ETV Bharat / state

ಫೆ.29ರೊಳಗೆ ಶಾಂತಿಸಾಗರ ಕೆರೆ ಸರ್ವೆ ಪೂರ್ಣಗೊಳಿಸಲು ಡಿಸಿ ಆದೇಶ

ಏಷ್ಯಾದಲ್ಲೆ 2ನೇ ಅತೀ ದೊಡ್ಡ ಕೆರೆ ಶಾಂತಿಸಾಗರ ಕೆರೆ ಸರ್ವೆ ಕಾರ್ಯ ಒಂದಿಲ್ಲೊಂದು ಕಾರಣಗಳಿಂದ ನಿಂತಿದ್ದು, ಫೆ.29 ರೊಳಗೆ ಮುಗಿಸಿಕೊಡಬೇಕು. ಮುಗಿಸದಿದ್ದರೆ ದಿನಗಳ ಆಧಾರದ ಟೆಂಡರ್​ದಾರ ಸಂಸ್ಥೆಯ ಮೇಲೆ ದಂಡ ವಿಧಿಸಲಾಗಗುವುದು ಎಂದು ಡಿಸಿ ಅಧಿಕಾರಿಗಳಿಗೆ ಅಂತಿಮ ಗಡುವು ನೀಡಿದ್ದಾರೆ.

dc order
ಡಿಸಿ ಆದೇಶ
author img

By

Published : Jan 6, 2020, 3:35 PM IST

ದಾವಣಗೆರೆ: ಏಷ್ಯಾದಲ್ಲೆ 2ನೇ ಅತೀ ದೊಡ್ಡ ಕೆರೆ ಶಾಂತಿಸಾಗರ ಕೆರೆ ಸರ್ವೆ ಕಾರ್ಯ ಒಂದಿಲ್ಲೊಂದು ಕಾರಣಗಳಿಂದ ನಿಂತಿದ್ದು, ಫೆ.29 ರೊಳಗೆ ಮುಗಿಸಿಕೊಡಬೇಕು. ಮುಗಿಸದಿದ್ದರೆ ದಿನಗಳ ಆಧಾರದ ಟೆಂಡರ್​ದಾರ ಸಂಸ್ಥೆಯ ಮೇಲೆ ದಂಡ ವಿಧಿಸಲಾಗಗುವುದು ಎಂದು ಡಿಸಿ ಅಧಿಕಾರಿಗಳಿಗೆ ಅಂತಿಮ ಗಡುವು ನೀಡಿದ್ದಾರೆ.

ಜಿಲ್ಲಾಧಿಕಾರಿ ಸಭೆ

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಶಾಂತಿಸಾಗರ ಕೆರೆಯ ಸರ್ವೆ ಕಾರ್ಯ ಮತ್ತು ಒತ್ತುವರಿ ತೆರವು ಕಾರ್ಯಾಚರಣೆ ಸಭೆಯಲ್ಲಿ ಮಾತನಾಡಿದ ಅವರು, ಖಡ್ಗ ಸಮಿತಿಯ ಹೋರಾಟದ ಫಲವಾಗಿ ಸರ್ಕಾರದಿಂದ ರೂ.11 ಲಕ್ಷ ಬಿಡುಗಡೆಯಾಗಿದೆ. ಕೆರೆಯ ನೀರಿನ ಮಟ್ಟ ಇಳಿಮುಖವಾಗುತ್ತಿದ್ದಂತೆ ಸರ್ವೆ ಕಾರ್ಯ ಆರಂಭಿಸಿ ಫೆ. 29 ರೊಳಗೆ ಸರ್ವೆ ನೀಲಿ ನಕಾಶೆಯನ್ನು ಜಿಲ್ಲಾ ಯೋಜನಾ ಇಲಾಖೆ ಮುಂಖಾತರ ವರದಿ ಮಂಡಿಸಿ ನಿರ್ಧಾರ ತಿಳಿಸಬೇಕೆಂದು ಡಿಸಿ ಅಧಿಕಾರಿಗಳಿಗೆ ಅಂತಿಮ ಗಡುವು ನೀಡಿದ್ದಾರೆ.

ಸಭೆಯಲ್ಲಿ ಪಾಂಡೋಮಟ್ಟಿ ವಿರಕ್ತ ಮಠದ ಬಸವ ಪ್ರಭು ಸ್ವಾಮೀಜಿ ಮಾತನಾಡಿ, ಏಷ್ಯಾದಲ್ಲಿ 2 ನೇ ಅತಿದೊಡ್ಡ ಕೆರೆ ಎಂದು ಪ್ರಸಿದ್ಧಿ ಹೊಂದಿರುವ ಶಾಂತಿಸಾಗರ ಕೆರೆಯೂ ಬಹು ಹಿಂದಿನ ಇತಿಹಾಸ ಹೊಂದಿದೆ. ಆದರೆ ಈವರೆಗೂ ಕೆರೆಯ ವಿಸ್ತೀರ್ಣ ಎಷ್ಟಿದೆ ಎಂಬುದರ ಬಗ್ಗೆ ಎಲ್ಲಿಯೂ ಮಾಹಿತಿ ಸಿಗುತ್ತಿಲ್ಲ. ಪುರಾತನ ದಾಖಲೆಗಳಿಂದ ತಿಳಿದಿರುವಂತೆ ಸುಮಾರು 6460 ಎಕರೆ ವಿಸ್ತೀರ್ಣವನ್ನು ಈ ಕೆರೆ ಹೊಂದಿದ್ದು, ಇದರಲ್ಲಿ ಸುಮಾರು 950 ಎಕರೆ ಜಾಗವನ್ನು ಒತ್ತುವರಿ ಮಾಡಿಕೊಳ್ಳಲಾಗಿದೆ ಎಂಬ ಮಾಹಿತಿ ದೊರೆತಿದೆ. ಇದನ್ನು ಬಿಟ್ಟರೆ ಯಾವುದೇ ನಿಖರ ಮತ್ತು ಸ್ಪಷ್ಟವಾದ ಮಾಹಿತಿ ಇಲ್ಲ. ಸರ್ವೇ ಕಾರ್ಯ ನಡೆಸದೇ ನೀರಾವರಿ ಇಲಾಖೆಯವರು ಸಬೂಬುಗಳನ್ನು ಹೇಳುತ್ತಾ ಕೆಲಸ ಮಾಡದೇ ಮುಂದೂಡುತ್ತಿದ್ದಾರೆ ಎಂದು ಸ್ವಾಮಿಜಿ ಅಸಮಾಧಾನ ವ್ಯಕ್ತಪಡಿಸಿದರು.

ನೀರಾವರಿ ನಿಗಮದ ಸಹಾಯಕ ಅಭಿಯಂತರ ಜಿ.ಡಿ ಗುಡ್ಡಪ್ಪ ಮಾತನಾಡಿ, ಸರ್ವೆ ಕಾರ್ಯಕ್ಕಾಗಿ ಈಗಾಗಲೇ ಟೆಂಡರ್ ನೀಡಲಾಗಿದೆ. 2019ರಲ್ಲಿ ಅತೀ ಹೆಚ್ಚು ಮಳೆಯಾಗಿರುವುದರಿಂದ ಕೆರೆಯಲ್ಲಿ 27 ಅಡಿ ನೀರು ನಿಂತಿದೆ. ಮತ್ತು ಕೆರೆಯ ಸುತ್ತಮುತ್ತ ಬೆಳೆಗಳನ್ನು ಬೆಳೆದಿರುವುದರಿಂದ ಸರ್ವೆ ಮಾಡಲು ಸಾಧ್ಯವಾಗುತ್ತಿಲ್ಲ. ನೀರಿನ ಪ್ರಮಾಣ 3 ಅಡಿ ಕಡಿಮೆಯಾದ ತಕ್ಷಣ ಸರ್ವೆ ಕಾರ್ಯ ಆರಂಭಿಸಲಾಗುವುದು. ಸರ್ಕಾರದಿಂದ ಕೆರೆಯ ಅಭಿವೃದ್ಧಿಗಾಗಿ ರೂ. 10 ಲಕ್ಷ ಅನುದಾನ ಬಿಡುಗಡೆಯಾಗಿದ್ದು, ಸ್ಟೀಲ್ ಹ್ಯಾಂಡ್‍ವಾಲ್ ಸ್ಟ್ಯಾಂಡ್‍ಗಳನ್ನು ನಿರ್ಮಿಸಲಾಗುವುದು ಹಾಗೂ 3.5 ಲಕ್ಷದಲ್ಲಿ ರಂಗಮಂಟಪದ ದುರಸ್ಥಿ ಕಾರ್ಯ ನಡೆಸಲಾಗುವುದು ಎಂದರು.

Intro:Body:

GHJHGJGJ

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.