ETV Bharat / state

ಯುವರತ್ನ ಸಿನಿಮಾ ಕಣ್ತುಂಬಿಕೊಂಡ ದಾವಣಗೆರೆ ಮಠಾಧೀಶರು - Yuvaratna film

ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀ, ಪಂಚಮಸಾಲಿ ಮಠದ ವಚನಾನಂದ ಶ್ರೀ ಸೇರಿದಂತೆ ದಾವಣಗೆರೆ ವಿರಕ್ತಮಠದ ಬಸವಪ್ರಭು ಶ್ರೀ ಒಟ್ಟಾಗಿ ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದರು.

Yuvaratna film
Yuvaratna film
author img

By

Published : Apr 8, 2021, 5:56 PM IST

ದಾವಣಗೆರೆ: ಸಾಮಾಜಿಕ ಕಳಕಳಿಯಿಂದ‌ ಕೂಡಿರುವ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರವನ್ನು ದಾವಣಗೆರೆ ಮಠಾಧೀಶರು ಚಿತ್ರಮಂದಿರಕ್ಕೆ ತೆರಳಿ ವೀಕ್ಷಿಸಿದರು.

ಕಾಗಿನೆಲೆ ಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ, ವಾಲ್ಮೀಕಿ ಪೀಠದ ಪ್ರಸನ್ನಾನಂದ ಶ್ರೀ, ಪಂಚಮಸಾಲಿ ಮಠದ ವಚನಾನಂದ ಶ್ರೀ ಸೇರಿದಂತೆ ದಾವಣಗೆರೆ ವಿರಕ್ತಮಠದ ಬಸವಪ್ರಭು ಶ್ರೀ ಒಟ್ಟಾಗಿ ದಾವಣಗೆರೆಯ ಗೀತಾಂಜಲಿ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಿಸಿದರು.

ಮಠಾಧೀಶರು ಕಳೆದ ದಿನ ಸಂಜೆ ಸಿನಿಮಾ ವೀಕ್ಷಿಸಿದ್ದು, ಅದನ್ನು ಹರಿಹರ ಪಂಚಮಸಾಲಿ ಪೀಠದ ಜಗದ್ಗುರು ವಚನಾನಂದ ಶ್ರೀ ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡಿದ್ದಾರೆ.

ಇನ್ನು ತಮ್ಮ ಫೇಸ್ಬುಕ್ ಖಾತೆಯಲ್ಲಿ ವಚನಾನಂದ ಶ್ರೀಯವರು ಪ್ರಸ್ತುತ ಚಲನಚಿತ್ರಗಳು ಒಳ್ಳೆಯ ದಿಕ್ಕನ್ನು ತೋರಿಸುವ ಬದಲು ಬೇರೆ ಅಜೆಂಡಾಗಳನ್ನು ಪ್ರದರ್ಶಿಸಲ್ಪಡುತ್ತಿವೆ. ಕೆಲವೇ ಕೆಲ ಚಲನಚಿತ್ರಗಳು ಸಮಾಜದ ಒಳಿತಿಗಾಗಿ ಸಂದೇಶ ಸಾರುತ್ತಿವೆ.

ಇಂತಹ ಪ್ರಯತ್ನದಲ್ಲಿ ಪುನೀತ್ ರಾಜ್ ಕುಮಾರ್ ಮುಂದಿದ್ದು, ರಾಜಕುಮಾರ, ಇದೀಗ ಯುವರತ್ನ ಸಿನಿಮಾಗಳು ಸಮಾಜಕ್ಕೆ ಸಂದೇಶ ಸಾರುವ ಸಿನಿಮಾಗಳಾಗಿವೆ‌ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.