ದಾವಣಗೆರೆ: ತನ್ನ ಬಾವಿ ಪತಿಯೊಂದಿಗೆ ಹೊಸ ಜೀವನವನ್ನು ಆರಂಭಿಸುವ ಕನಸು ಕಂಡಿದ್ದ ಯುವತಿ ನಿನ್ನೆ ಹಾಡಹಗಲೇ ಬರ್ಬರ ಕೊಲೆಯಾದ್ದಳು. ನಿಶ್ಚಿತಾರ್ಥ ಬೇರೆ ಯುವಕನೊಂದಿಗೆ ಆಗಿದೆ ಎಂಬ ಒಂದೇ ಕಾರಣಕ್ಕೆ ಪಾಗಲ್ ಪ್ರೇಮಿ ಸ್ಕೂಟಿಯಲ್ಲಿ ಹೋಗುತ್ತಿದ್ದ ಯುವತಿಯನ್ನು ತಡೆದು ಕೊಲೆ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದ. ಬಳಿಕ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಕೊನೆಗೂ ಬದುಕುಳಿಯಲಿಲ್ಲ.
ನಡೆದ ಘಟನೆ ಏನು?: ದಾವಣಗೆರೆ ನಗರದ ಪಿಜೆ ಬಡಾವಣೆಯ ಚರ್ಚ್ ಎದುರಿಗೆ ಸಾದತ್ ಅಲಿಯಾಸ್ ಚಾಂದ್ ಪೀರ್ (29) ತಾನು ಪ್ರೀತಿಸಿದ ಹುಡುಗಿ ಸಿಗಲಿಲ್ಲ ಎಂಬ ಕಾರಣಕ್ಕೆ ( ಒನ್ ಸೈಡ್ ಲವ್) ಯುವತಿ ಚಾಂದ್ ಸುಲ್ತಾನಾ (24) ಳನ್ನು ನಡುರಸ್ತೆಯಲ್ಲೇ ಕೊಲೆ ಮಾಡಿ ಪರಾರಿಯಾಗಿದ್ದ. ಬಳಿಕ ತಾನೂ ಸಹ ಆತ್ಮಹತ್ಯೆಗೆ ಯತ್ನಿಸಿದ್ದನು. ಈ ವಿಚಾರ ತಿಳಿದ ಪೋಲಿಸರು ಆರೋಪಿ ಸಾದತ್ನ ಪ್ರಾಣ ಉಳಿಸಲು ದಾವಣಗೆರೆ ಸಿಟಿ ಸೆಂಟ್ರಲ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ ಚಿಕಿತ್ಸೆ ಫಲಿಸದೇ ಆರೋಪಿ ಸಾದತ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.
ನಿನ್ನೆ ನಡೆದ ಕೊಲೆ ಇಡೀ ಬೆಣ್ಣೆ ನಗರಿಯನ್ನು ಬೆಚ್ಚಿ ಬೀಳಿಸಿತ್ತು. ಇದರ ಸಂಬಂಧ ದಾವಣಗೆರೆ ನಗರದ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಓದಿ: ದಾವಣಗೆರೆ: ಪ್ರೀತಿ ನಿರಾಕರಿಸಿದ ಯುವತಿಯನ್ನ ಹಾಡಹಗಲೇ ಕೊಂದ ಪಾಗಲ್ಪ್ರೇಮಿ