ETV Bharat / state

ಆರೇಂಜ್ ಝೋನ್ ನಲ್ಲಿದ್ದ ದಾವಣಗೆರೆ ಜಿಲ್ಲೆ ಗ್ರೀನ್ ಝೋನ್‍ನತ್ತ ಹೆಜ್ಜೆ

ಆರೇಂಜ್ ಝೋನ್ ನಲ್ಲಿದ್ದ ದಾವಣಗೆರೆ ಜಿಲ್ಲೆ ಈ ಗ್ರೀನ್ ಝೋನ್‍ನತ್ತ ಮುಖಮಾಡಿದ್ದು, ಜನತೆ ನಿಟ್ಟುಸಿರು ಬಿಟ್ಟಿದ್ದಾರೆ.

Davanagere district in the Orange Zone to the Green Zone
ದಾವಣಗೆರೆ ಜಿಲ್ಲೆ ಗ್ರೀನ್ ಜೋನ್‍ನತ್ತ
author img

By

Published : Apr 26, 2020, 2:49 PM IST

ದಾವಣಗೆರೆ: ಕೊರೊನೊ ಸೋಂಕಿತ ಮೂವರು ಗುಣಮುಖರಾಗಿದ್ದು, ಆರೇಂಜ್ ಝೋನ್​ನಲ್ಲಿದ್ದ ಜಿಲ್ಲೆಯು ಇದೀಗ ಗ್ರೀನ್ ಝೋನ್ ನತ್ತ ಸಾಗುತ್ತಿದೆ.

ನಿಯಮದ ಪ್ರಕಾರ ಕೊನೆಯ ಪಾಸಿಟಿವ್ ಪ್ರಕರಣ ವರದಿಯಾದ ನಂತರ 28 ದಿನಗಳಲ್ಲಿ ಯಾವುದೇ ಪಾಸಿಟಿವ್ ಪ್ರಕರಣಗಳು ವರದಿಯಾಗದಿದ್ದರೆ ಅದನ್ನು ಗ್ರೀನ್ ಝೋನ್ ಗೆ ಸೇರಿಸಲಾಗುತ್ತದೆ. ಅಂದರೆ ಜಿಲ್ಲೆ ಸದ್ಯಕ್ಕೆ ಸೇಫ್. ಹಾಗಂತ ಮೈಮರೆಯುವಂತಿಲ್ಲ. ಒಮ್ಮೊಮ್ಮೆ ಇದು ಹೆಚ್ಚು-ಕಡಿಮೆ ಆಗುವ ಸಾಧ್ಯತೆಯೂ ಇರುತ್ತದೆ.

ದಾವಣಗೆರೆ ಜಿಲ್ಲೆ ಗ್ರೀನ್ ಝೋನ್‍ನತ್ತ ಹೆಜ್ಜೆ

ಯಾವುದೇ ಪ್ರಕರಣಗಳು ವರದಿಯಾಗದಿದ್ದರೆ ಹಸಿರು ಝೋನ್‍ನಲ್ಲಿದ್ದ ಜಿಲ್ಲೆಗಳು ಒಟ್ಟಿಗೆ ಅಲರ್ಟ್ ಝೋನ್‍ಗಳಲ್ಲಿ ಬರಬಹುದು. ಹಾಗಾಗಿ ಬಹಳ ಎಚ್ಚರಿಕೆ ವಹಿಸಬೇಕಾಗಿದೆ. ಆದರೆ ಸದ್ಯಕ್ಕಂತೂ ಜಿಲ್ಲೆಯ ಜನ ನಿಟ್ಟಿಸಿರು ಬಿಟ್ಟಿದ್ದಾರೆ. ಜಿಲ್ಲಾಡಳಿತ, ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿ, ಸಿಬ್ಬಂದಿಗಳ ಕಾರ್ಯ ವೈಖರಿಗೆ ಭೇಷ್ ಎಂದು ಬೆನ್ನು ತಟ್ಟುತ್ತಿದ್ದಾರೆ.

ಮಾರ್ಚ್ 23 ರಂದು ಕೊರೊನಾ ಮೊದಲ ಪ್ರಕರಣ ಚಿತ್ರದುರ್ಗ ಜಿಲ್ಲೆಯದ್ದಾಗಿದ್ದರೂ ತಾಂತ್ರಿಕವಾಗಿ ದಾವಣಗೆರೆಗೆ ಸೇರಿತು. ನಂತರ ಮಾರ್ಚ್ 27 ರಂದು ಫ್ರಾನ್ಸ್ ನಿಂದ ಆಗಮಿಸಿದ್ದ ಯುವಕನಲ್ಲಿ ಸೋಂಕು ಕಾಣಿಸಿಕೊಂಡ ಪರಿಣಾಮ ಪ್ರಕರಣ ಎಡರಕ್ಕೇರಿತು. ನಂತರ ಅಮೆರಿಕಾದಿಂದ ಆಗಮಿಸಿದ್ದ ಯುವಕನಲ್ಲಿ ಸೋಂಕು ದೃಢಪಟ್ಟು ಆ ಸಂಖ್ಯೆ ಮೂರಕ್ಕೇರಿದ ಹಿನ್ನೆಲೆ ಜಿಲ್ಲಾಡಳಿತ ಹಾಗೂ ಜಿಲ್ಲೆಯ ಜನರಿಗೆ ತಲೆಬಿಸಿ ಹೆಚ್ಚಾಗುವಂತೆ ಮಾಡಿತ್ತು.

ಇದರಿಂದ ತನ್ನಿಂತಾನೇ ಜನರಲ್ಲಿ ಜಾಗೃತಿ ಹೆಚ್ಚಾಗತೊಡಗಿತು. ಇದೇ ವೇಳೆ ಘೋಷಣೆಯಾದ ಲಾಕ್‍ಡೌನ್ ಬಹಳ ಕಟ್ಟುನಿಟ್ಟಾಗಿ ಜಾರಿಯಾಗುವುದರೊಂದಿಗೆ ಯುದ್ಧೋಪಾದಿಯಲ್ಲಿ ವಿವಿಧ ಇಲಾಖೆಗಳು ಕಾರ್ಯ ನಿರ್ವಹಿಸಿ ಸೋಂಕು ಮುಕ್ತವಾಗುವವರೆಗೆ ಅವಿರತ ಶ್ರಮಿಸಿದ್ದು, ಎಲ್ಲೋ ಒಂದು ಕಡೆ ಫಲ ನೀಡಿದೆ.

ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಎಸ್‍ಪಿ ಹನುಮಂತರಾಯ, ಆರೋಗ್ಯ ಇಲಾಖೆಯ ತಂಡ ವಹಿಸಿದ್ದ ಮುನ್ನೆಚ್ಚರಿಕೆ ಅಷ್ಟಿಷ್ಟಲ್ಲ. ಅದರೊಡನೆ ಎಲ್ಲಾ ಇಲಾಖೆ ಅಧಿಕಾರಿಗಳೂ ನೀಡಿದ ಸಾಥ್ ಕೂಡ ಅಷ್ಟೇ ಪ್ರಮುಖ ಪಾತ್ರ ವಹಿಸಿದೆ. ಕೇಂದ್ರ ಆರೋಗ್ಯ ಇಲಾಖೆ ಜಿಲ್ಲೆಯನ್ನು ಗ್ರೀನ್ ಝೋನ್ ಎಂದು ಘೋಷಣೆ ಮಾಡುವ ಬಗ್ಗೆ ಜಿಲ್ಲೆ ಎದುರು ನೋಡುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.