ದಾವಣಗೆರೆ: ಇಲ್ಲಿನ ದುರ್ಗಮ್ಮದೇವಿ ಜಾತ್ರೆ ಹಿನ್ನೆಲೆಯಲ್ಲಿ ಜಗಳೂರು ಶಾಸಕ ಎಸ್. ವಿ. ರಾಮಚಂದ್ರರವರು ಉರುಳು ಸೇವೆ ಮಾಡಿದರು. ಸ್ವಲ್ಪ ಹೊತ್ತಿನಲ್ಲೇ ಶಾಸಕರು ಓಡಾಡಿದ ರಸ್ತೆಗಳು ರಕ್ತಸಿಕ್ತವಾದವು. ಅದಕ್ಕೆ ಕಾರಣ ಕುರಿಗಳ ಬಲಿ.
ಪ್ರತಿವರ್ಷದಂತೆ ಈ ವರ್ಷವೂ ಕೂಡ ನಗರ ದೇವತೆ ಶ್ರೀ ದುರ್ಗಾಂಬಿಕಾ ದೇವಸ್ಥಾನದ ಸುತ್ತ ಶಾಸಕ ರಾಮಚಂದ್ರ ಸೇರಿದಂತೆ ಸಾವಿರಾರು ಜನರು ಉರುಳು ಸೇವೆ ಸಲ್ಲಿಸಿದರು. ಇನ್ನು ಜಾತ್ರೆಯಲ್ಲಿ ಐವತ್ತು ಸಾವಿರಕ್ಕೂ ಹೆಚ್ಚು ಕುರಿಗಳನ್ನು ಬಲಿ ಕೊಡಲಾಗಿದೆ.
ಜಾತ್ರೆಯಲ್ಲಿ ಕುರಿಗಳ ಬಲಿ ನೀಡಿದ ಹಿನ್ನೆಲೆಯಲ್ಲಿ ನಗರದ ರಸ್ತೆಗಳು ರಕ್ತಮಯವಾಗಿದ್ದವು. ಲಕ್ಷಾಂತರ ಮಂದಿ ಜಾತ್ರೆಗೆ ಸಾಕ್ಷಿಯಾಗಿದ್ದಾರೆ.