ETV Bharat / state

ದಾವಣಗೆರೆ ವಿವಿ: ಚಿನ್ನದ ಪದಕ ಪಡೆಯುವಲ್ಲಿ ವಿದ್ಯಾರ್ಥಿನಿಯರ ಮೇಲುಗೈ

ದಾವಣಗೆರೆ ವಿವಿಯಲ್ಲಿ ನಡೆದ ಹತ್ತನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿನಿಯರೇ ಹೆಚ್ಚಿನ ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು ಗಮನ ಸೆಳೆದಿದ್ದಾರೆ.

ದಾವಣಗೆರೆ ವಿವಿಯಲ್ಲಿ ನಡೆದ ಹತ್ತನೇ ಘಟಿಕೋತ್ಸವ

author img

By

Published : Feb 28, 2023, 5:20 PM IST

Updated : Feb 28, 2023, 5:53 PM IST

ದಾವಣಗೆರೆ ವಿವಿಯಲ್ಲಿ ನಡೆದ ಹತ್ತನೇ ಘಟಿಕೋತ್ಸವ

ದಾವಣಗೆರೆ: ಇಂದು ದಾವಣಗೆರೆ ವಿವಿಯ ಹತ್ತನೇ ಘಟಿಕೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಸಾಕಷ್ಟು ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಮುಡುಗೇರಿಸಿಕೊಂಡು ಹೆತ್ತವರಿಗೆ ಕೀರ್ತಿ ತಂದಿದ್ದಾರೆ. ಇನ್ನು ವಿಶೇಷ ಎಂದರೆ ಚಿನ್ನದ ಪದಕಗಳನ್ನು ಪಡೆಯುವಲ್ಲಿ ಹೆಣ್ಣು ಮಕ್ಕಳೇ ಹೆಚ್ಚು ಪದಕಗಳಿಗೆ ಕೊರೊಳೊಡ್ಡಿದರು. ಸ್ನಾತಕ ಹಾಗೂ ಸ್ನಾತಕೋತ್ತರ ವಿಭಾಗದಲ್ಲಿ ಸೇರಿದಂತೆ ಪಿಹೆಚ್​ಡಿ ಪದವಿ ಪಡೆಯುವುದರಲ್ಲೂ ಕೂಡ ವಿದ್ಯಾರ್ಥಿನಿಯರು ಮುಂದಿದ್ದರು. ಅತಿ ಹೆಚ್ಚು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಹೆತ್ತವರ ಸಂತಸಕ್ಕೆ ಇವರೆಲ್ಲ ಕಾರಣರಾದರು.

ದಾವಣಗೆರೆ ತಾಲೂಕಿನ ತೋಳಹುಣಸೆ ಗ್ರಾಮದ ಬಳಿ ಇರುವ ಧಾರವಾಡ ವಿವಿಯಲ್ಲಿಂದು ಕುಲಪತಿ ಹಾಗೂ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರ ನೇತೃತ್ವದಲ್ಲಿ ಹತ್ತನೇ ಘಟಿಕೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಿತು. ಈ ಘಟಿಕೋತ್ಸವದಲ್ಲಿ ಸಾವಿರಾರು ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಮುಡಿಗೇರಿಸಿಕೊಂಡು ಸಂತಸಪಟ್ಟರು. ಇನ್ನು ವಿಶೇಷ ಎಂದರೆ ಈ ಹತ್ತನೇ ಘಟಿಕೋತ್ಸವದಲ್ಲಿ ಹೆಣ್ಣು ಮಕ್ಕಳೇ ಅತಿ ಹೆಚ್ಚು ಚಿನ್ನದ ಪದಕಗಳನ್ನು ಪಡೆಯುವ ಮೂಲಕ ಪೋಷಕರಿಗೆ ಕೀರ್ತಿ ತಂದರು.

ಸ್ನಾತಕೋತ್ತರ ಪದವಿಗಳಲ್ಲಿ 2021-22ನೇ ಸಾಲಿನಲ್ಲಿ 1,161 ಮಹಿಳಾ ವಿದ್ಯಾರ್ಥಿಗಳು ಹಾಗೂ 638 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 1,700 ವಿದ್ಯಾರ್ಥಿಗಳು ಪದವಿ ಪಡೆದ್ರು. ಇನ್ನು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳು ಸೇರಿ ಒಟ್ಟು 13,978 ವಿದ್ಯಾರ್ಥಿಗಳು ಪದವಿ ಪಡೆದುಕೊಂಡರು.

2021-22 ನೇ ಸಾಲಿನಲ್ಲಿ ಒಟ್ಟು 81 ಸ್ವರ್ಣ ಪದಕಗಳಲ್ಲಿಂದು ಸ್ನಾತಕ ಪದವಿಯಲ್ಲಿ 10 ಮಹಿಳಾ ಹಾಗೂ 01 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 14 ವಿದ್ಯಾರ್ಥಿಗಳು 22 ಸ್ವರ್ಣ ಪದಕಗಳನ್ನ ಪಡೆದರು ಹಾಗೂ ಸ್ನಾತಕೋತ್ತರ ಪದವಿಯಲ್ಲಿ 22 ಮಹಿಳಾ ಹಾಗೂ 09 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 31 ವಿದ್ಯಾರ್ಥಿಗಳು 59 ಸ್ವರ್ಣ ಪದಕಗಳನ್ನು ಸ್ವೀಕರಿಸಿದರು. ಇನ್ನು ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳಲ್ಲಿ ಒಟ್ಟು 32 ಮಹಿಳಾ ವಿದ್ಯಾರ್ಥಿನಿಗಳು ಹಾಗೂ 13 ಪುರುಷ ವಿದ್ಯಾರ್ಥಿಗಳು ಸೇರಿ ಒಟ್ಟು 45 ವಿದ್ಯಾರ್ಥಿಗಳು 81 ಚಿನ್ನದ ಪದಕಗಳನ್ನು ಹಂಚಿಕೊಂಡು ನಾವು ಯಾರಿಗೇನು ಕಮ್ಮಿ ಇಲ್ಲ ಎಂದು ಮಹಿಳಾ ವಿದ್ಯಾರ್ಥಿಗಳು ತೋರಿಸಿಕೊಟ್ಟರು.

10 ಪಿಹೆಚ್​ಡಿ ಪಡೆದ ವಿದ್ಯಾರ್ಥಿಗಳು: ಇನ್ನು ಪಿಹೆಚ್​ಡಿ ವಿಭಾಗದಲ್ಲಿ ಮಾತ್ರ ಪುರುಷ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದು ಮತ್ತೊಂದು ವಿಶೇಷವಾಗಿತ್ತು. 10 ಪುರುಷ ವಿದ್ಯಾರ್ಥಿಗಳು ಪಿಹೆಚ್​ಡಿ ಪಡೆದರೆ ಇತ್ತ ಕೇವಲ 04 ಜನ ಮಹಿಳಾ ವಿದ್ಯಾರ್ಥಿನಿಯರು ಪಿಹೆಚ್​ಡಿ ಪಡೆಯುವಲ್ಲಿ ಸಫಲರಾದ್ರು. ಇದಲ್ಲದೇ ಎಂಫಿಲ್ ಪದವಿಯಲ್ಲಿ ವಿದ್ಯಾರ್ಥಿಗೆ ಪದವಿ ಪ್ರದಾನ ಮಾಡಲಾಯಿತು.

ಪದವಿಗಳನ್ನು ಪಡೆಯುವಲ್ಲಿ ಕೂಡ ಮಹಿಳಾ ವಿದ್ಯಾರ್ಥಿಗಳು ಮೇಲುಗೈ ಸಾಧಿಸಿದ್ದು, 12,179 ಸ್ನಾತಕ ಪದವಿಗಳಲ್ಲಿ 7,219 ವಿದ್ಯಾರ್ಥಿನಿಯರು ಹಾಗೂ 4,960 ವಿದ್ಯಾರ್ಥಿಗಳು ಪದವಿ ಪಡೆದರು. ಇದಲ್ಲದೇ ಸ್ನಾತಕೋತ್ತರ ಪದವಿಗಳನ್ನು ಪಡೆಯುವುದರಲ್ಲೂ ಮಹಿಳಾ ವಿದ್ಯಾರ್ಥಿಗಳು ಹೆಚ್ಚು ಪದವಿಗಳನ್ನು ಸ್ವೀಕರಿಸಿ ಪ್ರಶಂಸೆಗೆ ಪಾತ್ರರಾದರು. ಒಟ್ಟು 1,799 ಪದವಿಗಳಲ್ಲಿ 1,161 ಪದವಿಗಳನ್ನು ಮಹಿಳಾ ವಿದ್ಯಾರ್ಥಿಗಳು ಪಡೆದರೆ, ಇತ್ತ ಪುರುಷ ವಿದ್ಯಾರ್ಥಿಗಳು ಕೇವಲ 638 ಪದವಿಗಳನ್ನು ಸ್ವೀಕರಿಸಿದ್ದು ವಿಶೇಷವಾಗಿತ್ತು.

ಇದನ್ನೂ ಓದಿ : ಶಿಗ್ಗಾಂವಿ ಗ್ರಾಮ ದೇವತೆ ಆರ್ಶೀವಾದದಿಂದ ನಾನು ಮುಖ್ಯಮಂತ್ರಿಯಾಗಿದ್ದೇನೆ: ಬಸವರಾಜ್ ಬೊಮ್ಮಾಯಿ

Last Updated : Feb 28, 2023, 5:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.