ದಾವಣಗೆರೆ: ಜಿಲ್ಲೆಯ ಜಗಳೂರು ಪಟ್ಟಣದಲ್ಲಿ ಬಿತ್ತನೆ ಬೀಜವನ್ನು ಅಧಿಕ ದರಕ್ಕೆ ಮಾರಾಟ ಮಾಡುತ್ತಿದ್ದಾರೆ ಎಂದು ಆರೋಪಿಸಿದ ರೈತರು ಕೃಷಿ ಇಲಾಖೆ ಅಧಿಕಾರಿಯನ್ನು ಹೊರಹಾಕಿ ಪ್ರತಿಭಟನೆ ಮಾಡಿರುವ ಘಟನೆ ದಾವಣಗೆರೆ ಕೃಷಿ ಇಲಾಖೆ ಕಚೇರಿ ಬಳಿ ನಡೆದಿದೆ.
ಕೃಷಿ ಇಲಾಖೆ ಅಧಿಕಾರಿ ಶ್ರೀನಿವಾಸ್ ಚಿಂತಾಲ್ ಎಂಬುವರನ್ನು ರೈತರು ಕಚೇರಿಯಿಂದ ಹೊರಹಾಕಿದರು. ಒಂದು ಮೆಕ್ಕೆಜೋಳ ಬೀಜದ ಪಾಕೆಟ್ಗೆ ಸರ್ಕಾರ 700 ರೂಪಾಯಿ ದರ ನಿಗದಿ ಮಾಡಿದೆ. ಆದರೆ ಜಗಳೂರಿನಲ್ಲಿ ಅಧಿಕಾರಿಗಳು 780 ರೂಪಾಯಿಗೆ ಮಾರಾಟ ಮಾಡಿದ್ದಾರೆಂದು ಆರೋಪಿಸಿದ ರೈತರು ಕೃಷಿ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ದಾವಣಗೆರೆ ಕೃಷಿ ಕಚೇರಿ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಕೂಡ ಹೊರಹಾಕಿ ಕಚೇರಿಗೆ ಬೀಗ ಜಡಿದಿದ್ದಾರೆ. ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳದೇ ಇರೋದಕ್ಕೆ ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಜಗಳೂರು ತಾಲೂಕು ಕೃಷಿ ಅಧಿಕಾರಿ ಹರ್ಷ ಅವರು ಹೆಚ್ಚಿನ ಬೆಲೆಗೆ ಮೆಕ್ಕೆಜೋಳ, ಶೇಂಗಾ ಬೀಜವನ್ನು ಅಧಿಕ ಬೆಲೆಗೆ ಮಾರಾಟ ಮಾಡಿದ್ದಾರೆ ಎಂದು ರೈತರು ಆರೋಪಿಸಿದರು
ಇದನ್ನೂ ಓದಿ: ಗುಣಾಂಬ ಟ್ರಸ್ಟ್ ಆಸ್ತಿ ವಿವಾದ : ಮುಡಾ ಆಯುಕ್ತರಿಂದ ಬಾಡಿಗೆದಾರರಿಗೆ ಅವಮಾನ ಆರೋಪ