ETV Bharat / state

ದಾವಣಗೆರೆ: ಕಲುಷಿತ ನೀರು ಪೂರೈಕೆ, ಮಾಯಗೊಂಡ ಶಾಸಕ ಬಸವಂತಪ್ಪ ಅಸಮಾಧಾನ - ​ ETV Bharat Karnataka

Contaminated water supply: ನೀರ್ಥಡಿ ಗ್ರಾಮದ ಶುದ್ಧ ನೀರಿನ ಘಟಕದಿಂದ ಅಶುದ್ಧ ನೀರು ಪೂರೈಕೆ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು ಶಾಸಕ ಬಸವಂತಪ್ಪ ಆಕ್ರೋಶ ವ್ಯಕ್ತಪಡಿಸಿದರು.

ಶಾಸಕ ಬಸವಂತಪ್ಪ
ಶಾಸಕ ಬಸವಂತಪ್ಪ
author img

By ETV Bharat Karnataka Team

Published : Nov 5, 2023, 2:17 PM IST

Updated : Nov 5, 2023, 2:23 PM IST

ಶಾಸಕ ಬಸವಂತಪ್ಪ ಅಸಮಾಧಾನ

ದಾವಣಗೆರೆ: ಶುದ್ಧೀಕರಣ ಘಟಕಗಳು ಜನರಿಗೆ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಬದಲು ಕಲುಷಿತ ನೀರು ನೀಡುತ್ತಿರುವುದನ್ನು ಗಮನಿಸಿ ಮಾಯಕೊಂಡ ಶಾಸಕ ಬಸವಂತಪ್ಪ ಅಧಿಕಾರಿಗಳ ವಿರುದ್ಧ ಗರಂ ಆದರು. ದಾವಣಗೆರೆ ತಾಲೂಕಿನ ನೀರ್ಥಡಿ ಗ್ರಾಮದ ಶುದ್ಧ ನೀರಿನ ಘಟಕದ ಅವ್ಯವಸ್ಥೆ ನೋಡಿ ಶಾಸಕರು ಸಿಡಿಮಿಡಿಗೊಂಡರು.

ಸಿದ್ದರಾಮಯ್ಯನವರು 2013ರಲ್ಲಿ ಸಿಎಂ ಆಗಿದ್ದ ಸಂದರ್ಭದಲ್ಲಿ ಜಾರಿಗೆ ಬಂದಿರುವ ಶುದ್ಧ ನೀರಿನ ಘಟಕಗಳ ಪರಿಸ್ಥಿತಿ ಅಯೋಮಯವಾಗಿವೆ. ದಾವಣಗೆರೆಯಲ್ಲಿ ಸುಮಾರು 799 ಶುದ್ದ ಘಟಕಗಳಿದ್ದು ಬಹುತೇಕವು ನಿರ್ವಹಣೆ ಇಲ್ಲದೆ ಸೊರಗಿವೆ. ಜನರಿಗೆ ಶುದ್ಧ ನೀರ ನೀಡುವ ಬದಲು ಈ ಘಟಕಗಳು ಕಲುಷಿತ ನೀರು ನೀಡುತ್ತಿರುವುದರಿಂದ ಜನರು ಹೈರಾಣಾಗಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಅಧಿಕಾರಿಗಳಿಗೆ ವಿಷಯ ಮುಟ್ಟಿಸಿದರೂ ಅವರು ಗಮನಹರಿಸುತ್ತಿಲ್ಲ. ಕಲುಷಿತ ನೀರು ಕುಡಿದು ನೀರ್ಥಡಿ ಗ್ರಾಮದ 20ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದು, ಹಲವರು ಜ್ವರದಿಂದ ಬಳಲಿದ್ದಾರೆ ಎಂದು ಗ್ರಾಮಕ್ಕೆ ಶಾಸಕ ಬಸವಂತಪ್ಪ ಭೇಟಿ ಕೊಟ್ಟ ವೇಳೆ ಜನರು ವಿವರಿಸಿದರು.

ಇದನ್ನೂ ಓದಿ: ಬರಪೀಡಿತ ಪಟ್ಟಿಗೆ ಮತ್ತೆ 7 ತಾಲೂಕುಗಳು ಸೇರ್ಪಡೆ: ರಾಜ್ಯ ಸರ್ಕಾರ ಆದೇಶ

ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ, "ಗ್ರಾಮಕ್ಕೆ ತೆರಳಿ ಪರಿಶೀಲನೆ ನಡೆಸಲಾಗಿದೆ. ಅಧಿಕಾರಿಗಳ ಸಮ್ಮುಖದಲ್ಲಿ ಸಮಸ್ಯೆ ಬಗೆಹರಿಸಿದ್ದೇವೆ. ಈ ಘಟಕಕ್ಕೆ ಸಂಬಂಧಿಸಿದ ಟೆಂಡರ್ ಪಡೆದವರಿಗೆ ಇದನ್ನು ಪರಿಶೀಲನೆ ನಡೆಸಿ ಶುದ್ಧ ನೀರು ಕೊಡಬೇಕೆಂದು ತಾಕೀತು ಮಾಡಿದ್ದೇವೆ. ಭೇಟಿ ನೀಡಿದಾಗ ಶುದ್ದ ಕುಡಿಯುವ ನೀರಿನ ಘಟಕದ ಬಳಿ ಸ್ವಚ್ಛತೆ ಇಲ್ಲದೆ, ಟ್ಯಾಂಕ್​ನಲ್ಲಿ ಕಸ ಕಂಡುಬಂದಿದೆ. ಈ ನೀರು ಸೇವಿಸಿ ಮಕ್ಕಳು ಸೇರಿದಂತೆ ಹಲವರು ಜ್ವರಕ್ಕೆ ತುತ್ತಾಗಿದ್ದರು. ಈ ವಿಚಾರವನ್ನು ಜಿ.ಪಂ. ಸಿಇಒ ಗಮನಕ್ಕೆ ತಂದಿದ್ದೇನೆ. ಈ ರೀತಿಯ ಸಮಸ್ಯೆ ನನ್ನ ಕ್ಷೇತ್ರದಲ್ಲಿ ಆಗಬಾರದು. ನಾನು ಇದನ್ನು ಸಹಿಸಲ್ಲ. ಅಧಿಕಾರಿಗಳಿಗೆ ಎಚ್ಚರಿಸಿದ್ದೇನೆ" ಎಂದರು.

ಇದನ್ನೂ ಓದಿ: ಮೈಸೂರು: ಕಾಡಂಚಿನ ಜಮೀನುಗಳಲ್ಲಿ ಬೆಳೆ ಹಾನಿ ಮಾಡುತ್ತಿದ್ದ ಒಂಟಿ ಸಲಗ ಸೆರೆ

Last Updated : Nov 5, 2023, 2:23 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.