ದಾವಣಗೆರೆ : ಮ್ಯಾನೇಜರ್ ಕಿರುಕುಳದಿಂದ ಬೇಸತ್ತು ಯುವಕನೋರ್ವ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ದಾವಣಗೆರೆ ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
![youth Commits Suicide](https://etvbharatimages.akamaized.net/etvbharat/prod-images/9895285_258_9895285_1608102987822.png)
ಹನಮಂತ (24) ನೇಣಿಗೆ ಶರಣಾದ ಯುವಕ. ಈತ ದಾವಣಗೆರೆ ನಗರದಲ್ಲಿರುವ (ರಿಲಾನ್ಸ್ ಡಿಜಿಟಲ್) ಖಾಸಗಿ ಸಂಸ್ಥೆಯ ಉದ್ಯೋಗಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ. ಆದರೆ, ಸಂಸ್ಥೆಯ ಮ್ಯಾನೇಜರ್ ಕಿರುಕುಳ ನೀಡಿ ಕೆಲಸ ಬಿಡಿಸಿದ್ದಾರೆ.
ಇದರಿಂದ ಜೀವನ ನಿರ್ವಹಣೆಗೆ ತೊಂದರೆಯಾಗಿತ್ತು ಎಂದು ಆರೋಪಿಸಿ ತನಗಾದ ಎಲ್ಲಾ ನೋವುಗಳನ್ನ ಪತ್ರದಲ್ಲಿ ಬರೆದಿಟ್ಟು ನೇಣಿಗೆ ಶರಣಾಗಿದ್ದಾನೆ. ಇನ್ನೂ ಬದುಕಿ ಬಾಳಬೇಕಾಗಿದ್ದ ಯುವಕ ನೇಣಿಗೆ ಶರಣಾಗಿದ್ದರಿಂದ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಪ್ರಕರಣ ದಾಖಲಾಗಿದೆ.