊಳಿಸಿ ಪ್ರತಿಯೊಬ್ಬ ಶಿಕ್ಷಕನನ್ನು ಪರೀಕ್ಷೆಗೆ ಒಳಪಡಿಸಲಾಗುತ್ತಿದೆ ಎಂದು ಡಿಡಿಪಿಐ ಸಿ.ಆರ್ .ಪರಮೇಶ್ವರಪ್ಪ ಹೇಳಿದರು.
ಡಿಡಿಪಿಐ ಕಚೇರಿಯಲ್ಲಿ ಲಿಪಿಕಾ ನೌಕರರು, ವಾಹನ ಚಾಲಕರು ಮತ್ತು ಡಿ ಗ್ರೂಪ್ ನೌಕರರ ಸಂಘದಿಂದ ಹಮ್ಮಿಕೊಂಡಿದ್ದ ಕೋವಿಡ್ ಪರೀಕ್ಷೆ ಹಾಗೂ ಮಾಹಿತಿ ನೀಡುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಸ್ವಯಂ ಪ್ರೇರಣೆಯಿಂದ ಜಿಲ್ಲೆಯಲ್ಲಿ ಎಲ್ಲ ಶಿಕ್ಷಕರು ಹಾಗೂ ಇತರ ನೌಕರರು ಮತ್ತು ಸಾರ್ವಜನಿಕರು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 126 ಶಿಕ್ಷಕರು ಕೋವಿಡ್ ಸೋಂಕಿತರಾಗಿದ್ದು, 97 ಶಿಕ್ಷಕರು ಗುಣಮುಖರಾಗಿದ್ದಾರೆ. 21 ಶಿಕ್ಷಕರು ಚಿಕಿತ್ಸೆ ಪಡೆಯುತ್ತಿದ್ದು, 8 ಜನರು ಸಾವನ್ನಪ್ಪಿದ್ದಾರೆ. ಆರೋಗ್ಯ ಇಲಾಖೆ ಶಿಕ್ಷರನ್ನು ಪರೀಕ್ಷಿಸಲು ಮುಂದಾಗಿದ್ದು, ಇಲಾಖೆ ಹಾಗೂ ಕಾರ್ಯಕ್ರಮ ಆಯೋಜನೆ ಮಾಡಿದ ವಿವಿಧ ಸಂಘಗಳ ಮುಖ್ಯಸ್ಥರಿಗೂ ಪರಮೇಶ್ವರಪ್ಪ ಅವರು ಧನ್ಯವಾದ ಅರ್ಪಿಸಿದರು.
ಬಳಿಕ ಜಿಲ್ಲಾ ಆರೋಗ್ಯ ಮೇಲ್ವಿಚಾರಕರಾದ ಎಂ.ವಿ ಹೊರಕೇರಿ ಮಾತನಾಡಿ, ಪ್ರತಿಯೊಬ್ಬರು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ, ಪರೀಕ್ಷೆ ಮಾಡಿಸಿಕೊಂಡ ಸಮಸ್ಯೆಗೆ ಪರಿಹಾರ ಸಿಗಲಿದೆ. ಸೋಂಕನ್ನು ತಡೆಗಟ್ಟಲು ಪ್ರತಿಯೊಬ್ಬರು ಮಾಸ್ಕ್ ಧರಿಸಬೇಕು. ಅನಾವಶ್ಯವಾಗಿ ಸುತ್ತಾಡುವುದನ್ನು ಕಡಿಮ ಮಾಡಬೇಕು ಎಂದರು.
ಈ ವೇಳೆ ಗೌರವಾಧ್ಯಕ್ಷ ಗಿರಿಧರ, ಜಾವಳ್ಳಿ, ತಿಪ್ಪೇಸ್ವಾಮಿ, ರಾಮಚಂದ್ರ, ಗೋವಿಂದರಾಜು ಹಾಗೂ ಮತ್ತಿತರರಿದ್ದರು.