ETV Bharat / state

ನಿಗದಿ ಪಡಿಸಿದ್ದಕ್ಕಿಂತ ಹೆಚ್ಚು ಹಣ ಪಡೆದರೆ ಕ್ರಮ: ಜಿಲ್ಲಾಧಿಕಾರಿ ಮಹಾಂತೇಶ್​ ಬೀಳಗಿ - Mahantesh bilagi

ಭತ್ತ ಕೊಯ್ಯುವ ಯಂತ್ರಕ್ಕೆ ಜಿಲ್ಲಾಡಳಿತ ದರ ನಿಗದಿ ಪಡಿಸಿದ್ದು, ದರಕ್ಕಿಂತ‌ ಹೆಚ್ಚು ಹಣವನ್ನ ಯಂತ್ರದ ಮಾಲೀಕರು ರೈತರಿಂದ‌ ಪಡೆದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಎಚ್ಚರಿಕೆ ನೀಡಿದ್ದಾರೆ.

Mahantesh bilagi
ಜಿಲ್ಲಾಧಿಕಾರಿ ಮಹಾಂತೇಶ್​ ಬೀಳಗಿ
author img

By

Published : Dec 3, 2020, 6:58 PM IST

ದಾವಣಗೆರೆ: ಭತ್ತ ಕೊಯ್ಯವ ಯಂತ್ರಗಳಿಗೆ ಜಿಲ್ಲಾಡಳಿತ ಬೆಲೆ ನಿಗದಿ ಪಡಿಸಿದ್ದು, ನಿಗದಿ ಪಡಿಸಿದ ದರಕ್ಕಿಂತ‌ ಹೆಚ್ಚು ಹಣ ರೈತರಿಂದ‌ ಪಡೆದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಾವಣಗೆರೆ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದ್ದಾರೆ.

ಜಿಲ್ಲಾಧಿಕಾರಿ ಮಹಾಂತೇಶ್​ ಬೀಳಗಿ

ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಮಾತನಾಡಿದ ಅವರು, ಟೈರ್ ಹೊಂದಿರುವ ಭತ್ತ ಕೊಯ್ಯುವ ಯಂತ್ರಕ್ಕೆ 1,800 ದರ ನಿಗದಿ ಪಡಿಸಿದರೆ, ಇನ್ನು ಚೈನ್ ಚಕ್ರ ಇರುವ ಯಂತ್ರಕ್ಕೆ 2,250 ರೂಪಾಯಿಯನ್ನು ಜಿಲ್ಲಾಡಳಿತ ನಿಗದಿ ಪಡಿಸಿದ್ದು, ಈ ದರಕ್ಕಿಂತ‌ ಹೆಚ್ಚು ಹಣವನ್ನು ಯಂತ್ರದ ಮಾಲೀಕರು ರೈತರಿಂದ‌ ಪಡೆದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಡಿಸಿ ಎಚ್ಚರಿಕೆ ನೀಡಿದ್ದಾರೆ.

ಈ ಬಗ್ಗೆ ರೈತರು ದೂರು ಸಲ್ಲಿಸಿದರೆ ಮ್ಯಾನೇಜ್​​ಮೆಂಟ್​ ಕಾಯ್ದೆಯಡಿ ಕ್ರಮ ಜರುಗಿಸುವ ಮೂಲಕ ಯಂತ್ರವನ್ನು ಸೀಜ್​ ಮಾಡುವುದಾಗಿ ತಿಳಿಸಿದ್ದಾರೆ. ಅಲ್ಲದೇ ಖುದ್ದಾಗಿ ನಾನೇ ಸ್ಥಳಕ್ಕೆ‌ ತೆರಳಿ ಪರಿಶೀಲನೆ‌ ನಡೆಸಿ ಕ್ರಮಕ್ಕೆ ಮುಂದಾಗುತ್ತೇನೆ, ಅನ್ಯಾಯ ಆಗುತ್ತಿದ್ದರೆ ರೈತರು ನಮಗೆ‌ ಮಾಹಿತಿ ನೀಡಬೇಕು. ನಾವು ರೈತರ ಜೊತೆಗೆ ಇರುತ್ತೇವೆ ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.