ದಾವಣಗೆರೆ: ನಗರದ ಹೊರವಲಯದಲ್ಲಿರುವ ಹೊಸ ಕುಂದವಾಡ ಗ್ರಾಮದಲ್ಲಿ ಕೆಂಡೋತ್ಸವ ವಿಜೃಂಭಣೆಯಿಂದ ನೆರವೇರಿತು. ದೇವಿ ಮೂರ್ತಿ ಹೊತ್ತು ಭಕ್ತರು ಕೆಂಡ ಹಾಯ್ದರು. ಪ್ರತಿ ವರ್ಷದಂತೆ ಈ ವರ್ಷವೂ ವಿಜೃಂಭಣೆಯಿಂದ ಧಾರ್ಮಿಕ ಕಾರ್ಯಕ್ರಮಗಳು ನಡೆದವು.
ದುರ್ಗಾದೇವಿಯ ಅಗ್ನಿ ಪ್ರವೇಶ ಹಿನ್ನೆಲೆ ಭಕ್ತರು ಕೆಂಡವನ್ನು ಹಾಯುವ ಮೂಲಕ ಭಕ್ತಿಯ ಪರಾಕಾಷ್ಠೆ ಮೆರೆದರು. ಕೆಂಡ ಹಾಯುವ ಸ್ಥಳವನ್ನು ಸಿದ್ಧಪಡಿಸಿ ಸುತ್ತ ಹೂವಿನಿಂದ ಅಲಂಕರಿಸಿ, ಪೂಜೆ ಮಾಡಿ ನಂತರ ಭಕ್ತರು ದೇವಿಯ ಮೂರ್ತಿ ಹೊತ್ತು ಕೆಂಡ ಹಾಯುವ ಸಂಪ್ರದಾಯ ಇಲ್ಲಿ ಮೊದಲಿನಿಂದಲೂ ನಡೆದುಕೊಂಡು ಬರುತ್ತಿದೆ. ನೂರಾರು ಜನ ಈ ಕೆಂಡೋತ್ಸವದಲ್ಲಿ ಭಾಗಿಯಾಗ್ತಾರೆ.