ETV Bharat / state

ಆಯುರ್ವೇದಿಕ್ ಔಷಧಿ ಬಗ್ಗೆ ಈಕೆಗಿದೆ ಅಗಾಧ ಜ್ಞಾನ.. ಇಂಡಿಯಾ ಬುಕ್ ಆಫ್ ರೆಕಾರ್ಡ್​ನಲ್ಲಿ ದಾವಣಗೆರೆಯ ಬಾಲಕಿ! - ದಾವಣಗೆರೆ ತನಸ್ವಿ ಸುಜಾ ಹೆಸರು ಇಂಡಿಯಾ ಬುಕ್ ಆಫ್ ರೆಕಾರ್ಡ್​ಗೆ ಸೇರ್ಪಡೆ

ಆರು ವರ್ಷದ ಈ ಬಾಲಕಿಗೆ ಅದ್ಭುತವಾದ ಜ್ಞಾಪಕಶಕ್ತಿ ಹೊಂದಿದ್ದನ್ನು ಕಂಡ ಆರ್ಯುವೇದಿಕ್ ವೈದ್ಯ ಡಾ. ಚೇತನ್ ದಂಪತಿ ನಿಬ್ಬೆರಗಾಗಿದ್ದಾರೆ. ಹಾಡು, ಡ್ರಾಯಿಂಗ್ ಸೇರಿದಂತೆ ಔಷಧಿಗಳ ಬಗ್ಗೆ ಒಮ್ಮೆ ಹೇಳಿದ್ರೆ ಸಾಕು ತನಸ್ವಿ ಸುಜಾ ಜ್ಞಾಪಕದಲ್ಲಿಟ್ಟುಕೊಂಡು ರಿಪೀಟ್‌ ಮಾಡ್ತಾಳೆ. ಪ್ರಿಸ್ಕಿಪ್ಷನ್‌ ಕೇಳುತ್ತಾ ಬೆಳೆದ ತನಸ್ವಿಗೆ ಎಲ್ಲವೂ ಮನಸ್ಸಿನಲ್ಲಿ‌ ಅಚ್ಚೊತ್ತಿದೆ. ಇನ್ನೂ ಆರು ವರ್ಷ ಪೂರೈಸದ ತನಸ್ವಿ, 26 ವಿವಿಧ ರೋಗಗಳಿಗೆ ಆಯುರ್ವೇದಿಕ್ ಔಷಧೋಪಚಾರವನ್ನು ಪಟ ಪಟಾ ಅಂತಾ ಹೇಳ್ತಾಳೆ.

Tanaswi suja
ತನಸ್ವಿ ಸುಜಾ
author img

By

Published : Feb 2, 2022, 7:31 PM IST

Updated : Feb 2, 2022, 10:57 PM IST

ದಾವಣಗೆರೆ: ಈಕೆ ಆರು ವರ್ಷದ ಪುಟ್ಟ ಪೋರಿ. ಈಕೆಯ ತಂದೆ ಆರ್ಯುವೇದಿಕ್‌ ವೈದ್ಯರಾಗಿದ್ದು, ಈ ಪುಟ್ಟ ಬಾಲಕಿ 26 ತರಹೇವಾರಿ ರೋಗಗಳಿಗೆ ಆಯುರ್ವೇದ ಪದ್ಧತಿಯಲ್ಲಿ ಯಾವ ರೀತಿಯ ಔಷಧ ನೀಡ್ಬೇಕು ಎಂದು ಅರಳು ಹುರಿದಂತೆ ಪಟ ಪಟಾ ಅಂತ ಹೇಳ್ತಾಳೆ. ಒಮ್ಮೆ ಕೇಳಿಕೊಟ್ಟ ಔಷಧದ ಬಗ್ಗೆ ತಿಳಿದುಕೊಳ್ಳುವ ಈ ಪೋರಿ, ಅದನ್ನೇ ನೆನಪಿನಲ್ಲಿಟ್ಟುಕೊಂಡು ಪುನರಾವರ್ತಿಸುವ ಅದ್ಭುತ ಜಾಣ್ಮೆ ಇದೆ. ಈ ಚಿಕ್ಕ ಪ್ರತಿಭೆ, ಇಂಡಿಯಾ ಬುಕ್‌ ಆಫ್‌ ರೆಕಾರ್ಡ್‌ನಲ್ಲಿ ಸೇರಿದ್ದಾಳೆ.

ಹೌದು, ಜಿಲ್ಲೆಯ ಜಗಳೂರು ಪಟ್ಟಣದ ನಿವಾಸಿ ಡಾ. ಚೇತನ್ ಹಾಗೂ ವಸುಧಾ ದಂಪತಿಯ ಏಕೈಕ ಪುತ್ರಿ ತನಸ್ವಿ ಸುಜಾ ಒಟ್ಟು 26 ರೋಗಗಳಿಗೆ ಆಯುರ್ವೇದ ಔಷಧೋಪಚಾರವನ್ನು ನೆನಪಿನಲ್ಲಿಟ್ಟುಕೊಳ್ಳುವ ಅದ್ಭುತ ಜ್ಞಾಪಕ ಶಕ್ತಿ ಹೊಂದಿದ್ದಾಳೆ. ಗ್ಯಾಸ್ಟ್ರಿಕ್‌, ಮೂಲವ್ಯಾದಿ, ಹೃದಯರೋಗ, ರಕ್ತದೊತ್ತಡ, ಗರ್ಭಾಶಯದಲ್ಲಿ ಗಡ್ಡೆ, ಮೂಗಲ್ಲಿ ದುರ್ಮಾಂಸ, ಕೊರೊನಾ, ಕೀಲು ನೋವು, ವೆರಿಕೋಸ್ ವೇನ್ಸ್, ಮಧುಮೇಹ, ಡೆಂಗ್ಯೂ, ಥೈರಾಯ್ಡ್, ಪಾರ್ಕಿನ್ಸನ್ಸ್, ಸರ್ಪಹುಣ್ಣು, ಪಿತ್ತಕೋಶದಲ್ಲಿ‌ ಕಲ್ಲು, ಇಸುಬು‌, ಮೂತ್ರ ಕೋಶದಲ್ಲಿ ಕಲ್ಲು ಮೊದಲಾದ ರೋಗಗಳಿಗೆ ಆರ್ಯುವೇದಿಕ್ ಪದ್ಧತಿಯಲ್ಲಿ ಔಷಧ ನೀಡುವ ಬಗ್ಗೆ ಅರಿತಿದ್ದಾಳೆ.

ತನಸ್ವಿ ಸುಜಾ

ಆರು ವರ್ಷದ ಈ ಬಾಲಕಿಗೆ ಅದ್ಭುತವಾದ ಜ್ಞಾಪಕಶಕ್ತಿ ಹೊಂದಿದ್ದನ್ನು ಕಂಡ ಆರ್ಯುವೇದಿಕ್ ವೈದ್ಯರಾಗಿರುವ ಡಾ. ಚೇತನ್ ದಂಪತಿ ನಿಬ್ಬೆರಗಾಗಿದ್ದಾರೆ. ಹಾಡು, ಡ್ರಾಯಿಂಗ್ ಸೇರಿದ್ದಂತೆ ಔಷಧಿಗಳ ಬಗ್ಗೆ ಒಮ್ಮೆ ಹೇಳಿದ್ರೆ ಸಾಕು, ತನಸ್ವಿ ಸುಜಾ ಜ್ಞಾಪಕದಲ್ಲಿಷ್ಟುಕೊಂಡು ರಿಪೀಟ್‌ ಮಾಡ್ತಾಳೆ. ಪ್ರಿಸ್ಕ್ರಿಪ್ಷನ್‌ ಕೇಳುತ್ತಾ ಬೆಳೆದ ತನಸ್ವಿಗೆ ಎಲ್ಲವೂ ಮನಸ್ಸಿನಲ್ಲಿ‌ ಅಚ್ಚೊತ್ತಿದೆ. ಇನ್ನೂ ಆರು ವರ್ಷ ಪೂರೈಸದ ತನಸ್ವಿ, 26 ವಿವಿಧ ರೋಗಗಳಿಗೆ ಆಯುರ್ವೇದಿಕ್ ಔಷಧೋಪಚಾರವನ್ನು ಪಟಪಟಾ ಅಂತಾ ಹೇಳುವುದು ಎಲ್ಲರಿಗೂ ಅಚ್ಚರಿ ಮೂಡಿಸಿದೆ.

ಬಾಲ್ಯದಿಂದಲೂ ಅದ್ಭುತವಾಗಿ ಗಮನಿಸುವ ಹಾಗೂ ಗ್ರಹಿಸುವ ಶಕ್ತಿ ಹೊಂದಿದ್ದಾಳೆ. ತನ್ನ ತಂದೆ ರೋಗಿಗಳಿಗೆ ಹೇಳುತ್ತಿದ್ದ ಮೆಡಿಸಿನ್‌ಗಳನ್ನು ನೆನಪಿಟ್ಟುಕೊಂಡಿದ್ದಾಳೆ. ಇವರ ಕುಟುಂಬದಲ್ಲಿ ಬಹುತೇಕರು ಆಯುರ್ವೇದ ಹಾಗೂ ಅಲೋಪತಿ ವೈದ್ಯರಿದ್ದಾರೆ. ವೈದ್ಯರಿರುವ ವಾತಾವರಣದಲ್ಲಿ ಬೆಳೆದ ತನಸ್ವಿ ಸಣ್ಣ ವಯಸ್ಸಿನಲ್ಲಿ ಪ್ರತಿಭಾವಂತೆ ಎನಿಸಿಕೊಂಡಿದ್ದಾಳೆ. ಆರ್ಯವೇದದ ಬಗ್ಗೆ ಇಷ್ಟೊಂದು ಜ್ಞಾನ ಹೊಂದಿರುವ ತನಸ್ವಿಯನ್ನು ಮುಂದೆ ಒಂದು ದೊಡ್ಡ ಹುದ್ದೆಗೇರಿಸಬೇಕೆಂಬುದು ಪೋಷಕರ ಆಸೆಯಾಗಿದೆ.

ಒಟ್ಟಾರೆ, ಈ ಪ್ರಪಂಚದಲ್ಲಿ ಜನಿಸಿದ ಎಲ್ಲರಲ್ಲೂ ಒಂದಲ್ಲಾ ಒಂದು ಪ್ರತಿಭೆ ಇರುತ್ತದೆ. ತಂದೆ-ತಾಯಿ ಮಕ್ಕಳ ಪ್ರತಿಭೆಯನ್ನು ಗುರುತಿಸಿ ಅದೇ ದಿಕ್ಕಿನಲ್ಲಿ ಅವರನ್ನು ಬೆಳೆಸಿ, ಪ್ರೋತ್ಸಾಹಿಸಿದ್ರೆ ಖಂಡಿತ ಎಲ್ಲ ಮಕ್ಕಳ ಪ್ರತಿಭೆಯೂ ಅರಳುತ್ತದೆ. ಮಕ್ಕಳು ಇಂತಹದ್ದೇ ಸಾಧಿಸಿಬೇಕು ಎಂಬ ಒತ್ತಡದಿಂದ ಏನು ಪ್ರಯೋಜವಿಲ್ಲ. ಅವರವರ ಆಸಕ್ತಿ ಕ್ಷೇತ್ರದಲ್ಲಿ ಪ್ರಗತಿಗೆ ಅವಕಾಶ ಸಿಕ್ಕರೆ, ದೇಶದ ಸರ್ವಾಂಗೀಣ ಪ್ರಗತಿಗೂ ಅನುಕೂಲವಾಗುತ್ತೆ.

ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Feb 2, 2022, 10:57 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.