ETV Bharat / state

ಶಿಷ್ಯವೇತನ ಬಿಕ್ಕಟ್ಟು.. ಮುಷ್ಕರನಿರತರ ಪರ ವೇಗದ ಬೌಲರ್ ಬ್ಯಾಟಿಂಗ್ - davanagere news

ಕಳೆದ 16 ತಿಂಗಳಿನಿಂದ ಸ್ಟೈಫಂಡ್ ಸಿಗದೇ ಹೋರಾಟ ನಡೆಸುತ್ತಿರುವುದು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದ ಮೂಲಕ ತಿಳಿಯಿತು. ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ವಾರಿಯರ್ಸ್‌ಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು..

Breaking News
author img

By

Published : Jul 13, 2020, 10:16 PM IST

ದಾವಣಗೆರೆ: ಶಿಷ್ಯವೇತನಕ್ಕೆ ಒತ್ತಾಯಿಸಿ ಕಳೆದ ಹದಿನೈದು ದಿನಗಳಿಂದ ಮುಷ್ಕರ ನಡೆಸುತ್ತಿರುವ ಜೆಜೆಎಂ ಮೆಡಿಕಲ್ ಕಾಲೇಜಿನ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಹೋರಾಟಕ್ಕೆ ಕ್ರಿಕೆಟಿಗ ವಿನಯ್ ಕುಮಾರ್ ಬೆಂಬಲ ವ್ಯಕ್ತಪಡಿಸಿದ್ದಾರೆ.

ಇನ್‌ಸ್ಟ್ರಾಗಾಂ ಮೂಲಕ ಬೆಂಬಲ ಸೂಚಿಸಿದ ವಿಡಿಯೋ ಕಳುಹಿಸಿರುವ ವಿನಯ್‌ಕುಮಾರ್, ಕಳೆದ 16 ತಿಂಗಳಿನಿಂದ ಸ್ಟೈಫಂಡ್ ಸಿಗದೇ ಹೋರಾಟ ನಡೆಸುತ್ತಿರುವುದು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮದ ಮೂಲಕ ತಿಳಿಯಿತು. ಕೊರೊನಾ ವಿರುದ್ಧ ಹೋರಾಟ ಮಾಡುತ್ತಿರುವ ವಾರಿಯರ್ಸ್‌ಗೆ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.

ಕಾಲೇಜಿನ ಆಡಳಿತವು ಆದಷ್ಟು ಬೇಗ ವೈದ್ಯರು ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಬೇಡಿಕೆ ಈಡೇರಿಸಬೇಕು. ಕೊರೊನಾ ಹೆಚ್ಚುತ್ತಿರುವ ಇಂಥ ವೇಳೆಯಲ್ಲಿ ಅವರ ನೆರವಿಗೆ ನಿಲ್ಲಬೇಕಾದದ್ದು ನಮ್ಮ ಕರ್ತವ್ಯ. ಹಾಗಾಗಿ ಸಂಕಷ್ಟದಲ್ಲಿರುವ ಮುಷ್ಕರನಿರತರಿಗೆ ಸರ್ಕಾರ ಸಹಾಯ ಮಾಡಬೇಕು ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.