ETV Bharat / state

ಬೆಣ್ಣೆನಗರಿ ಹಿರಿಮೆಯ ಕಿರೀಟ ಈ ಸುಂದರ ಐತಿಹಾಸಿಕ 'ಪುಷ್ಕರಣಿ' - Davangere news

ರಾಜ್ಯದಲ್ಲೇ ಪುಷ್ಕರಣಿ ಮಧ್ಯೆ ಅತಿದೊಡ್ಡ ಮಂಟಪ ಇರುವುದು ಸಂತೆಬೆನ್ನೂರು ಮುಸಾಫೀರ್‌ಖಾನದಲ್ಲಿ ಮಾತ್ರ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿರುವ ಈ ಐತಿಹಾಸಿಕ ಪುಷ್ಕರಣಿ ಇದೆ.

pushkarani
ದಾವಣಗೆರೆಯ ಐತಿಹಾಸಿಕ 'ಪುಷ್ಕರಣಿ'
author img

By

Published : Jan 27, 2021, 7:31 AM IST

Updated : Jan 27, 2021, 12:30 PM IST

ದಾವಣಗೆರೆ: ಸ್ವಾತಂತ್ರ್ಯ ಪೂರ್ವದಲ್ಲಿ ಆ ಗ್ರಾಮ, ಜಿಲ್ಲೆಯ ಪ್ರಮುಖ ವ್ಯಾಪಾರ ಕೇಂದ್ರವಾಗಿತ್ತು. ವ್ಯಾಪಾರ ಕೇಂದ್ರ ಆಗಿದ್ದರಿಂದ ಅ ಗ್ರಾಮಕ್ಕೆ ಸಂತೆಬೆನ್ನೂರು ಎಂಬ ಹೆಸರು ಕೂಡ ನಾಮಕರಣ ಮಾಡಲಾಯಿತು. ಆದರೆ ಅದೇ ಗ್ರಾಮ ಇದೀಗ ಸುಂದರ ಐತಿಹಾಸಿಕ ಪುಷ್ಕರಣಿಯನ್ನು ತನ್ನ ಮಡಿಲಿನಲ್ಲಿಟ್ಟುಕೊಂಡು ರಾಜ್ಯ ಅಂತರಾಜ್ಯದ ಪ್ರವಾಸಿಗರನ್ನು ಸೆಳೆದು ಸಂತೆಬೆನ್ನೂರು ಗ್ರಾಮದ ಹಿರಿಮೆಯನ್ನು ಸಾರುತ್ತಿದೆ.

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಸಂತೆಬೆನ್ನೂರು ಗ್ರಾಮದಲ್ಲಿರುವ ಐತಿಹಾಸಿಕ ಪುಷ್ಕರಣಿ ಇದೀಗ ಪ್ರವಾಸಿಗರನ್ನು ತನ್ನತ್ತ ಸೆಳೆಯುತಿದೆ. ಪುಷ್ಕರಣಿಯ‌ ಎಂಟು ದಿಕ್ಕುಗಳಿಗೆ ಎಂಟು ಮಂಟಪಗಳಿದ್ದವು ಇದೀಗ ಆರು ಮಾತ್ರ ಉಳಿದಿದ್ದು, ಇಡೀ ರಾಜ್ಯದಲ್ಲೇ ಪುಷ್ಕರಣಿ ಮಧ್ಯೆ ಅತಿದೊಡ್ಡ ಮಂಟಪ ಇರುವುದು ಸಂತೆಬೆನ್ನೂರು ಮುಸಾಫೀರ್‌ಖಾನದಲ್ಲಿ ಮಾತ್ರ ಎಂಬುದು ಸ್ಥಳೀಯರ ವಾದವಾಗಿದೆ.

ದಾವಣಗೆರೆಯ ಐತಿಹಾಸಿಕ 'ಪುಷ್ಕರಣಿ'

ನೀರಿನ ಮಧ್ಯೆ ಇರುವ ಅತಿದೊಡ್ಡ ಭವ್ಯವಾದ ಮಂಟಪ ಸುಂದರ ಕಲಾಕೃತಿಯಿಂದ ಕೂಡಿದ್ದು, ಇದರ ಎದುರೇ ಮುಸಾಫೀರ್ ಖಾನಾ (ಮಸೀದಿ) ಇದ್ದು, ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಚಿತ್ರದುರ್ಗದ ಪಾಳೇಗಾರರ ಆಡಳಿತವಧಿಯಲ್ಲಿ ಈ ಪುಷ್ಕರಣಿ ನಿರ್ಮಾಣ ಮಾಡಲಾಗಿದ್ದು, ಬಳಿಕ ಮುಸ್ಲಿಂ ಅರಸನೊಬ್ಬನ ಆಕ್ರಮಣಕ್ಕೊಳಗಾಗಿ ವಶವಾಯಿತಂತೆ. ಈ ಪುಷ್ಕರಣಿಗೆ ದಾವಣಗೆರೆ ಸೇರಿದಂತೆ ರಾಜ್ಯದಂತ್ಯ ಪ್ರವಾಸಿಗರು ಕುಟುಂಬ ಸಮೇತ ಇಲ್ಲಿಗೆ ಒಂದು ದಿನದ ಟ್ರಿಪ್‌ ಬರುತ್ತಾರೆ. ಇದಲ್ಲದೇ ಮಹಾರಾಷ್ಟ್ರ, ಆಂಧ್ರಪ್ರದೇಶದ, ತಮಿಳುನಾಡು, ಕೇರಳ ಮುಂತಾದ ರಾಜ್ಯದ ಪ್ರವಾಸಿಗರನ್ನು ಈ ಪುಷ್ಕರಣಿಯ ಮಂಟಪಗಳು ಆಕರ್ಷಿಸುತ್ತಿವೆ. ದಾವಣಗೆರೆ ನಗರದಿಂದ ಸುಮಾರು 35 ಕಿಮೀ ದೂರ ಕ್ರಮಿಸಿದ್ರೆ ಸಾಕು ಈ ಪ್ರವಾಸಿ ಸ್ಥಳವನ್ನು ತಲುಪಬಹುದಾಗಿದೆ. ಇಲ್ಲಿಗೆ ಪ್ರವೇಶ ಶುಲ್ಕವನ್ನು ನಿಗದಿಪಡಿಸಿಲ್ಲ, ಬದಲಾಗಿ ಉಚಿತವಾಗಿ ಪುಷ್ಕರಣಿ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.

ಪಾಳೇಗಾರರ ಕಾಲದಲ್ಲಿ ನಿರ್ಮಾಣ ಆಗಿದೆಯಂತೆ ಈ ಪುಷ್ಕರಣಿ..!
ಚಿತ್ರದುರ್ಗದಲ್ಲಿ ಆಡಳಿತ ನಡೆಸುತ್ತಿದ್ದ ಪಾಳೇಗಾರರ ವಂಶಕ್ಕೆ ಸೇರಿದ ಕೆಂಗಪ್ಪನಾಯಕನ‌ ಮಗ ಹಿರಿಯ ಹನುಮಪ್ಪ ನಾಯಕ ಇಲ್ಲಿ 100 ಅಡಿ ಅಗಲ ಹಾಗೂ 100 ಅಡಿ ಉದ್ದದ ಸುಂದರವಾದ ಮೆಟ್ಟಿಲುಗಳಿಂದ ಕೂಡಿದ ಎಂಟು ದಿಕ್ಕುಗಳಿಗೆ ಎಂಟು ಮಂಟಪಗಳನ್ನು ಹೊಂದಿರುವ ಪುಷ್ಕರಣಿ ನಿರ್ಮಾಣ ಮಾಡಿದ್ದನಂತೆ. ಈ ಮಂಟಪ ಎರಡು ಅಂತಸ್ತುಗಳಿಂದ ಕೂಡಿದ್ದು, ಎರಡು ಅಂತಸ್ತುಗಳು ಕಲ್ಲಿನಿಂದ‌ ನಿರ್ಮಿಸಲಾಗಿದೆ. ಇನ್ನು ಮಂಟಪದ ಗೋಪುರಗಳು ಮಣ್ಣು ಮತ್ತು ಇಟ್ಟಿಗೆಯಿಂದ ನಿರ್ಮಿಸಲಾಗಿದೆ. ಪುಷ್ಕರಣಿ ಆವರಣದಲ್ಲಿ ಹಿರೇಕೋಗಿಲು, ಕಲ್ಲೇಶ್ವರ, ಮಲ್ಲೇಶ್ವರ, ರಾಮಚಂದ್ರ ಪಾಳುಬಿದ್ದ ಹಿಂದು ದೇವಲಯಗಳಿದ್ದು ಪ್ರವಾಸಿಗರು ಇದನ್ನು ಕಣ್ತುಂಬಿಕೊಳ್ಳುತ್ತಾರೆ.

ಇಲ್ಲಿ ಮುಸ್ಲಿಂರ ಮುಸಾಫೀರ್ ಖಾನಾ ಕೂಡ ಇದೆ...!
1639ರಲ್ಲಿ ಈ ಪುಷ್ಕರಣಿ ಮೇಲೆ ರಣದುಲ್ಲಾ ಖಾನ್ ಎಂಬ ಅರಸನೊಬ್ಬ ಇದರ ಮೇಲೆ ದಾಳಿ ನಡೆಸಿ, ಇಲ್ಲೊಂದು ಠಾಣ್ಯವನ್ನು ನಿರ್ಮಿಸಿದ್ದನಂತೆ. ಬಳಿಕ ಈ ಪುಷ್ಕರಣಿ ಎದುರಿರುವ ಮುಸಾಫೀರ್ ಖಾನಾವನ್ನು (ಮಸೀದಿ) ನಿರ್ಮಾಣ ಮಾಡಿದ್ದು, ಇದೇ ಮುಸ್ಲಿಂ ಅರಸನಂತೆ. ಆದರೆ, ಇದೀಗ ಅದು ಮಸೀದಿಯಾಗದೇ ಮುಸಾಫೀರ್ ಖಾನಾ ಆಗಿ ಭಾರತೀಯ ಪುತಾತತ್ವ ಇಲಾಖೆ ಮಾರ್ಪಾಡು ಮಾಡಿದೆ. ಬಳಿಕ ಬಿದನೂರಿನ ಅರಸರು ಇಲ್ಲಿ‌ ನಾಶವಾಗಿದ್ದ ಕೋಟೆ ಕೊತ್ತಲಗಳನ್ನು ದುರಸ್ತಿಗೊಳಿಸಿದರು ಎಂದು ಇತಿಹಾಸ ಸಾರುತ್ತಿದೆ.

ಇದೀಗ ಈ ಐತಿಹಾಸಿಕ ಪುಷ್ಕರಣಿ ಭಾರತೀಯ ಪುರಾತತ್ವ ಇಲಾಖೆಗೊಳಪಟ್ಟಿದ್ದು, ಇಲಾಖೆಯೇ ಪೋಷಣೆ ಮಾಡುತ್ತಿದೆ. ಇನ್ನು ಇಲ್ಲಿರುವ ಎಂಟು ಮಂಟಪಗಳ ಪೈಕಿ ಆರು ಮಂಟಪಗಳ ಮಾತ್ರ ಉಳಿದಿದ್ದು, ಅದನ್ನು ಉಳಿಸುವ ಕೆಲಸವನ್ನು ಪುರಾತತ್ವ ಇಲಾಖೆ ಮಾಡಬೇಕಾಗಿದೆ.

Last Updated : Jan 27, 2021, 12:30 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.