ETV Bharat / state

ಶಾಮನೂರು ಶಿವಶಂಕರಪ್ಪನವರ ಒಟ್ಟು ಆಸ್ತಿ ಎಷ್ಟು ಗೊತ್ತೇ?

ಶಾಮನೂರು ಶಿವಶಂಕರಪ್ಪ ಅವರು ತಮ್ಮ ಆಸ್ತಿಯ ವಿವರ ಘೋಷಣೆ ಮಾಡಿಕೊಂಡಿದ್ದಾರೆ.

ಕಾಂಗ್ರೆಸ್ ಅಭ್ಯರ್ಥಿ ಡಾ ಶಾಮನೂರು ಶಿವಶಂಕರಪ್ಪ

author img

By

Published : Apr 17, 2023, 11:00 PM IST

ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಹಾಗು ಹಾಲಿ ಕಾಂಗ್ರೆಸ್ ಹಿರಿಯ ಶಾಸಕ ಶಾಮನೂರು ಶಿವಶಂಕರಪ್ಪನವರಿಂದು ಉಮೇದುವಾರಿಕೆ ಸಲ್ಲಿಕೆ ಮಾಡಿದ್ದು, ತಮ್ಮ ಆಸ್ತಿ ವಿವರ ಘೋಷಣೆ ಮಾಡಿದ್ದಾರೆ. ಒಟ್ಟು 293.83 ಕೋಟಿ ರೂಪಾಯಿ ಒಟ್ಟು ಆಸ್ತಿ ಇದ್ದು, 17.74 ಕೋಟಿ ರೂ. ಸಾಲ ಇದೆ ಎಂದು ಅಫಿಡವಿಟ್‌ನಲ್ಲಿ ನಮೂದಿಸಿದ್ದಾರೆ. 8.01 ಲಕ್ಷ ರೂ ಕೈಯಲ್ಲಿರುವ ನಗದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 3ನೇ ಪಟ್ಟಿಯಲ್ಲಿ 3 ಕುಟುಂಬಕ್ಕೆ ಬಿಜೆಪಿ ಟಿಕೆಟ್: ಶೆಟ್ಟರ್ ಜಾಗಕ್ಕೆ ಟೆಂಗಿನಕಾಯಿಗೆ ಛಾನ್ಸ್‌

63.96 ಕೋಟಿ ಬ್ಯಾಂಕ್ ಠೇವಣಿ ಇದ್ದು, ಶೇರುಗಳಲ್ಲಿ 85.32 ಕೋಟಿ ಹೂಡಿಕೆ ಮಾಡಲಾಗಿದೆ. ಸಾಲಗಾರರಿಂದ ಒಟ್ಟು 104 ಕೋಟಿ ರೂ ಬರಬೇಕಾಗಿದೆ. 2.25 ಕೋಟಿ ಆಭರಣ ಹಾಗು ಇನ್ನೆತರೆ ವಸ್ತುಗಳಿವೆ. ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷರಾದ ಶಾಮನೂರು ಶಿವಶಂಕರಪ್ಪ ಬಳಿ 73.26 ಲಕ್ಷದ ವಾಹನಗಳಿವೆ. 35 ಕೋಟಿ ಬೆಲೆಬಾಳುವ ಕೃಷಿಯೇತರ ಭೂಮಿ, 25 ಲಕ್ಷ ಮೌಲ್ಯದ 1100 ಚದರಡಿ ಜಾಗ ಹಾಗು ಮನೆ ಸೇರಿದಂತೆ 257.83 ಕೋಟಿ ಚರಾಸ್ತಿ ಮತ್ತು
35 ಕೋಟಿ ಸ್ಥಿರಾಸ್ತಿ ಇದೆ.

ಇದನ್ನೂ ಓದಿ: ಕೋಟಿ ಕೋಟಿ ಆಸ್ತಿಗೆ ಅಧಿಪತಿಯಾಗಿರುವ ಕಮಲ ಅಭ್ಯರ್ಥಿಗಳು: ಉದಯ್ ಗರುಡಾಚಾರ್ ಕೆಜಿ ಕೆಜಿ ಚಿನ್ನಾಭರಣದ ಕುಬೇರ!

ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ: ಶಾಮನೂರು ಶಿವಶಂಕರಪ್ಪ ಇಂದು ಸಾಂಕೇತಿಕ ನಾಮಪತ್ರ ಸಲ್ಲಿಸಿದ್ರು. ಕೆಲ ಆತ್ಮೀಯ ಬೆಂಬಲಿಗರ ಜೊತೆ ಮಹಾನಗರ ಪಾಲಿಕೆಗೆ ಆಗಮಿಸಿ ನಾಮಪತ್ರವನ್ನು ಮಹಾನಗರ ಪಾಲಿಕೆಯ ಆಯುಕ್ತೆ ರೇಣುಕಾ ಅವರಿಗೆ ಸಲ್ಲಿಕೆ ಮಾಡಿದರು.

ಇದನ್ನೂ ಓದಿ : ಹುಬ್ಬಳ್ಳಿ-ಧಾರವಾಡ ಸೆಂಟ್ರಲ್‌ ಕ್ಷೇತ್ರದಲ್ಲಿ ಗುರು-ಶಿಷ್ಯರ ಹೋರಾಟ: ಗೆಲುವು ಶೆಟ್ಟರ್‌ಗೋ ಟೆಂಗಿನಕಾಯಿಗೋ?

ಎಸ್.ಎಸ್.ಮಲ್ಲಿಕಾರ್ಜುನ್ ಮತ್ತೊಮ್ಮೆ ನಾಮಪತ್ರ ಸಲ್ಲಿಕೆ: ದಾವಣಗೆರೆ ಉತ್ತರದ ಕಾಂಗ್ರೆಸ್ ಅಭ್ಯರ್ಥಿ ಶಾಮನೂರು ಪುತ್ರ ಎಸ್ ಎಸ್ ಮಲ್ಲಿಕಾರ್ಜುನ್ ಎರಡನೇ ಬಾರಿ ಸಾಂಕೇತಿಕ ನಾಮಪತ್ರ ಸಲ್ಲಿಸಿದ್ರು. ಮಲ್ಲಿಕಾರ್ಜುನ್​ಗೆ ಪತ್ನಿ ಪ್ರಭಾ ಮಲ್ಲಿಕಾರ್ಜುನ್ ಹಾಗೂ ಆತ್ಮೀಯರು ಸಾಥ್ ನೀಡಿದ್ರು.

ಇದನ್ನೂ ಓದಿ: ಶಾಮನೂರು ಶಿವಶಂಕರಪ್ಪ, ಪುತ್ರ ಮಲ್ಲಿಕಾರ್ಜುನ್, ಜಗಳೂರು ಶಾಸಕ ರಾಮಚಂದ್ರ ನಾಮಿನೇಷನ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.