ದಾವಣಗೆರೆ: ಲಂಡನ್ನಿಂದ ಜಿಲ್ಲೆಗೆ ಈಗಾಗಲೇ ಆರು ಜನರು ಆಗಮಿಸಿದ್ದು, ಅವರ ಮೇಲೆ ತೀವ್ರ ನಿಗಾ ವಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬ್ರಿಟನ್ನಿಂದ ಬಂದಿರುವವರ ಮೇಲೆ ನಿಗಾ ಇಡುವಂತೆ ಸರ್ಕಾರದಿಂದ ಆದೇಶ ಬಂದಿದೆ. ಡಿಸೆಂಬರ್ 10 ರಿಂದ ಇಲ್ಲಿಯವರೆಗೂ ಜಿಲ್ಲೆಗೆ 7 ಜನ ಬಂದಿದ್ದು, ಅದರಲ್ಲಿ ಒಬ್ಬರನ್ನು ಟೆಸ್ಟ್ ಮಾಡಲಾಗಿದೆ. ಅವರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಇನ್ನುಳಿದ ಆರು ಜನರ ಪರೀಕ್ಷಾ ವರದಿ ಇಂದು ಮಧ್ಯಾಹ್ನ ಬರಲಿದೆ. ಇಂದು ಕೆಲ ಪ್ರಯಾಣಿಕರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗುವುದು ಎಂದರು.
ಓದಿ: ಜನವರಿ 1 ರಿಂದ ಶಾಲೆಗಳು ಪುನಾರಂಭ : ಸಚಿವ ಸುರೇಶ್ ಕುಮಾರ್
ಇಂಗ್ಲೆಂಡ್ನಿಂದ ಬಂದಿರುವ ಪ್ರಯಾಣಿಕರಲ್ಲಿ ಯಾರಲ್ಲೂ ಕೂಡ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ. ಹರಿಹರ ಬಳಿ ಇರುವ ಕಾರ್ಗಿಲ್ ಹಾಗೂ ಬಿರ್ಲಾ ಕಾರ್ಖಾನೆಗಳಿಗೆ ಹಲವು ವಿದೇಶಿಗರು ಬಂದು ಹೋಗುತ್ತಿರುವುದು ಮಾಹಿತಿ ಇದೆ. ಇದರಿಂದ ಕಾರ್ಖಾನೆಗಳ ಮೇಲೆ ಕೂಡ ನಿಗಾ ಇರಿಸಲಾಗಿದ್ದು, ಸರ್ವೇಕ್ಷಣಾ ಇಲಾಖೆ ಕೂಡ ಒಂದು ಕಣ್ಣಿಟ್ಟಿದೆ. ಸೋಂಕು ತಡೆಗಟ್ಟಲು ಜಿಲ್ಲಾಡಳಿತದಿಂದ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.