ETV Bharat / state

ಸುಲಲಿತ ಜೀವನ ನಡೆಸಲು ದಾವಣಗೆರೆ ಬೆಸ್ಟ್: ದೇಶದಲ್ಲಿ 9ನೇ ಸ್ಥಾನ

2019 ರಲ್ಲಿ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ‌ ಆದೇಶದಂತೆ ದಾವಣಗೆರೆಯ ಸ್ಮಾರ್ಟ್ ಸಿಟಿ ಯೋಜನೆಯ ಎಂಡಿ ಡಾ. ರವೀಂದ್ರ ಮಲ್ಲಪುರರವರ ನೇತೃತ್ವದಲ್ಲಿ ಅಧಿಕಾರಿಗಳು ಸರ್ವೇ ಮಾಡಿದ್ದರು.

davangere
ಸುಲಲಿತ ಜೀವನ ನಡೆಸಲು ರಾಜ್ಯದಲ್ಲೇ ದಾವಣಗೆರೆ ಬೆಸ್ಟ್..
author img

By

Published : Mar 7, 2021, 7:05 PM IST

ದಾವಣಗೆರೆ: ಸುಲಲಿತ ಜೀವನ ನಡೆಸಲು ನಗರಗಳು ಯಾವ ರೀತಿ ಅರ್ಹತೆ ಪಡೆದಿವೆ ಎಂದು 2019ರಲ್ಲಿ ಕೇಂದ್ರ ಸರ್ಕಾರ ಸರ್ವೇ ಹಮ್ಮಿಕೊಂಡಿತ್ತು. ಈ ಸರ್ವೇ ಪೂರ್ಣಗೊಳಿಸಿದ ಬಳಿಕ ಇದೀಗ ನಗರಗಳ ಸರ್ವೇ ಕಾರ್ಯದ ಫಲಿತಾಂಶವನ್ನು ಕೇಂದ್ರ ಸರ್ಕಾರ ಘೋಷಿಸಿದ್ದು, ಸುಲಲಿತ ಜೀವನ ನಡೆಸಲು ಬೆಣ್ಣೆ ನಗರಿ ರಾಜ್ಯದಲ್ಲೇ ಬೆಸ್ಟ್ ಎಂದು ಕೇಂದ್ರ ಸರ್ಕಾರ 9ನೇ ರ್‍ಯಾಂಕ್ ನೀಡಿದೆ.

ಸುಲಲಿತ ಜೀವನ ನಡೆಸಲು ರಾಜ್ಯದಲ್ಲೇ ದಾವಣಗೆರೆ ಬೆಸ್ಟ್

ದಾವಣಗೆರೆಯನ್ನು ಮಧ್ಯ ಕರ್ನಾಟಕ ಕೇಂದ್ರ ಬಿಂದು ಎಂಬ ಕಾರಣಕ್ಕಾಗಿ ಕೇಂದ್ರ ಸರ್ಕಾರ ಸ್ಮಾರ್ಟ್ ಸಿಟಿಗೆ ಆಯ್ಕೆ ಮಾಡಿ ಘೋಷಣೆ ಮಾಡಿತ್ತು. ಈ ಘೋಷಣೆ ಮಾಡಿದ‌ ಬೆನ್ನಲ್ಲೇ ದಾವಣಗೆರೆ ನಗರ ಅಷ್ಟೇ ಅಭಿವೃದ್ಧಿ ಹೊಂದಿದೆ.

ಸುಲಲಿತ ಜೀವನ ನಡೆಸಲು 13 ಅಂಶಗಳಲ್ಲೂ ಅರ್ಹತೆ ಪಡೆದ ಬೆಣ್ಣೆ ನಗರಿ:

ಸುಲಲಿತ ಜೀವನ ನಡೆಸಲು ಅರ್ಹ ನಗರವಾಗಲು ಕೇಂದ್ರ ನಗರಾಭಿವೃದ್ಧಿ ಇಲಾಖೆ 13 ಅಂಶಗಳ ಸರ್ವೇ ನಡೆಸಿತ್ತು. ವಿದ್ಯಾಭ್ಯಾಸ, ಆರೋಗ್ಯ ಸೌಲಭ್ಯ, ಮನೆ, ಸ್ವಚ್ಛತೆ, ಸಂಚಾರ ಸೌಲಭ್ಯ, ಪೊಲೀಸ್​ ಭದ್ರತೆ, ಮನೋರಂಜನೆ, ಆರ್ಥಿಕತೆ, ಈ ಎಲ್ಲಾ ಸೌಲಭ್ಯ ಇದೆಯೇ? ಎಂಬ ಆನ್ಲೈನ್ ಸರ್ವೇಯನ್ನು ಕೇಂದ್ರ ಸರ್ಕಾರ ಎಲ್ಲ ಸ್ಮಾರ್ಟ್ ಸಿಟಿಗಳಲ್ಲಿ ಒಮ್ಮೆಲೆ ಸರ್ವೇ ಮಾಡಿದ ಬೆನ್ನಲ್ಲೇ ಜನರು ತಮ್ಮ ಅಭಿಪ್ರಾಯ ಸಲ್ಲಿಸಿದ್ದರು. ಈ ಎಲ್ಲಾ 13 ಅಂಶಗಳಲ್ಲಿ ದಾವಣಗೆರೆ ಹತ್ತು ಲಕ್ಷ ಜನಸಂಖ್ಯೆ ನಗರಗಳ ಪೈಕಿ ಇಡೀ ದೇಶದಲ್ಲಿ 9 ರ್‍ಯಾಂಕ್ ಪಡೆದುಕೊಂಡಿದೆ.

ಹೇಗೆ ನಡೆದಿದೆ ಸರ್ವೇ ಕಾರ್ಯ?

2019 ರಲ್ಲಿ ಕೇಂದ್ರ ಸರ್ಕಾರದ ನಗರಾಭಿವೃದ್ಧಿ ಇಲಾಖೆಯ‌ ಆದೇಶದಂತೆ ದಾವಣಗೆರೆಯ ಸ್ಮಾರ್ಟ್ ಸಿಟಿ ಯೋಜನೆಯ ಎಂಡಿ ಡಾ. ರವೀಂದ್ರ ಮಲ್ಲಪುರರವರ ನೇತೃತ್ವದಲ್ಲಿ ಅಧಿಕಾರಿಗಳು ಸರ್ವೇ ಮಾಡಿದ್ದರು. ಈ ಸರ್ವೇಯಲ್ಲಿ ಎರಡು ಭಾಗಗಳಿದ್ದು, ಒಂದು ಸಾರ್ವಜನಿಕರ ಅಭಿಪ್ರಾಯ ಸಂಗ್ರಹ ಮತ್ತೊಂದು ಆನ್ಲೈನ್ ನಲ್ಲಿ ದಾಖಲೆಗಳನ್ನು ಭರ್ತಿ ಮಾಡುವಂತಹದ್ದಾಗಿತ್ತು.

ದಾವಣಗೆರೆಯಲ್ಲಿ ಸುಲಲಿತ ಜೀವನ ನಡೆಸಲು ಶಾಲಾ ಕಾಲೇಜು ಹಾಗೂ ಜನ ಸಾಮಾನ್ಯರಿಂದ ಅಧಿಕಾರಿಗಳು ಜನರ ಅಭಿಪ್ರಾಯ ಸಂಗ್ರಹ ಮಾಡಿ, ಬಳಿಕ ಆನ್ಲೈನ್​ನಲ್ಲಿಯೂ ಜನರ ಅಭಿಪ್ರಾಯ ಸಂಗ್ರಹಿಸಲಾಗಿತ್ತು. ಆ ಪೈಕಿ 91.5 ರಷ್ಟು ಜನಸಾಮಾನ್ಯರು ದಾವಣಗೆರೆ ನಗರದ ಬಗ್ಗೆ ಒಳ್ಳೆಯ ಅಭಿಪ್ರಾಯ ನೀಡಿದ್ದರಿಂದ ಈಸ್‌ ಆಫ್‌ ಲಿವಿಂಗ್‌ನಲ್ಲಿ ದಾವಣಗೆರೆ 9ನೇ ಸ್ಥಾನ ಪಡೆದರೆ, ಅಭಿಪ್ರಾಯ ಸಂಗ್ರಹಣೆಯಲ್ಲಿ 3 ನೇ ಸ್ಥಾನ ಪಡೆದಿದೆ.

ಕೇಂದ್ರ ನಗರಾಭಿವೃದ್ಧಿ ಸಚಿವ ಹೆಚ್​.ಎಸ್.ಪುರಿ ರ್‍ಯಾಂಕ್ ಘೋಷಣೆ ಮಾಡಿದ್ದು, ಇನ್ನು ಉನ್ನತ ಮಟ್ಟಕ್ಕೆ ದಾವಣಗೆರೆ ನಗರವನ್ನು ಕೊಂಡೊಯ್ಯುವ ಭರವಸೆಯನ್ನು ಸ್ಮಾರ್ಟ್ ಸಿಟಿ ಅಧಿಕಾರಿಗಳು ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.