ETV Bharat / state

ಹಣ ಬಿಡಿಸಲು ಎಟಿಎಂಗೆ ಬರುವವರ ಕಾರ್ಡ್​​ ಬದಲಾಯಿಸಿ ವಂಚನೆ: ಆರೋಪಿ ಬಂಧನ - ಎಟಿಎಂ ಕಾರ್ಡ್ ಬದಲಾಯಿಸಿ ವಂಚನೆ

ಎಟಿಎಂಗಳಿಗೆ ಬರುವ ಗ್ರಾಹಕರನ್ನು ಟಾರ್ಗೆಟ್​ ಮಾಡಿ ಅವರ ಕಾರ್ಡ್​ ಬದಲಿಸಿ ಹಣ ಲಪಟಾಯಿಸುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

Davanagere police arrested accused
ದಾವಣಗೆರೆಯಲ್ಲಿ ಎಟಿಎಂ ಕಾರ್ಡ್​ ಬದಲಿಸಿ ವಂಚಿಸುತ್ತಿದ್ದ ಆರೋಪಿ ಬಂಧನ
author img

By

Published : Mar 4, 2022, 7:24 PM IST

ದಾವಣಗೆರೆ: ಎಟಿಎಂ​ಗಳಿಗೆ ಹಣ ಬಿಡಿಸಲು ಬರುವ ಜನರಿಗೆ ಸಹಾಯ ಮಾಡುವ ನೆಪದಲ್ಲಿ ಅಮಾಯಕರ ಕಾರ್ಡ್​ಗಳನ್ನು ಬದಲಾಯಿಸಿ ಮೋಸ ಮಾಡಿ ಹಣ ಲಪಟಾಯಿಸುತ್ತಿದ್ದ ಖದೀಮನನ್ನು ಪೊಲೀಸರು ಬಂಧಿಸಿದ್ದಾರೆ.

ಸಿಸಿಟಿವಿ ದೃಶ್ಯ

ಹಾವೇರಿ ಜಿಲ್ಲೆಯ ರಾಣೇಬೆನ್ನೂರು ನಿವಾಸಿ ಯೋಗಾನಂದ (47) ಬಂಧಿತ ಆರೋಪಿ. ಈತ ಪಿಎಚ್​​ಡಿ ಪದವೀಧರನಾಗಿದ್ದು, ಎಟಿಎಂಗೆ ಗ್ರಾಹಕರಿಗೆ ಮೋಸ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ. ಹಣ ಬಿಡಿಸಲು ಎಟಿಎಂಗೆ ಬರುವ ವೃದ್ಧರನ್ನು ಖದೀಮ ಟಾರ್ಗೆಟ್​ ಮಾಡುತ್ತಿದ್ದನು. ಆರೋಪಿಯ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

Davanagere police arrested accused
ಆರೋಪಿಯಿಂದ ವಶಕ್ಕೆ ಪಡೆದ ನಗದು

ಆರೋಪಿ ಸುಮಾರು 78 ಅಮಾಯಕರನ್ನು ವಂಚಿಸಿದ್ದು, 18 ಪ್ರಕರಣಗಳಿಗೆ ಸಂಬಂಧಿಸಿದಂತೆ 8.58 ಲಕ್ಷ ನಗದನ್ನು ಪೊಲೀಸರು ಜಪ್ತಿ ಪಡಿಸಿಕೊಂಡಿದ್ದಾರೆ ಎಂದು ಎಸ್ಪಿ ಸಿ.ಬಿ.ರಿಷ್ಯಂತ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Video: ಗುಂಡ್ಲುಪೇಟೆಯಲ್ಲಿ ಬಿಳಿಕಲ್ಲು ಕ್ವಾರಿ ಕುಸಿತ: ಇಬ್ಬರ ರಕ್ಷಣೆ, ಸಾವಿನ ಬಗ್ಗೆ ಸಿಗದ ನಿಖರ ಮಾಹಿತಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.