ETV Bharat / state

ಎಂಬಿಬಿಎಸ್ ಮಾಡಲು ಉಕ್ರೇನ್​ಗೆ ತೆರಳಿದ ಮಗ.. ದಾರಿ ಕಾಯುತ್ತಿರುವ ಪೋಷಕರು

author img

By

Published : Feb 24, 2022, 8:19 PM IST

ಉಕ್ರೇನ್ ಹಾಗೂ ರಷ್ಯಾ ನಡುವೆ ಯುದ್ಧ ಘೋಷಣೆಯಾಗಿದೆ. ಈಗಾಗಲೇ ರಷ್ಯಾ ಉಕ್ರೇನ್ ಮೇಲೆ ದಾಳಿ ಮಾಡಿದ್ದು, ಆತಂಕಕ್ಕೆ ಕಾರಣ ಆಗಿದೆ.

student
ಅಬೀದ್ ಅಲಿ

ದಾವಣಗೆರೆ: ಇಲ್ಲಿನ ಭಗತ್ ಸಿಂಗ್ ನಗರದ ನಿವಾಸಿಯಾದ ಶೌಕತ್ ಅಲಿ ಅವರ ಮಗ ಅಬೀದ್ ಅಲಿ ಎಂಬುವವರು ಉಕ್ರೇನ್ ದೇಶದ ಚರ್ನಿವಿತ್ಸಿ ನಗರದ ಬುಕವಿನಿಯನ್ ಸ್ಟೇಟ್ ಮೆಡಿಕಲ್ ಯುನಿವರ್ಸಿಟಿಯಲ್ಲಿ ಎಂಬಿಬಿಎಸ್ ಕಲಿಯಲು ತೆರಳಿದ್ದರು. ಇದೀಗ ಯುದ್ಧ ಆರಂಭವಾಗಿದ್ದರಿಂದ ಪೋಷಕರು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ.

ದೂರವಾಣಿ ಮೂಲಕ ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ನನ್ನ ಪುತ್ರ ಮಹ್ಮದ್ ಅಬೀದ್ ಅಲಿ ಉಕ್ರೇನ್ ಗೆ ಹೋಗಿ ಆರು ತಿಂಗಳಾಗಿದೆ. ಒಂದು ಸೆಮ್ ಮುಕ್ತಾಯವಾಗಿದೆ. ಉಕ್ರೇನ್ ಪರಿಸ್ಥಿತಿ‌ ನೋಡಿ ಕಳೆದ ತಿಂಗಳೇ ಮಗನನ್ನ ಕರೆತರುವ ಯೋಜನೆ ಇತ್ತು. ಆದರೆ, ವಿಶ್ವವಿದ್ಯಾಲಯದವರು ನಮಗೆ ಏನು ಆಗಲ್ಲ ಎಂದು ವಿಶ್ವಾಸ ನೀಡಿದರು. ಹಾಗಾಗಿ ಸುಮ್ಮನಾದೆವು. ಹೋಗುವವರೋ ಹೋಗಬಹುದು ಅಂತಾ ವಿವಿಯವರು ಕಳೆದ ದಿನ ಹೇಳಿದ್ದಾರೆ. ನಾಳೆ 25ಕ್ಕೆ ಟಿಕೆಟ್ ಬುಕ್ ಆಗಿತ್ತು. ಆದರೆ ಆ ಫ್ಲೈಟ್ ಕ್ಯಾನ್ಸಲ್‌ ಆಗಿದೆ. ಆತಂಕ ಪಡುವ ಅಗತ್ಯವಿಲ್ಲ. ಮಗ ಸುರಕ್ಷಿತವಾಗಿ ಮನೆಗೆ ಬರುತ್ತಾನೆ ಎಂಬ ವಿಶ್ವಾಸವಿದೆ‌ ಎಂದು ಪೋಷಕರು ಹೇಳಿದ್ದಾರೆ.

ವಿದೇಶಾಂಗ ಇಲಾಖೆ ಈ ವಿಚಾರದಲ್ಲಿ ಗಮನ ಹರಿಸಬೇಕಿದೆ. ಇನ್ನು ಮಗ ಅಬೀದ್ ಅಲಿಯೊಂದಿಗೆ ಇಡೀ ಕುಟುಂಬ ಸಂಪರ್ಕದಲ್ಲಿದೆ. ಈಗಾಗಲೇ ಫ್ಲೈ ಇಲ್ಲವೆ ರಸ್ತೆ ಮಾರ್ಗ ಮೂಲಕ ಬೇರೆ ದೇಶಗಳಿಗೆ ಕಳುಹಿಸಿ ಅಲ್ಲಿ ಭಾರತಕ್ಕೆ ಮಗ ಬರುವ ಸಾಧ್ಯತೆ ಇದೆ ಎಂದು ತಂದೆ ಶೌಕತ್ ಅಲಿ ಮಾಹಿತಿ ನೀಡಿದ್ದಾರೆ.

ಓದಿ: ತೋಟದ ಮನೆಯಲ್ಲಿ ಕತ್ತು ಸೀಳಿ ವ್ಯಕ್ತಿಯ ಬರ್ಬರ ಕೊಲೆ.. ಕೆ. ಆರ್​ ನಗರದಲ್ಲಿ ಹರಿಯಿತು ನೆತ್ತರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.