ETV Bharat / state

ಬೆಳಕಿನ ಹಬ್ಬ ದೀಪಾವಳಿ ಆಚರಿಸಲು ದಾವಣಗೆರೆ ಮಂದಿಗೆ ಬೇಕು ಎರಡು ಕೋಟಿ ಮೌಲ್ಯದ ಪಟಾಕಿ.. - ಈಟಿವಿ ಭಾರತ್ ಕನ್ನಡ ಸುದ್ದಿ

ದಾವಣಗೆರೆ ನಗರದ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಅಂಗಡಿ ಮಳಿಗೆಗಳನ್ನು ತೆರೆಯಲಾಗಿದೆ. ಇಲ್ಲಿ ನಾಲ್ಕು ದಿನಗಳಿಂದ ಪಟಾಕಿ ವಹಿವಾಟು ಬಲು ಜೋರಾಗಿದೆ.

ದಾವಣಗೆರೆಯಲ್ಲಿ ಹಣತೆಯ ಹಬ್ಬ ದೀಪಾವಳಿಯ ಸಡಗರ
ದಾವಣಗೆರೆಯಲ್ಲಿ ಹಣತೆಯ ಹಬ್ಬ ದೀಪಾವಳಿಯ ಸಡಗರ
author img

By ETV Bharat Karnataka Team

Published : Nov 14, 2023, 4:29 PM IST

ದಾವಣಗೆರೆಯಲ್ಲಿ ಹಣತೆಯ ಹಬ್ಬ ದೀಪಾವಳಿಯ ಸಡಗರ

ದಾವಣಗೆರೆ : ಹಣತೆಯ ಹಬ್ಬ ದೀಪಾವಳಿಯ ಸಡಗರ ಸಂಭ್ರಮ ಜಿಲ್ಲೆಯಲ್ಲಿ ಮನೆ ಮಾಡಿದೆ. ಈ ಬೆಳಕಿನ ಹಬ್ಬ ದೀಪಾವಳಿಯಲ್ಲಿ ಪಟಾಕಿ ಹೊಡೆದು ಹಬ್ಬ ಆಚರಣೆ ಮಾಡುವುದು ಪದ್ದತಿ. ಅದರಂತೆ ಪಟಾಕಿ ಇಲ್ಲದೇ ಈ ಹಬ್ಬ ಆಚರಣೆ ಮಾಡಲು ಸಾಕಷ್ಟು ಜನ ಹಿಂದೇಟು ಹಾಕುವುದೇ ಹೆಚ್ಚು. ಇದರಿಂದ ನಗರದ ಹೈಸ್ಕೂಲ್ ಮೈದಾನದಲ್ಲಿ ಪಟಾಕಿ ಅಂಗಡಿ ಮಳಿಗೆಗಳನ್ನು ತೆರೆದಿದ್ದು, ನಾಲ್ಕು ದಿನಗಳಿಂದ ಪಟಾಕಿ ವಹಿವಾಟು ಬಲು ಜೋರಾಗಿದೆ.

ಕಳೆದ ಮೂರು ದಿನಗಳಲ್ಲಿ ನಗರದಲ್ಲಿ ಒಂದೂವರೆ ಕೋಟಿಯಷ್ಟು ಪಟಾಕಿಗಳನ್ನು ಇಲ್ಲಿನ ಮಂದಿ ಈಗಾಗಲೇ ಖರೀದಿ ಮಾಡಿದ್ದಾರೆ. ಇದಲ್ಲದೇ ಇಂದು ಬಲಿ ಪಾಡ್ಯಮಿ ಇರುವುದರಿಂದ ಇಂದು ಕೂಡ ಪಟಾಕಿ ಸುಡುವುದರಿಂದ ಒಂದೂವರೆ ಕೋಟಿಯಿಂದ ಎರಡು ಕೋಟಿ ವಹಿವಾಟು ನಡೆಯಲಿದೆ. ದಾವಣಗೆರೆಯ ಜನ ಎರಡು ಕೋಟಿ ಪ್ರಮಾಣದ ಪಟಾಕಿ ಇಂದು ಸುಡಲಿದ್ದಾರೆ. ಕಳೆದ ವರ್ಷ ಒಂದೂವರೆ ಕೋಟಿಯಷ್ಟು ನಗರದಲ್ಲಿ ಪಟಾಕಿ ವಹಿವಾಟು ಆಗಿತ್ತು.‌‌ ಈ ಬಾರಿ 02 ಕೋಟಿಗಿಂತ ಹೆಚ್ಚು ವಹಿವಾಟು ನಡೆಯುವ ಸಾಧ್ಯತೆ ದಟ್ಟವಾಗಿದೆ ಎಂದು ಪಟಾಕಿ ಮಾರಾಟಗಾರರು ಹರ್ಷ ವ್ಯಕ್ತಪಡಿಸಿದ್ದಾರೆ.

ಎರಡು ಕೋಟಿ ದಾಟಲಿರುವ ಪಟಾಕಿ ವಹಿವಾಟು : ಈ ದೀಪಾವಳಿ ಹಬ್ಬಕ್ಕೆ ಮಾರುಕಟ್ಟೆಯಲ್ಲಿ ತರಹೇವಾರಿ ಭಿನ್ನ ವಿಭಿನ್ನ ಪಟಾಕಿಗಳನ್ನು ನಾವು ಕಾಣಬಹುದಾಗಿದೆ. ಬಾನಿನಲ್ಲಿ ಚಿತ್ತಾರ ಮೂಡಿಸುವ ರಾಕೆಟ್​ಗಳು, ಆಗಸದಲ್ಲಿ ಹಕ್ಕಿಯಂತೆ ಹಾರಾಡುವ ಪಟಾಕಿ. ಒಂದು ಬಾರಿ ಹಚ್ಚಿದರೆ ಐದಾರು ಬಾರಿ ಬಣ್ಣದ ಚಿತ್ತಾರ ಮೂಡಿಸುವ ಪಟಾಕಿ. ವಿಶೇಷ ಭೂಚಕ್ರ, ಫ್ಲವರ್ ಪಾಟ್, ಬಣ್ಣ ಬಣ್ಣದ ಸುರ್ ಸುರ್ ಬತ್ತಿ ಹೀಗೆ ಸಾಕಷ್ಟು ಪಟಾಕಿಗಳು ಮಾರಾಟವಾಗುತ್ತಿವೆ. ಜನ ಇಂದು ನಾಲ್ಕನೇ ದಿನವಾಗಿದ್ದರೂ ಪಟಾಕಿ ಖರೀದಿ ಮಾಡಲು ಮುಗಿಬಿದ್ದರು. ‌ಈ‌ ಬಾರಿ ಪಟಾಕಿ ಖರೀದಿ ಬಲು ಜೋರಾಗಿದ್ದು, ಮಕ್ಕಳು, ಯುವಕರು, ವಯಸ್ಕರು ಕೂಡ ಪಟಾಕಿ ಸುಟ್ಟು ಸಂಭ್ರಮಿಸುತ್ತಿದ್ದಾರೆ.

ಪಟಾಕಿ ಮಾರಾಟಗಾರರ ಸಂಘದ ನಗರಾಧ್ಯಕ್ಷ ಹೇಳಿದಿಷ್ಟು: ಪಟಾಕಿ ವರ್ತಕರು ಮತ್ತು ಮಾರಾಟಗಾರರ ಸಂಘದ ನಗರಾಧ್ಯಕ್ಷ ಪಿ ಸಿ ಶ್ರೀನಿವಾಸ್ ಮಾಧ್ಯಮದವರಿಗೆ ಪ್ರತಿಕ್ರಿಯಿಸಿ, "ಕೊನೆಯ ವರ್ಷಕ್ಕಿಂತ ಈ ಬಾರಿ ದೀಪಾವಳಿಯ ಪಟಾಕಿ ವ್ಯಾಪಾರ ವಹಿವಾಟು ಚೆನ್ನಾಗಿ ನಡೆಯುತ್ತಿದೆ. ಕಳೆದ ಮೂರು ದಿನಗಳಲ್ಲಿ ಅಂದಾಜು ಒಂದೂವರೆ ಕೋಟಿ ರೂ.ಗೂ ಹೆಚ್ಚು ವಹಿವಾಟು ನಡೆದಿದ್ದು, ಬಲಿ ಪಾಡ್ಯದ ದಿನ ಇಂದು (ಮಂಗಳವಾರ) ಪಟಾಕಿ ವಹಿವಾಟು ಹೆಚ್ಚಾಗಲಿದೆ. ಇದಲ್ಲದೇ ಬುಧವಾರ ಸ್ವಲ್ಪ ಪ್ರಮಾಣದಲ್ಲಿ ವ್ಯಾಪಾರವಾಗಬಹುದು. ಹೀಗಾಗಿ, ಈ ಬಾರಿ ಪಟಾಕಿ ವಹಿವಾಟು ಎರಡು ಕೋಟಿ ರೂ. ಮುಟ್ಟುವ ಸಾಧ್ಯತೆ ದಟ್ಟವಾಗಿದೆ ಎಂದರು".

ಇದನ್ನೂ ಓದಿ : ಬೆಂಗಳೂರಿನಲ್ಲಿ ದೀಪಾವಳಿ ಪಟಾಕಿ ಅವಘಡ: ಕಣ್ಣಿನ ಆಸ್ಪತ್ರೆಗಳಲ್ಲಿ 43 ಜನರಿಗೆ ಚಿಕಿತ್ಸೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.