ETV Bharat / state

ನಾಳೆ ಬೆಂಗಳೂರಿನಲ್ಲಿ ಅಸಮಾಧಾನಿತ ಶಾಸಕರ ಸಭೆ; ಶಾಸಕ ರೇಣುಕಾಚಾರ್ಯ

ನಾಳೆ ಬೆಂಗಳೂರಲ್ಲಿ ಅಸಮಾಧಾನಿತ ಶಾಸಕರ ಸಭೆ ಫಿಕ್ಸ್​ ಆಗಿದೆ. ಸಭೆಯಲ್ಲಿ ಪಾಲ್ಗೊಳ್ಳುವ ಶಾಸಕರ ಸಂಖ್ಯೆ ಎಷ್ಟು ಅಂತ ಹೇಳಲ್ಲ. ನಾಳೆವರೆಗೂ ಕಾಯ್ದು ನೋಡಿ. ಮುಖ್ಯಮಂತ್ರಿಗಳ ಬಗ್ಗೆ ಆಪಾರ ಗೌರವ ಪ್ರೀತಿ ಇದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

MLA Renukacharya
ಶಾಸಕ ರೇಣುಕಚಾರ್ಯ
author img

By

Published : Jan 18, 2021, 9:33 PM IST

ದಾವಣಗೆರೆ: ನಾವು ರೆಸಾರ್ಟ್ ರಾಜಕಾರಣ ಮಾಡಲ್ಲ, ಪಂಚತಾರಾ ಹೋಟೆಲ್​ನಲ್ಲಿ ಸಭೆ ನಡೆಸೋಲ್ಲ, ಆದ್ರೆ ಎಲ್ಲೋ ಒಂದು ಕಡೆ ಸಭೆ ಮಾಡುತ್ತೇವೆ. ನಾಳೆ ಬೆಂಗಳೂರಲ್ಲಿ ಅಸಮಾಧಾನಿತ ಶಾಸಕರ ಸಭೆ ಫಿಕ್ಸ್​ ಆಗಿದೆ ಎಂದು ಶಾಸಕ ಎಂ.ಪಿ. ರೇಣುಕಾಚಾರ್ಯ ಹೇಳಿದ್ದಾರೆ.

ಸಭೆಯಲ್ಲಿ ಪಾಲ್ಗೊಳ್ಳುವ ಶಾಸಕರ ಸಂಖ್ಯೆ ಎಷ್ಟು ಅಂತ ಹೇಳಲ್ಲ. ನಾಳೆವರೆಗೂ ಕಾಯ್ದು ನೋಡಿ. ಮುಖ್ಯಮಂತ್ರಿಗಳ ಬಗ್ಗೆ ಆಪಾರ ಗೌರವ ಪ್ರೀತಿ ಇದೆ. ನಮ್ಮನ್ನು ಬಿ ಫಾರಂ ನೀಡಿ ರಾಜಕೀಯವಾಗಿ ಬೆಳೆಸಿರೋದು ಯಡಿಯೂರಪ್ಪನವರು. ನಾವು ಅಸಮಾಧಾನಿತರಲ್ಲ, ಬಂಡಾಯವಲ್ಲ, ನಾಯಕರಲ್ಲ, ರೆಬಲ್​ಗಳಲ್ಲ, ನಮ್ಮ ನೋವುಗಳನ್ನು ವರಿಷ್ಠರಿಗೆ ತಿಳಿಸುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.

ಓದಿ:ಇಂದಿನಿಂದ ಅಧಿಕೃತವಾಗಿ ಗೋಹತ್ಯೆ ನಿಷೇಧ ಜಾರಿ; ಗೋ ಪೂಜೆ ಮಾಡಿ ಯಡಿಯೂರಪ್ಪ ಘೋಷಣೆ

ನಮ್ಮ ಶಾಸಕರು ದೂರವಾಣಿ ಕರೆ ಮಾಡಿ ನೋವು ತೋಡಿಕೊಂಡಿದ್ದಾರೆ. ನಾಳೆ ಬೆಳಗ್ಗೆ ಕೆಲ ಶಾಸಕರು ಬೆಂಗಳೂರಿಗೆ ಬರುತ್ತಾರೆ. ನಾಳೆ ಕುಳಿತು ಚರ್ಚಿಸುತ್ತೇವೆ. ಬೇರೆಯವರಂತೆ ನಾವು ಕದ್ದುಮುಚ್ಚಿ ದೆಹಲಿಗೆ ಹೋಗಿ ವರಿಷ್ಠರಿಗೆ ದೂರು ಕೊಡಲ್ಲ. ಪಕ್ಷದ ಚೌಕಟ್ಟಿನಲ್ಲಿ ನಾಲ್ಕು ಗೋಡೆಗಳ ಮಧ್ಯೆ ನಮ್ಮ ಸಮಸ್ಯೆ ಬಗೆಹರಿಸಿಕೊಳ್ಳುತ್ತೇವೆ. ಈ ಹಿಂದೆ ಅನೇಕ ತಪ್ಪುಗಳನ್ನು ಮಾಡಿದ್ದೇವೆ. ಈ ಬಾರಿ ಅಂತಹ ತಪ್ಪುಗಳು ಆಗಲ್ಲ ಎಂದು ಶಾಸಕ ರೇಣುಕಾಚಾರ್ಯ ಹೊಸ‌ಬಾಂಬ್ ಸಿಡಿಸಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.