ETV Bharat / state

ಪಾರ್ಕಿಂಗ್​​ಗಾಗಿ ಜಾಗ ಪಡೆದು ಅನ್ಯ ಉದ್ದೇಶಕ್ಕೆ‌ ಬಳಕೆ ಮಾಡಿದ್ದರೆ ಕಟ್ಟಡ ನೆಲಸಮ ಮಾಡಿ: ಡಿಸಿ ಸೂಚನೆ - ದಾವಣಗೆರೆಯಲ್ಲಿ ಪಾರ್ಕಿಂಗ್​​ ಜಾಗ ಪಡೆದು ಅನ್ಯ ಉದ್ದೇಶಕ್ಕೆ‌ ಬಳಕೆ ಮಾಡಿದ್ದರೆ ಕಟ್ಟಡ ನೆಲಸಮ ಮಾಡಲು ಡಿಸಿ ಸೂಚನೆ

ನಗರದ ಪ್ರತಿಷ್ಠಿತ ಹೋಟೆಲ್​​ಗಳು, ಅಂಗಡಿಗಳು ಸೇರಿದಂತೆ ಬೃಹತ್ ಕಟ್ಟಡಗಳ ಎದುರು ಪಾರ್ಕಿಂಗ್‍ಗೆ ಸ್ಥಳವಿಲ್ಲದೆ ಜನರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ‌.

District Road Safety Committee Meeting at Davanagere
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆ
author img

By

Published : Nov 6, 2020, 3:07 PM IST

ದಾವಣಗೆರೆ: ವಾಣಿಜ್ಯ ಉದ್ದೇಶಕ್ಕೆ ಹಾಗೂ ಬೃಹತ್ ಕಟ್ಟಡಗಳ ನಿರ್ಮಾಣಕ್ಕೆ ಅನುಮತಿ ಪಡೆಯುವಾಗ ನಕ್ಷೆಯಲ್ಲಿ ಪಾರ್ಕಿಂಗ್ ಸ್ಥಳ ಎಂದು ನಿಗದಿಪಡಿಸಿಕೊಂಡು ಆ ಬಳಿಕ ಈ ಸ್ಥಳ ಬೇರೆ ಉದ್ದೇಶಕ್ಕೆ ಬಳಕೆ ಆಗಿದ್ದು ದೃಢಪಟ್ಟರೆ ಅಂತಹ ಸ್ಥಳವನ್ನು ಕೂಡಲೇ ತೆರವುಗೊಳಿಸಬೇಕು.‌ ಇಲ್ಲದಿದ್ದರೆ ಕಟ್ಟಡ ನೆಲಸಮಗೊಳಿಸಿ.‌ ಅಗತ್ಯ ಬಿದ್ದರೆ ಪೊಲೀಸ್ ಭದ್ರತೆಯೊಂದಿಗೆ ತೆರಳಿ ತೆರವುಗೊಳಿಸಿ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದ ಪ್ರತಿಷ್ಠಿತ ಹೋಟೆಲ್​​ಗಳು, ಅಂಗಡಿಗಳು ಸೇರಿದಂತೆ ಬೃಹತ್ ಕಟ್ಟಡಗಳ ಎದುರು ಪಾರ್ಕಿಂಗ್‍ಗೆ ಸ್ಥಳವಿಲ್ಲದೆ ಜನರು ಎಲ್ಲೆಂದರಲ್ಲಿ ವಾಹನ ನಿಲ್ಲಿಸುತ್ತಿದ್ದಾರೆ‌. ಹೀಗಾಗಿ ವಾಹನ ಸಂಚಾರಕ್ಕೆ ತೀವ್ರ ಅಡಚಣೆಯಾಗುತ್ತಿದ್ದು, ಟ್ರಾಫಿಕ್ ಪೊಲೀಸರು ವಾಹನದಟ್ಟಣೆ ತಡೆಯಲು ನಿತ್ಯವೂ ಪರದಾಡುತ್ತಿರುವುದು ಕಂಡು ಬರುತ್ತಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಧಿಸೂಚನೆ: ನಗರದ ವಿವಿಧೆಡೆ ರಸ್ತೆಗಳಲ್ಲಿ ಸರಕು ಸಾಗಾಣಿಕೆ ಹಾಗೂ ಆಟೋ ತಂಗುದಾಣಗಳನ್ನು ಗುರುತಿಸಿ, ಅಲ್ಲಿ ಫಲಕ ಅಳವಡಿಸುವುದು ಅಗತ್ಯ.‌ ಈ ನಿಟ್ಟಿನಲ್ಲಿ ಆರ್​​ಟಿಒ, ಮಹಾನಗರ ಪಾಲಿಕೆ, ಪೊಲೀಸ್ ಇಲಾಖೆಯ ಅಧಿಕಾರಿಗಳು ಜಂಟಿಯಾಗಿ ಸಮೀಕ್ಷೆ ನಡೆಸಿ ತಂಗುದಾಣ ಅಗತ್ಯ ಇರುವ, ಸೂಕ್ತ ಎನಿಸುವ ಸ್ಥಳಗಳನ್ನು ಗುರುತಿಸಿ ವರದಿ ನೀಡಿದಲ್ಲಿ ತಂಗುದಾಣಗಳ ಸ್ಥಳವನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಲಾಗುವುದು. ಬಳಿಕ ಈ ತಂಗುದಾಣಗಳಲ್ಲಿ ಅಗತ್ಯ ಮೂಲ ಸೌಕರ್ಯ ಕಲ್ಪಿಸುವ ಕಾರ್ಯವನ್ನು ಮಹಾನಗರ ಪಾಲಿಕೆ ಅಧಿಕಾರಿಗಳು ಕೈಗೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.

ಎಸ್ಪಿ ಹನುಮಂತರಾಯ ಮಾತನಾಡಿ, ಕರ್ನಾಟಕ ಸಾರ್ವಜನಿಕ ಸುರಕ್ಷತಾ ಕಾಯ್ದೆಯನ್ವಯ ಹೆಚ್ಚು ಹೆಚ್ಚು ಜನರು ಭೇಟಿ ಮಾಡುವಂತಹ ಕಟ್ಟಡಗಳಲ್ಲಿ ಸಿಸಿಟಿವಿ ಕ್ಯಾಮರಾ ಅಳವಡಿಕೆ, ಪಾರ್ಕಿಂಗ್ ಹಾಗೂ ಭದ್ರತಾ ವ್ಯವಸ್ಥೆ ಮಾಡುವುದು ಆಯಾ ಕಟ್ಟಡಗಳ ಮಾಲೀಕರ ಜವಾಬ್ದಾರಿಯಾಗಿದೆ ಎಂದರು.

ಟ್ರ್ಯಾಕ್ಟರ್, ಎತ್ತಿನ ಗಾಡಿಗಳಿಂದ ಅಪಾಯ: ಕುಕ್ಕುವಾಡ, ಹದಡಿ ರಸ್ತೆ ಸೇರಿದಂತೆ ವಿವಿಧ ರಸ್ತೆಗಳಲ್ಲಿ ಕಬ್ಬು ಮತ್ತಿತರ ಕೃಷಿ ಸಾಮಗ್ರಿಗಳನ್ನು ಸಾಗಿಸುವ ಟ್ರ್ಯಾಕ್ಟರ್​ಗಳು, ಎತ್ತಿನ ಗಾಡಿಗಳು ರಾತ್ರಿ ವೇಳೆ ಯಾವುದೇ ರಿಫ್ಲೆಕ್ಟರ್ ಅಳವಡಿಸದ ಕಾರಣ ಹೆಚ್ಚಾಗಿ ಅಪಘಾತಗಳು ಸಂಭವಿಸುತ್ತಿವೆ. ಜಿಲ್ಲೆಯಲ್ಲಿ ಈಗಾಗಲೇ ಇದೇ ಕಾರಣಗಳಿಗಾಗಿ ಹಲವು ಅಪಘಾತಗಳು ಸಂಭವಿಸಿ ಪ್ರಾಣಹಾನಿಯಾಗಿದೆ.‌ ಇಂತಹ ದುರ್ಘಟನೆಗಳನ್ನು ತಪ್ಪಿಸುವುದು ಅಗತ್ಯವಾಗಿದೆ. ಇದಕ್ಕಾಗಿ ಟ್ರ್ಯಾಕ್ಟರ್ ಹಾಗೂ ಟ್ರಿಲ್ಲರ್​, ಎತ್ತಿನ ಗಾಡಿಗಳಿಗೆ ರಿಫ್ಲೆಕ್ಟರ್ ಸ್ಟಿಕ್ಕರ್ ಅಳವಡಿಕೆ ಅಥವಾ ರಿಫ್ಲೆಕ್ಟರ್ ಪೇಂಟ್ ಮಾಡಬೇಕು. ಈ ಬಗ್ಗೆ ರೈತರಿಗೆ ಜಾಗೃತಿ ಮೂಡಿಸಬೇಕು. ಟ್ರ್ಯಾಕ್ಟರ್, ಟ್ರಿಲ್ಲರ್​ಗಳಿಗೆ ಇದರ ಅಳವಡಿಕೆಯನ್ನು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ಕಡ್ಡಾಯಗೊಳಿಸಿ ಜಾರಿಗೊಳಿಸಬೇಕು ಎಂದರು.

ಬೀದಿ ದೀಪ ವ್ಯವಸ್ಥೆ: ನಗರದ ವಿದ್ಯಾರ್ಥಿ ಭವನದಿಂದ ವಿದ್ಯಾನಗರ, ಹದಡಿ ರಸ್ತೆಯವರೆಗಿನ ಮಾರ್ಗದಲ್ಲಿ ಒಂದೇ ಒಂದು ಬೀದಿ ದೀಪ ಇಲ್ಲ. ರಾತ್ರಿ ವೇಳೆ ಸಾರ್ವಜನಿಕರು, ಮಹಿಳೆಯರು ಓಡಾಡುವುದು ಕಷ್ಟವಾಗುತ್ತಿದೆ ಎಂದು ಸಭೆಯಲ್ಲಿ ಭಾಗವಹಿಸಿದ್ದ ಕೆಲವರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಇದಕ್ಕೆ ಅಚ್ಚರಿ ವ್ಯಕ್ತಪಡಿಸಿದ ಅವರು, ಈ ಮಾರ್ಗ ಮಾತ್ರವಲ್ಲ, ನಗರದಲ್ಲಿ ಯಾವುದೇ ರಸ್ತೆಗಳಲ್ಲಿ ಬೀದಿ ದೀಪ ವ್ಯವಸ್ಥೆ ಇಲ್ಲದೇ ಇದ್ದಲ್ಲಿ ಅದನ್ನು ಗುರುತಿಸಿ ಕೂಡಲೇ ಬೀದಿ ದೀಪ ಅಳವಡಿಕೆ ಆಗಬೇಕು. ಇದಕ್ಕೆ ಕಾಲಮಿತಿ ನಿಗದಿಪಡಿಸಿಕೊಂಡು ಅನುಷ್ಠಾನಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಮಹಾನಗರ ಪಾಲಿಕೆ ಅಧಿಕಾರಗಳಿಗೆ ಸೂಚನೆ ನೀಡಿದರು.

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.