ದಾವಣಗೆರೆ: ದಾವಣಗೆರೆಯ ತಹಶೀಲ್ದಾರ್ ಗಿರೀಶ್, ತಾವು ಅಧಿಕಾರಿ ಎಂಬ ಅಹಂ ಬಿಟ್ಟು ನಿರಾಶ್ರಿತರೊಂದಿಗೆ ಕುಣಿದು ಕುಪ್ಪಳಿಸಿದ್ದಾರೆ. ಕುಲದಲ್ಲಿ ಕೀಳ್ಯಾವುದೋ, ಹುಚ್ಚಪ್ಪ ಮತದಲ್ಲಿ ಮೇಲ್ಯಾವುದೋ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು ಎಂಬ ಹಾಡುಗಳಿಗೆ ಹೆಜ್ಜೆ ಹಾಕಿ ಗಮನ ಸೆಳೆದಿದ್ದಾರೆ.
ತಾಲೂಕಿನ ತುರ್ಚಘಟ್ಟ ಗ್ರಾಮದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ನಿರಾಶ್ರಿತರ ಕೇಂದ್ರದಲ್ಲಿ ಕಳೆದ ದಿನ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಊರು, ಮನೆ, ಕುಟುಂಬ ಬಿಟ್ಟು ಬಂದಿದ್ದ ನಿರಾಶ್ರಿತರು ಹಬ್ಬ ಆಚರಿಸಿರಲಿಲ್ಲ. ಈ ಹಿನ್ನೆಲೆ ತಹಶೀಲ್ದಾರ್ ಹಾಗೂ ನಿರಾಶ್ರಿತರ ಕೇಂದ್ರದ ಪ್ರಭಾರ ಅಧೀಕ್ಷಕರಾದ ನಳಿನಿ ಗಣೇಶನನ್ನು ಪ್ರತಿಷ್ಠಾಪಿಸಿ ಗಣೇಶೋತ್ಸವ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ನಿರಾಶ್ರಿತರಿಗೆ ರಂಜಿಸಿದರು.
ಇದನ್ನೂ ಓದಿ: ನಡುರಸ್ತೆಯಲ್ಲಿ ಮಹಿಳೆ ಕೈಹಿಡಿದು ಎಳೆದಾಡಿದ ಪ್ರಕರಣ: ಜೆಡಿಎಸ್ ಮುಖಂಡನ ಬಂಧನ
ಮೂರು ದಿನಗಳ ಬಳಿಕ ಗಣೇಶನ ನಿಮಜ್ಜನ ಮಾಡಲಾಯಿತು.