ETV Bharat / state

ಗೌರಿ ಲಂಕೇಶ್, ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖೆ: ದಾವಣಗೆರೆ ಸಿಪಿಐಗೆ ರಾಷ್ಟ್ರಪತಿ ಪದಕ

ಪ್ರಕರಣಗಳ ತನಿಖಾ ದಕ್ಷತೆಗೆ ದಾವಣಗೆರೆಯ ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ಅನಿಲ್ ಅವರು ರಾಷ್ಟ್ರಪತಿ ಪದಕಕ್ಕೆ ಆಯ್ಕೆಯಾಗಿದ್ದಾರೆ.

Anil, CPI
ಅನಿಲ್, ಸಿಪಿಐ,
author img

By

Published : Jan 27, 2023, 10:28 AM IST

Updated : Jan 27, 2023, 10:57 AM IST

ದಾವಣಗೆರೆ ಸಿಪಿಐಗೆ ರಾಷ್ಟ್ರಪತಿ ಪದಕ

ದಾವಣಗೆರೆ : ದೇಶದ ಭದ್ರತೆ, ಸಾರ್ವಭೌಮತೆ, ಏಕತೆ ಮತ್ತು ಸಮಗ್ರತೆಯನ್ನು ಕಾಪಾಡುವಲ್ಲಿ ನಿರಂತರವಾಗಿ ತೊಡಗಿರುವ ಗೃಹರಕ್ಷಕ ದಳ, ನಾಗರಿಕ ರಕ್ಷಣೆ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು ಮತ್ತು ಎಸ್‌ಡಿಆರ್‌ಎಫ್ ಇಲಾಖೆಯ ಯೋಧರು ಮತ್ತು ಅಧಿಕಾರಿಗಳ ಸಾಧನೆಗೆ ನೀಡುವ ಅತ್ಯುತ್ತಮ ಪದಕವೇ ರಾಷ್ಟ್ರಪತಿ ಪದಕ. ಇಂತಹ ವಿಶೇಷ ಪದಕಕ್ಕೆ ದಾವಣಗೆರೆಯ ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ಅನಿಲ್ ಆಯ್ಕೆಯಾಗಿದ್ದಾರೆ. ಇವರು ಹಿರಿಯ ಪರ್ತಕರ್ತೆ ಗೌರಿ ಲಂಕೇಶ್ ಹಾಗೂ ಕರ್ನಾಟಕದ ಬಹು ಪ್ರಸಿದ್ಧ ವಿದ್ವಾಂಸರಲ್ಲಿ ಒಬ್ಬರಾದ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣದ ತನಿಖಾ ತಂಡದಲ್ಲಿದ್ದು, ಅತ್ಯುತ್ತಮ ಕಾರ್ಯದಕ್ಷತೆ ಹೊಂದಿದ್ದರು.

ಮೆರಿಟೋರಿಯಸ್ ಮೆಡಲ್(ರಾಷ್ಟ್ರಪತಿ ಪದಕ) ಅನ್ನು 18 ವರ್ಷ ಸೇವೆ ಪೂರೈಸಿದ ಬಳಿಕ ಅಧಿಕಾರಿಗಳಿಗೆ ಕೊಡಮಾಡಲಾಗುತ್ತದೆ. ಸರ್ಕಾರದ ಆಯಾ ಇಲಾಖೆಯ ಹಿರಿಯ ಹಾಗೂ ಮೇಲಧಿಕಾರಿಗಳು, ಒಬ್ಬ ಅಧಿಕಾರಿಯ ಸಾಧನೆಯ ‌ಬಗ್ಗೆ ತಯಾರು ಮಾಡುವ ವರದಿಯ ಆಧಾರದಲ್ಲಿ ಈ ಮೆಡಲ್ ಕೊಡುವುದು ಪದ್ಧತಿ. ಇದೀಗ ತನಿಖೆಯಲ್ಲಿ ತೋರಿಸಿದ ಕಾರ್ಯದಕ್ಷತೆಗೆ ಅನಿಲ್ ಅವರನ್ನು ಪ್ರತಿಷ್ಠಿತ ಪದಕ ಹುಡುಕಿಕೊಂಡು ಬಂದಿದೆ.

ಸಿಪಿಐ ಅನಿಲ್ ಅವರು ಗೌರಿ ಲಂಕೇಶ್ ಹತ್ಯೆ ಪ್ರಕರಣ, ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣ ಸೇರಿದಂತೆ ತುಮಕೂರು ಜಿಲ್ಲೆಯ ಪಾವಗಡದಲ್ಲಿ ಪೊಲೀಸ್ ಅಧಿಕಾರಿಯಾಗಿದ್ದಾಗ 17 ಕೆಜಿ ಬಂಗಾರ ದರೋಡೆ ಪ್ರಕರಣದ ತನಿಖಾ ತಂಡದ ಭಾಗವಾಗಿದ್ದರು. ಪ್ರಮುಖ ಪ್ರಕರಣಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ನಿರ್ಣಾಯಕವಾಗಿ ಕಾರ್ಯ ನಿರ್ವಹಿಸಿದ್ದರು. ಇದಲ್ಲದೆೇ ಪಾವಗಡದ ಶನಿಮಹಾತ್ಮ ದೇವಸ್ಥಾನದಲ್ಲಿದ್ದ ವ್ಯಕ್ತಿಯ ಆಭರಣಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಮೂರೇ ಗಂಟೆಯಲ್ಲಿ ಹಿಡಿದಿದ್ದರು. ಬೆಂಗಳೂರಿನ ಶ್ರೀರಾಮಪುರದಲ್ಲಿ ಕಾರ್ಪೊರೇಟ್ ಕಿಡ್ನ್ಯಾಪ್ ಪ್ರಕರಣವನ್ನು ಬಗೆಹರಿಸಿದ್ದರು.

ಸಿಪಿಐ ಅನಿಲ್ ಪ್ರತಿಕ್ರಿಯಿಸಿ, "ನನ್ನ ಸೇವೆಯನ್ನು ಮೇಲಧಿಕಾರಿಗಳು ಪರಿಗಣಿಸಿ 18 ವರ್ಷದ ಬಳಿಕ ಈ ಮೆರಿಟೋರಿಯಸ್ ಪದಕ ದೊರಕುವಂತೆ ಮಾಡಿದ್ದಾರೆ. ಮೇಲಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಆಗಸ್ಟ್ ಇಲ್ಲವೇ ನವೆಂಬರ್‌ನಲ್ಲಿ ಮೆಡಲ್ ನೀಡುತ್ತಾರೆ. ಹೆಮ್ಮೆ ಅನ್ನಿಸುತ್ತಿದೆ" ಎಂದರು.

ಇದನ್ನೂ ಓದಿ: ಹಣಕಾಸಿನ ಜಗಳ ಮಧ್ಯ ಪ್ರವೇಶಿಸಿದ ಪೊಲೀಸರ ಮೇಲೆ ಹಲ್ಲೆ.. ಮಹಾರಾಷ್ಟ್ರ ಮೂಲದ ಯುವತಿಯರ ವಿರುದ್ಧ ಪ್ರಕರಣ

Last Updated : Jan 27, 2023, 10:57 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.