ETV Bharat / state

300 ಕುಟುಂಬಗಳಿಗೆ ಮುರುಘಾಮಠದಿಂದ ಆಹಾರಧಾನ್ಯ ವಿತರಣೆ.. - ದಾವಣಗೆರೆಯ ಜಯದೇವ ವೃತ್ತದಲ್ಲಿರುವ ಮುರುಘಾ ಮಠ

ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಅನಿವಾರ್ಯವಾಗಿದೆ. ಯಾಕೆಂದರೆ, ಎಲ್ಲೆಡೆ ಭೀತಿ ಸೃಷ್ಟಿಸಿರುವ ಕೊರೊನಾ ಇದಕ್ಕೆಲ್ಲಾ ಕಾರಣ ಎಂದರು. ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಕೊರೊನಾ ಸೋಂಕು ಹರಡುವಿಕೆ ಭಯ ಮತ್ತಷ್ಟು ಹೆಚ್ಚಿಸಿದೆ.

ಮುನ್ನೂರು ಕುಟುಂಬಗಳಿಗೆ ಮುರುಘಾಮಠದಿಂದ ಆಹಾರಧಾನ್ಯ ವಿತರಣೆ

author img

By

Published : Apr 9, 2020, 7:06 PM IST

Updated : Apr 9, 2020, 7:20 PM IST

ದಾವಣಗೆರೆ : ಲಾಕ್​​​ಡೌನ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿರುವವರ ನೆರವಿಗೆ ಧಾವಿಸಿರುವ ಮುರುಘಾ ಮಠವೂ ಬಡವರಿಗೆ ದವಸ ಧಾನ್ಯಗಳನ್ನು ವಿತರಿಸಿತು.

ನಗರದ ಜಯದೇವ ವೃತ್ತದಲ್ಲಿರುವ ಮುರುಘಾ ಮಠದಲ್ಲಿ ಚಿತ್ರದುರ್ಗದ ಮುರುಘಾ ಮಠದ ಪೀಠಾಧಿಪತಿ ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ದವಸ ಧಾನ್ಯಗಳ ಕಿಟ್​​ನ ವಿತರಿಸಿದರು. ಜಿಲ್ಲಾಧಿಕಾರಿ ಮಹಾಂತೇಶ್ ಆರ್. ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನಮಂತರಾಯ ಸೇರಿ ವಿವಿಧ ಸಮಾಜದ ಮುಖಂಡರು ಪಾಲ್ಗೊಂಡಿದ್ದರು. ಈ ವೇಳೆ ಮಾತನಾಡಿದ ಮುರುಘಾ ಶ್ರೀಗಳು, ಇದಕ್ಕೂ ಮೊದಲು ಸಾಮಾಜಿಕ ಅಂತರ ಬೇಡ ಎನ್ನುತ್ತಿದ್ದರು.

ಈಗ ಸಾಮಾಜಿಕ ಅಂತರ ಬೇಕು ಅಂತಾರೆ. ಈಗ ಎಲ್ಲವೂ ಉಲ್ಟಾಪಲ್ಟಾ ಆಗಿದೆ.‌ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಅನಿವಾರ್ಯವಾಗಿದೆ. ಯಾಕೆಂದರೆ, ಎಲ್ಲೆಡೆ ಭೀತಿ ಸೃಷ್ಟಿಸಿರುವ ಕೊರೊನಾ ಇದಕ್ಕೆಲ್ಲಾ ಕಾರಣ ಎಂದರು. ಮನುಷ್ಯರಿಗೆ ಮಾತ್ರವಲ್ಲ ಪ್ರಾಣಿಗಳಿಗೂ ಕೊರೊನಾ ಸೋಂಕು ಹರಡುವಿಕೆ ಭಯ ಮತ್ತಷ್ಟು ಹೆಚ್ಚಿಸಿದೆ. ಲಾಕ್​​​ಡೌನ್​​ನಿಂದ ಸಂತ್ರಸ್ತರಿಗೆ ಆಹಾರ ಪದಾರ್ಥಗಳ ವಿತರಣೆ ಮಾಡಲಾಗುತ್ತಿದೆ.

ಈ ತಿಂಗಳ ಕೊನೆಯವರೆಗೂ ಬಡವರಿಗೆ ಆಹಾರಧಾನ್ಯ ವಿತರಿಸಲಾಗುತ್ತಿದೆ. 300 ಕುಟುಂಬಗಳಿಗೆ ಆಹಾರದ ಪ್ಯಾಕೇಟ್‌ಗಳನ್ನು ವಿತರಿಸಲಾಗುವುದು ಎಂದರು.

Last Updated : Apr 9, 2020, 7:20 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.