ದಾವಣಗೆರೆ: ಕಲ್ಲಿನ ಕ್ವಾರಿ ಹೊಂಡದಲ್ಲಿ ಮುಳುಗಿ ತಂದೆ ಹಾಗೂ ಮಗ ಮೃತಪಟ್ಟ ಘಟನೆ ಮಾಯಕೊಂಡ ಸಮೀಪದ ಶಂಕರನಹಳ್ಳಿಯಲ್ಲಿ ನಡೆದಿದೆ.
ಕಿರಣ್ ಕುಮಾರ್(40) ಹಾಗೂ ಸೃಜನ್(16) ಮೃತಪಟ್ಟವರು. ಶಂಕರನಹಳ್ಳಿ ಗ್ರಾಮದ ಹೊರವಲಯದ ಹೊಂಡದಲ್ಲಿ ಕೈ ಕಾಲು ತೊಳೆದುಕೊಳ್ಳಲು ಹೋಗಿ ಅನಾಹುತ ಸಂಭವಿಸಿದೆ. ಪುತ್ರನ ಶವ ಪತ್ತೆಯಾಗಿದ್ದು, ತಂದೆಯ ಶವಕ್ಕಾಗಿ ಹುಡುಕಾಟ ಮುಂದುವರೆದಿದೆ. ಇದು ಕಲ್ಲು ಗಣಿಗಾರಿಕೆಯಿಂದ ಸೃಷ್ಟಿಯಾಗಿರುವ ಹೊಂಡವಾಗಿದ್ದು, ಈ ಹಿಂದೆ ಇಬ್ಬರು ಮೃತಪಟ್ಟಿದ್ದಾರೆ. ಕೂಡಲೇ ಹೊಂಡ ಮುಚ್ಚುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಪೊಲೀಸರು, ಅಗ್ನಿಶಾಮಕ ದಳ ಸಿಬ್ಬಂದಿ ಹಾಗೂ ಶಾಸಕ ಪ್ರೊ. ಲಿಂಗಣ್ಣ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಈ ಸಂಬಂಧ ಮಾಯಕೊಂಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.