ETV Bharat / state

ಸ್ಮಾರ್ಟ್‌ಸಿಟಿ ಪ್ಲಾನ್‌ ಠುಸ್‌,, ಭಟ್ಟಂಗಿಗಳಾಗದೇ, ಮಂಡಕ್ಕಿ ಭಟ್ಟಿಗಳನ್ನ ಸ್ಥಳಾಂತರಿಸ್ತೀರಾ.. - Davanagere story

ದಾವಣಗೆರೆ ಸ್ಮಾರ್ಟ್ ಸಿಟಿ ಆಗುತ್ತೆ ಅಂತಾ ಹೇಳ್ತಾರೆ. ಅದ್ಯಾವಾಗ ಅದು ಆಗುತ್ತೋ.. ಧೂಳು ಹಾಗೂ ಮಂಡಕ್ಕಿ ಭಟ್ಟಿಯ ಹೊಗೆಯಿಂದ ಇಲ್ಲಿ ದುಡಿಯೋರ ಸಮಸ್ಯೆ ಅದ್ಯಾವಾಗ ಕೊನೆಯಾಗುತ್ತೋ ದೇವರೇ ಬಲ್ಲ.

ಮಂಡಕ್ಕಿ ಹುರಿಯಲು ಆಧುನಿಕ ತಂತ್ರಜ್ಞಾನ ಬಳಕೆ ಯಾವಾಗ?
author img

By

Published : Aug 31, 2019, 10:23 PM IST

ದಾವಣಗೆರೆ: ಬೆಣ್ಣೆನಗರಿ ಮಂಡಕ್ಕಿಗೆ ಹೆಸರುವಾಸಿ. 786 ಎಕರೆ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಕೂಡ ಆಗುತ್ತಿರುವ ದಾವಣಗೆರೆಯಲ್ಲಿ ಮಂಡಕ್ಕಿ ಭಟ್ಟಿಗಳು ಹೆಚ್ಚಿವೆ. ಇದನ್ನೇ ಸಾವಿರಾರು ಕುಟುಂಬಗಳು ಅವಲಂಬಿಸಿದ್ದು, ಹಲವು ದಶಕಗಳ ಬಳಿಕ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸುವ ಆಸೆ ಹುಟ್ಟಿದರೂ ಸದ್ಯಕ್ಕೆ ಈಡೇರುವ ಲಕ್ಷಣ ಕಾಣುತ್ತಿಲ್ಲ.

ಹೊಟ್ಟೆಯ ಪಾಡು ಹೀಗೆ, ಅದು ಎಂತಹ ಕೆಲಸವನ್ನಾದರೂ ಮಾಡಿಸುತ್ತೆ. ಇವರನ್ನೇ ನೋಡಿ, ಮಂಡಕ್ಕಿ ಅಂದ್ರೇ ಚುರುಮುರಿ ಭಟ್ಟಿಯಲ್ಲಿ ಇವರು ಬೇಯ್ತಿದಾರೆ, ಹೊಗೆಯ ಮಧ್ಯೆಯೇ ಬೆವರುತಿದಾರೆ. ಅಸಲಿಗೆ ಈ ರೀತಿ ಹೊಗೆ, ಧೂಳು ಆರೋಗ್ಯಕ್ಕೆ ಒಳ್ಳೇದಲ್ಲ. ಆದರೆ, ಪಾಪಿಕಾ ಪೇಟ್‌ ಅನ್ನೋದು ಇಂತಹುದರಲ್ಲೂ ದುಡಿಮೆಗೆ ಹಚ್ಚುತ್ತೆ.

ಮಂಡಕ್ಕಿ ಹುರಿಯಲು ಆಧುನಿಕ ತಂತ್ರಜ್ಞಾನ ಬಳಕೆ ಯಾವಾಗ?

ದಾವಣಗೆರೆ ಸ್ಮಾರ್ಟ್ ಸಿಟಿ ಆಗುತ್ತೆ ಅಂತಾ ಹೇಳ್ತಾರೆ. ಅದ್ಯಾವಾಗ ಅದು ಆಗುತ್ತೋ.. ಧೂಳು ಹಾಗೂ ಮಂಡಕ್ಕಿ ಭಟ್ಟಿಯ ಹೊಗೆಯಿಂದ ಇಲ್ಲಿ ದುಡಿಯೋರ ಸಮಸ್ಯೆ ಅದ್ಯಾವಾಗ ಕೊನೆಯಾಗುತ್ತೋ ದೇವರೇ ಬಲ್ಲ. ಮಂಡಕ್ಕಿ ಭಟ್ಟಿಗಳ ಸ್ಥಿತಿ ಮತ್ತು ಇಲ್ಲಿ ದುಡಿಯುತ್ತಿರುವ ಬಡವರ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮದ ಬಗ್ಗೆ ಆತಂಕ ಇದ್ದೇ ಇದೆ. ಮಂಡಕ್ಕಿ ಹುರಿಯಲು ಆಧುನಿಕ ತಂತ್ರಜ್ಞಾನ ಮತ್ತು ಉದ್ಯೋಗ ಸೃಷ್ಟಿಗೆ ಯೋಜನೆ ಹಾಕಿಕೊಳ್ಳಲಾಗಿತ್ತು. ಕಳೆದ 3 ವರ್ಷಗಳ ಹಿಂದೆ 376 ಕೋಟಿ ರೂ. ವೆಚ್ಚದಲ್ಲಿ ಹೈಟೆಕ್ ಭಟ್ಟಿಗಳನ್ನು ರೂಪಿಸಲಾಗುವುದು ಎಂಬ ನಿರೀಕ್ಷೆ ಬಹುತೇಕರಲ್ಲಿತ್ತು. ಇಲ್ಲಿನ ಮಂಡಕ್ಕಿ ಭಟ್ಟಿಗಳನ್ನೇ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಸಮೀಪ ಶಿಫ್ಟ್‌ ಮಾಡಲು ಜಾಗ ಗುರುತಿಸಲಾಗಿತ್ತು. ಇಡೀ ಮಂಡಕ್ಕಿ ಭಟ್ಟಿಗಳನ್ನೇ ಸ್ಥಳಾಂತರಿಸಲು ಮಾಲೀಕರು ಸರ್ಕಾರಕ್ಕೆ ಸಹಮತ ಕೂಡ ವ್ಯಕ್ತಪಡಿಸಿದ್ದರು. ಆದರೆ, ಇದು ಕೇವಲ ಮಾತಿನಲ್ಲೇ ಉಳಿದಿದೆ.

ಮಂಡಕ್ಕಿ ಹುರಿಯಲು ಹಳೆ ಟೈರ್‌ಗಳು, ವಿಷಕಾರಕ ಜಾಲಿ ಮರದ ಕಟ್ಟಿಗೆಗಳನ್ನ ಬಳಸಲಾಗುತ್ತಿದೆ. ಇದರಿಂದ ಭಾರೀ ಪ್ರಮಾಣದ ಹೊಗೆ ಬರುತ್ತದೆ. ಇದು ನಗರದ ವಾತಾವರಣ ಕಲುಷಿತಗೊಳಿಸುತ್ತಿದೆ. ಇಲ್ಲಿನ ಕಾರ್ಮಿಕರ ಆರೋಗ್ಯದ ಮೇಲಂತೂ ವಿಪರೀತ ದುಷ್ಪರಿಣಾಮ ಬೀಳುತ್ತಿದೆ. ಹಾಗಾಗಿ, ನಗರದಿಂದ ಬೇರೆ ಕಡೆ ಸ್ಥಳಾಂತರ ಮಾಡಿದರೆ ವಾಯು ಮಾಲಿನ್ಯ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಮಂಡಕ್ಕಿ ಭಟ್ಟಿಗಳ ಮಾಲೀಕರ ಮನವೊಲಿಸುವ ಕಾರ್ಯವೂ ನಡೆದಿತ್ತು. ಆದರೆ, ಇದು ಈಡೇರುವ ಲಕ್ಷಣ ಕಂಡು ಬರುತ್ತಿಲ್ಲ ಅಂತಿದಾರೆ ಮಂಡಕ್ಕಿ ಭಟ್ಟಿಗಳ ಮಾಲೀಕರು.

Intro:KN_DVG_31_MANDAKKI BHATTI PBL_SCRIPT_02_7203307

REPORTER : YOGARAJ G. H.

ಮಂಡಕ್ಕಿ ಭಟ್ಟಿಗಳು ಸ್ಥಳಾಂತರಗೊಂಡು ಹೈಟೆಕ್‌ ಆಗೋದು ಯಾವಾಗ...?

ದಾವಣಗೆರೆ : ಬೆಣ್ಣೆನಗರಿ ಮಂಡಕ್ಕಿಗೆ ಹೆಸರುವಾಸಿ. ಇನ್ನು 786 ಎಕರೆ ಪ್ರದೇಶದಲ್ಲಿ ಸ್ಮಾರ್ಟ್ ಸಿಟಿ ಕೂಡ ಆಗುತ್ತಿರುವ ದಾವಣಗೆರೆಯಲ್ಲಿ ಮಂಡಕ್ಕಿ ಭಟ್ಟಿಗಳು ಹೆಚ್ಚಿವೆ. ಇದನ್ನೇ ಸಾವಿರಾರು
ಕುಟುಂಬಗಳು ಅವಲಂಬಿಸಿದ್ದು, ಹಲವು ದಶಕಗಳ ಬಳಿಕ ಇದಕ್ಕೊಂದು ಶಾಶ್ವತ ಪರಿಹಾರ ಒದಗಿಸುವ ಆಸೆ ಹುಟ್ಟಿದರೂ ಸದ್ಯಕ್ಕೆ ಈಡೇರುವ ಲಕ್ಷಣ ಕಾಣುತ್ತಿಲ್ಲ.

ದಾವಣಗೆರೆ ಸ್ಮಾರ್ಟ್ ಸಿಟಿ ಆಗಲಿ, ಬಿಡಲಿ ಇಲ್ಲಿನ ಧೂಳು ಹಾಗೂ ಮಂಡಕ್ಕಿ ಭಟ್ಟಿಯ ಹೊಗೆಯಿಂದ ಜನರು ಪಡುತ್ತಿರುವ ಸಮಸ್ಯೆ ಅಷ್ಟಿಷ್ಟಲ್ಲ. ಮಂಡಕ್ಕಿ ಭಟ್ಟಿಗಳ ಸ್ಥಿತಿ ಮತ್ತು ಇಲ್ಲಿ ದುಡಿಯುತ್ತಿರುವ
ಜನರ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮದ ಬಗ್ಗೆ ಆತಂಕ ಮಾತ್ರ ಹಾಗೆಯೇ ಮುಂದುವರಿದಿದೆ. ಮಂಡಕ್ಕಿ ಹುರಿಯಲು ಆಧುನಿಕ ತಂತ್ರಜ್ಞಾನ ಮತ್ತು ಉದ್ಯೋಗ ಸೃಷ್ಟಿಗೆ ಯೋಜನೆ
ಹಾಕಿಕೊಳ್ಳಲಾಗಿತ್ತು.

ಕಳೆದ ಮೂರು ವರ್ಷಗಳ ಹಿಂದೆ 376 ಕೋಟಿ ರೂಪಾಯಿ ವೆಚ್ಚದಲ್ಲಿ ಹೈಟೆಕ್ ಭಟ್ಟಿಗಳನ್ನು ರೂಪಿಸಲಾಗುವುದು ಎಂಬ ನಿರೀಕ್ಷೆ ಬಹುತೇಕರಲ್ಲಿತ್ತು. ಆದ್ರೆ ಈಗ ಇಲ್ಲಿನ ಮಂಡಕ್ಕಿ ಭಟ್ಟಿಗಳನ್ನೇ ಬೇರೆ
ಕಡೆ ಸ್ಥಳಾಂತರ ಮಾಡಲು ಸರ್ಕಾರ ಮುಂದಾಗಿತ್ತು. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಸಮೀಪದಲ್ಲಿ ಜಮೀನು ನೋಡಲಾಗಿತ್ತು. ಅಲ್ಲಿಗೆ ಇಡೀ ಮಂಡಕ್ಕಿ ಭಟ್ಟಿ ಸ್ಥಳಾಂತರಕ್ಕೆ ರಾಜ್ಯ
ಸರ್ಕಾರದ ತೀರ್ಮಾನಕ್ಕೆ ಮಾಲೀಕರು ಸಹಮತ ವ್ಯಕ್ತಪಡಿಸಿದ್ದರು. ಆದ್ರೆ, ಇದು ಕೇವಲ ಮಾತಿನಲ್ಲೇ ಉಳಿದಿದೆ.

ಮಂಡಕ್ಕಿ ಹುರಿಯಲು ಹಳೆ ಟೈರ್ ಗಳು, ವಿಷಕಾರಕ ಜಾಲಿ ಮರದ ಕಟ್ಟಿಗೆಗಳನ್ನ ಬಳಸಲಾಗುತ್ತಿದೆ. ಇದರಿಂದ ಭಾರೀ ಪ್ರಮಾಣದ ಹೊಗೆ ಬರುತ್ತದೆ. ಇದು ನಗರದ ವಾತಾವರಣ ಕಲುಷಿತಗೊಳ್ಳಲು
ಪ್ರಮುಖ ಕಾರಣಗಳಲ್ಲೊಂದು. ಇಲ್ಲಿನ ಕಾರ್ಮಿಕರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀಳುತ್ತಿದೆ. ಹಾಗಾಗಿ, ನಗರದಿಂದ ಬೇರೆ ಕಡೆ ಸ್ಥಳಾಂತರ ಮಾಡಿದರೆ ವಾಯು ಮಾಲಿನ್ಯ ಕಡಿಮೆಯಾಗುತ್ತದೆ
ಎಂಬ ಕಾರಣಕ್ಕೆ ಮಂಡಕ್ಕಿ ಭಟ್ಟಿಗಳ ಮಾಲೀಕರ ಮನವೊಲಿಸುವ ಕಾರ್ಯವೂ ನಡೆದಿತ್ತು. ಆದ್ರೆ, ಇದು ಈಡೇರುವ ಲಕ್ಷಣ ಕಂಡು ಬರುತ್ತಿಲ್ಲ ಅಂತಾರೆ ಮಂಡಕ್ಕಿ ಭಟ್ಟಿಗಳ ಮಾಲೀಕರು.

ಜಿಲ್ಲಾ ಉಸ್ತುವಾರಿ ಸಚಿವರಾದವರು ಇಲ್ಲಿಗೆ ಬಂದು ಭೇಟಿ ನೀಡಿ ಹೋಗುವುದು ಒಂದು ನಿಯಮ ಅನ್ನೋ ಅಂತಾಗಿದೆ. ಇಲ್ಲಿಗೆ ಬಂದ ಜನಪ್ರತಿನಿಧಿಗಳ ಭರವಸೆ ಮಾತುಗಳನ್ನು ಕೇಳಿ ಕೇಳಿ ಇಲ್ಲಿನ ಜನರಿಗೆ
ಸಾಕು ಸಾಕಾಗಿಬಿಟ್ಟಿದೆ. ಸ್ಮಾರ್ಟ್ ಸಿಟಿ ಅಂತಾ ಘೋಷಣೆಯಾಗಿ ಐದು ವರ್ಷವಾಗುತ್ತಾ ಬಂದರೂ ಭಟ್ಟಿಗಳು ಮಾತ್ರ ಹೈಟೆಕ್ ಆಗುವ ನಿರೀಕ್ಷೆ ಮಾತ್ರ ನಿರೀಕ್ಷೆಯಾಗಿಯೇ ಉಳಿದಿದೆ.
Body:KN_DVG_31_MANDAKKI BHATTI PBL_SCRIPT_02_7203307

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.