ದಾವಣಗೆರೆ: ಯಥಾ ರಾಜ ತಥಾ ಪ್ರಜಾ, ಯಥಾ ರಾಜಾ ತಥಾ ಅಧಿಕಾರಿ ಎಂದು ಮೈಸೂರು ಜಿಲ್ಲಾಧಿಕಾರಿ ಹಾಗು ಆಯುಕ್ತರ ವಿಚಾರವಾಗಿ ಡಿಕೆಶಿ ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆಯಲ್ಲಿ ಮಾತನಾಡಿದ ಅವರು, ಶಾಸಕರು, ಸಚಿವರು ಏನು ಮಾಡುತ್ತಿದ್ದಾರೆ? ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರೋ ಮಂತ್ರಿ ಸ್ವಾಮಿಗಳಿಗೆ ಸಿಡಿ ತೋರಿಸಲು ಮಠಕ್ಕೆ ಹೋಗಿದ್ದನಂತೆ. ಆ ಮಠದ ಸ್ವಾಮೀಜಿಗಳು ಮಂತ್ರಿಯನ್ನು ಬೈದು ಕಳುಹಿಸಿದ್ದರು. ಯತ್ನಾಳ್ ಹೇಳಿದ್ದಾರಲ್ಲ ಅದೇ ಸಿಡಿ ವಿಚಾರ ಕಣ್ರೀ ಎಂದು ಡಿ.ಕೆ ಶಿವಕುಮಾರ್ ಸಿಡಿ ಬಾಂಬ್ ಹಾಕಿದರು.
ಕೊರೊನಾ ಲಸಿಕೆ ಬಗ್ಗೆ ಮಾತನಾಡಿದ ಅವರು, ಲಸಿಕೆ ಹಂಚಿಕೆ ವಿರುದ್ಧ ಕೇಂದ್ರ, ರಾಜ್ಯ ಸರ್ಕಾರ ವಿಫಲವಾಗಿದೆ. ಚೀಫ್ ಮಿನಿಸ್ಟರ್ ಉದ್ಘಾಟನೆ ನಂತರ ನಮ್ಮ ಹುಡುಗರು ನಿರಂತರವಾಗಿ ಪ್ರಯತ್ನ ಮಾಡುತ್ತಿದ್ದರೂ ಕೂಡ ಆನ್ಲೈನ್ ರಿಜಿಸ್ಟ್ರೇಶನ್ ಇಲ್ಲ. ಇದು ಯಡಿಯೂರಪ್ಪ ಸೇರಿದಂತೆ ಕೇಂದ್ರ ಸರ್ಕಾರದ ವೈಫಲ್ಯವಾಗಿದೆ. ನಾನು ಸತ್ತರೂ ಚಿಂತೆಯಿಲ್ಲ, ಜನರಿಗೋಸ್ಕರ ಏನು ಮಾಡುವುದಕ್ಕೂ ಸಿದ್ಧ ಎಂದರು.
ಇನ್ನು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಲಸಿಕೆ ನೀಡುತ್ತಿರುವುದರ ಕುರಿತು ಮಾತನಾಡಿ, ಇವರ ಕಾರ್ಯ ದೇಶದ ರಾಜಕಾರಣಿಗಳಿಗೆ ದೊಡ್ಡ ಸಂದೇಶ. ಜೀವ ಉಳಿಸಿ ಎಂದು ಭಿಕ್ಷೆ ಬೇಡುತ್ತಿದ್ದೇವೆ. 100 ಕೋಟಿ ರೂ. ಇಟ್ಟುಕೊಂಡು ಲಸಿಕೆಗಾಗಿ ಸರ್ಕಾರಕ್ಕೆ ಪರ್ಮಿಶನ್ ಕೇಳಿದ್ದೆವು, ಅವರು ಕೊಡಲಿಲ್ಲ. ಇದೀಗ 1 ಲಕ್ಷ ಜನಕ್ಕೆ ಉಚಿತವಾಗಿ ಶಾಮನೂರು ಕುಟುಂಬ ಲಸಿಕೆ ನೀಡಲು ಮುಂದಾಗಿದೆ. ನಮ್ಮ ಪಕ್ಷದ ಪರವಾಗಿ, ಸಂಸ್ಥೆ ಪರವಾಗಿ ಚಾಲನೆ ನೀಡಲಾಗುತ್ತಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಗುಲಾಬ್ ನಬಿ ಅಜಾದ್‌ರವರು ಹೃದಯ ಶ್ರೀಮಂತಿಕೆ ಮೆರೆದಿದ್ದಾರೆ ಎಂದರು.