ETV Bharat / state

ಅದಲು ಬದಲಾಯ್ತಾ ಮಗು.! ಆ ಮಹಿಳೆಗೆ ಜನಿಸಿದ್ದು ಗಂಡೋ, ಹೆಣ್ಣೋ..? - Davanagere baby news

ಸದಾ ಯಡವಟ್ಟುಗಳಿಂದಲೇ ಸುದ್ದಿಯಾಗಿರುವ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಗೆ ಜನಿಸಿದ ಮಗು ಗಂಡೋ, ಹೆಣ್ಣೋ ಎಂಬ ಗೊಂದಲ ಸೃಷ್ಟಿಯಾಗಿದೆ.

ಚಿಗಟೇರಿ ಜಿಲ್ಲಾಸ್ಪತ್ರೆ
author img

By

Published : Nov 1, 2019, 2:16 PM IST

ದಾವಣಗೆರೆ : ಸದಾ ಯಡವಟ್ಟುಗಳಿಂದಲೇ ಸುದ್ದಿಯಾಗಿರುವ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಗೆ ಜನಿಸಿದ ಮಗು ಗಂಡೋ, ಹೆಣ್ಣೋ ಎಂಬ ಗೊಂದಲ ಸೃಷ್ಟಿಯಾಗಿದೆ.

ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಮಲ್ಲೇಶ್ವರಿ ಎಂಬುವರಿಗೆ ಅಕ್ಟೋಬರ್ 8 ರಂದು ಮಗು ಜನಿಸಿತ್ತು. ಡಿಸ್ಚಾರ್ಜ್​ ಆಗಿ ಮನೆಗೆ ಬಂದ ಬಳಿಕ ಆಶಾ ಕಾರ್ಯಕರ್ತೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿ, ನಿಮ್ಮ ಗಂಡು ಮಗುವಿನ ಆರೋಗ್ಯ ಹೇಗಿದೆ ಎಂದಿದ್ದಾರೆ. ಇದಕ್ಕೆ ಮಗುವಿನ ತಾಯಿ ಮಲ್ಲೇಶ್ವರಿ, ನನಗೆ ಜನಿಸಿದ್ದು ಹೆಣ್ಣು ಮಗು ಎಂದಿದ್ದಾರೆ. ಈ ವೇಳೆ ತಮ್ಮಲ್ಲಿದ್ದ ದಾಖಲೆ ತೋರಿಸಿದ ದಾದಿ, ಇದರಲ್ಲಿ ನೋಡಿ ನಿಮ್ಮ ಹೆಸರಿನ ಮುಂದೆ ಗಂಡು ಮಗು ಜನಿಸಿರುವುದಾಗಿ ನಮೂದಿಸಲಾಗಿದೆ ಎಂದು ಹೇಳಿದ್ದಾರೆ. ಇದರಿಂದ ತಾಯಿಗೆ ಜನಿಸಿದ ಮಗು ಯಾವುದು ಎಂಬ ಅನುಮಾನ ಕಾಡತೊಡಗಿದೆ.

ಅದಲು ಬದಲಾಯ್ತಾ ಮಗು.!

ಈ ವಿಚಾರವಾಗಿ ಕುಟುಂಬಸ್ಥರು ಜಿಲ್ಲಾಸ್ಪತ್ರೆಯಲ್ಲಿ ದಾಖಲೆಗಳ ಪರಿಶೀಲನೆಗೆ ಅರ್ಜಿ ಸಲ್ಲಿಸಿ, ಪರಿಶೀಲಿಸಿದರು. ಆಸ್ಪತ್ರೆಯ ಸರ್ಜನ್ ಡಾ.ನಾಗರಾಜ್ ಅವರನ್ನು ಕೇಳಿದರೆ, ಅರ್ಜಿ ಸ್ವೀಕರಿಸಿ ಎರಡು ದಿನಗಳ ಕಾಲ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ದಾಖಲೆಗಳನ್ನು ಪೋಷಕರಿಗೆ ಸಹ ತೋರಿಸಿದ್ದೇವೆ. ಎಲ್ಲ ದಾಖಲೆಗಳಲ್ಲೂ ಹೆಣ್ಣು ಮಗು ಎಂದು ದಾಖಲಾಗಿದೆ. ಖಾಸಗಿ ಸಂಸ್ಥೆಯವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ ದಾಖಲೆಯಲ್ಲಿ ತಪ್ಪಾಗಿ ಗಂಡು ಮಗು ಎಂದು ದಾಖಲಾಗಿರಬಹುದು ಎನ್ನುತ್ತಾರೆ.

ಮಲ್ಲೇಶ್ವರಿಗೆ ಜನಿಸಿದ ಮಗು ಹೆಣ್ಣು ಎಂಬುದು ವೈದ್ಯರ ಸ್ಪಷ್ಟನೆ. ಆದರೆ, ಕುಟುಂಬಸ್ಥರಲ್ಲಿ ಈ ಗೊಂದಲ ಮುಂದುವರಿದಿದ್ದು, ಮಗುವಿನ ಡಿಎನ್ಎ ಪರೀಕ್ಷೆಗೂ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿಗೆ ಪೋಷಕರು ಅಲೆದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ.

Intro:KN_DVG_01_CHILD EXCHANGE_SCRIPT_02_7203307

REPORTER : YOGARAJA G. H.

ಅದಲು ಬದಲಾಯ್ತಾ ಮಗು...? ಆ ಮಹಿಳೆಗೆ ಜನಿಸಿದ್ದು ಗಂಡೋ, ಹೆಣ್ಣೋ...? ಜಿಲ್ಲಾ ಸರ್ಜನ್ ಹೇಳೋದೇನು....? ಕೊನೆಗೆ ಡಿಎನ್ಎ ಪರೀಕ್ಷೆ ಮೊರೆ ಹೋದ ದಂಪತಿ...!

ದಾವಣಗೆರೆ : ಸದಾ ಯಡವಟ್ಟುಗಳಿಂದಲೇ ಸುದ್ದಿಯಾಗುವ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮಹಿಳೆಗೆ ಜನಿಸಿದ ಮಗು ಗಂಡೋ, ಹೆಣ್ಣೋ ಎಂಬ ಗೊಂದಲ ಉಂಟಾಗಿದೆ. ಜಿಲ್ಲಾಸ್ಪತ್ರೆಯಲ್ಲಿ ಹೆರಿಗೆಯಾಗಿ
ತನ್ನೂರಿಗೆ ಹೋದ ಬಳಿಕ ಅಲ್ಲಿಗೆ ಬಂದ ಆಶಾ ಕಾರ್ಯಕರ್ತೆ ಹಾಗೂ ದಾದಿ ನಿಮಗೆ ಜನಿಸಿದ ಗಂಡು ಮಗು ಆರೋಗ್ಯವಾಗಿದೆಯಾ ಎಂದು ವಿಚಾರಿಸಿದ್ದಾರೆ. ಮಹಿಳೆ ನನಗೆ ಹುಟ್ಟಿದ್ದು ಹೆಣ್ಣು ಮಗು
ಎಂದಿದ್ದಾರೆ. ಬಳಿಕ ಜಿಲ್ಪಾಸ್ಪತ್ರೆಗೆ ಬಂದು ವಿಚಾರಿಸಿದರೆ ಜಿಲ್ಲಾ ಸರ್ಜನ್, ನಿಮಗೆ ಜನಿಸಿದ್ದು ಹೆಣ್ಣು ಮಗು ಎಂದು ಹೇಳಿದ್ದಾರೆ. ಆದ್ರೆ, ಈಗ ಮಗುವಿನ ಡಿಎನ್ಎ ಪರೀಕ್ಷೆಗೆ ವೈದ್ಯರು ಸಲಹೆ ಕೊಟ್ಟಿದ್ದಾರೆ.

ಜಿಲ್ಲೆಯ ಹರಿಹರ ತಾಲೂಕಿನ ಭಾನುವಳ್ಳಿ ಗ್ರಾಮದ ಮಲ್ಲೇಶ್ವರಿ ಎಂಬುವರಿಗೆ ಅಕ್ಟೋಬರ್ 8 ರಂದು ಮಧ್ಯರಾತ್ರಿ ೧೨.೩೦ ಕ್ಕೆ ಹೆಣ್ಣು ಮಗು ಜನಿಸಿತ್ತು. ಕೆಲವು ದಿನಗಳ ನಂತರ ಡಿಸ್ಚಾರ್ಜ್ ಆಗಿ ಮನೆಗೆ
ಬಂದಿದ್ರು. ಬಳಿಕ ಮನೆಗೆ ಬಂದ ಆಶಾ ಕಾರ್ಯಕರ್ತೆ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿ, ನಿಮ್ಮ ಗಂಡು ಮಗುವಿನ ಆರೋಗ್ಯ ಹೇಗಿದೆ ಎಂದಿದ್ದಾರೆ. ಇದಕ್ಕೆ ಮಗುವಿನ ತಾಯಿ ಮಲ್ಲೇಶ್ವರಿ
ನಮ್ಮದು ಹೆಣ್ಣು ಮಗು ಎಂದು ಹೇಳಿದ್ದಾರೆ. ಈ ವೇಳೆ ತಮ್ಮಲ್ಲಿದ್ದ ದಾಖಲೆ ತೋರಿಸಿದ ದಾದಿ, ಇದ್ರಲ್ಲಿ ನೋಡಿ ನಿಮ್ಮ ಹೆಸರಿನ ಮುಂದೆ ಗಂಡು ಮಗು ಜನಿಸಿದೆ ಎಂದು ನಮೂದಿಸಲಾಗಿದೆ ಎಂದು
ದಾಖಲೆ ತೋರಿಸಿದ್ದಾರೆ. ಇದರಿಂದಾಗಿ ತಾಯಿಗೆ ಜನಿಸಿದ ಮಗು ಗಂಡಾಗಿತ್ತಾ, ಆಸ್ಪತ್ರೆಯಲ್ಲೇನಾದ್ರೂ ಬದಲಾಯಿಸಿದ್ರಾ ಎಂಬ ಅನುಮಾನ ಕಾಡತೊಡಗಿದೆ.

ಈ ವಿಚಾರವನ್ನು ಬೆಂಗಳೂರಿನಿಂದ ಮಗು ನೋಡಲು ಬಂದ ತಮ್ಮ ಪತಿ ಹಾಗೂ ತಂದೆಗೆ ಮಲ್ಲೇಶ್ವರಿ ಅನುಮಾನ ಪರಿಹರಿಸಿಕೊಳ್ಳಲು ಪ್ರಾಥಮಿಕ ಆರೋಗ್ಯ ಕೇಂದ್ರದ ದಾದಿಯನ್ನು ಕೇಳಿದಾಗ ಗಂಡು
ಮಗು ಎಂಬ ದಾಖಲೆ ತೋರಿಸಿದ್ದಾರೆ. ಮಗುವಿನ ತಂದೆ ಹಾಗೂ ಅಜ್ಜ ಹಾಗೂ ಸೋದರ ಮಾವ ಸೇರಿದಂತೆ ಸಂಬಂಧಿಕರು ಜಿಲ್ಲಾಸ್ಪತ್ರೆಯಲ್ಲಿ ದಾಖಲೆಗಳ ಪರಿಶೀಲನೆಗೆ ಅರ್ಜಿ ಸಲ್ಲಿಸಿ ದಾಖಲೆಗಳ
ಪರಿಶೀಲನೆ ನಡೆಸಿದ್ರು, ಈ ವೇಳೆ ವೈದ್ಯರ ಜೊತೆ ವಾಗ್ದಾದವೂ ನಡೆದಿದೆ.

ಈ ಬಗ್ಗೆ ಆಸ್ಪತ್ರೆಯ ಜಿಲ್ಲಾ ಸರ್ಜನ್ ಡಾ. ನಾಗರಾಜ್ ಅವರನ್ನು ಕೇಳಿದರೆ, ಅರ್ಜಿ ಸ್ವೀಕರಿಸಿ ಎರಡು ದಿನಗಳ ಕಾಲ ಸಂಪೂರ್ಣ ದಾಖಲೆಗಳನ್ನು ಪರಿಶೀಲಿಸಿದ್ದೇವೆ. ದಾಖಲೆಗಳನ್ನು ಪೋಷಕರಿಗೆ ತೋರಿಸಿ,
ತಮ್ಮ ಎಲ್ಲ ದಾಖಲೆಗಳಲ್ಲೂ ಹೆಣ್ಣು ಮಗು ಎಂದು ದಾಖಲಾಗಿದೆ. ಖಾಸಗಿ ಸಂಸ್ಥೆಯವರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕಳುಹಿಸಿದ ದಾಖಲೆಯಲ್ಲಿ ತಪ್ಪಾಗಿ ಗಂಡು ಮಗು ಎಂದು ದಾಖಲಾಗಿದೆ. ನಿಮಗೆ
ಜನಿಸಿರುವುದು ಹೆಣ್ಣು ಮಗು ಎಂದು ಸಮಾಧಾನಪಡಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿರುವ ದಾಖಲೆ ಸರಿಯಾಗಿದಎ. ದಾದಿಗೆ ತಪ್ಪಾಗಿ ದಾಖಲಾತಿ ಹೋದದ್ದೇಗೆ ಎಂಬ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ.

ಮಲ್ಲೇಶ್ವರಿಗೆ ಅವರಿಗೆ ಜನಿಸಿದ ಮಗು ಹೆಣ್ಣು ಎಂಬುದು ವೈದ್ಯರ ಸ್ಪಷ್ಟನೆ. ಆದ್ರೆ ಇದು ಇನ್ನು ಗೊಂದಲ ಮುಂದುವರಿದಿದ್ದು, ಮಗುವಿನ ಡಿಎನ್ಎ ಪರೀಕ್ಷೆಗೂ ವೈದ್ಯರು ಸಲಹೆ ನೀಡಿದ್ದಾರೆ. ಒಟ್ಟಿನಲ್ಲಿ ಯಾರೋ
ಮಾಡಿದ ತಪ್ಪಿಗೆ ಪೋಷಕರೂ ಅಲೆದಾಡಬೇಕಾದ, ಮಗುವಿನ ಡಿಎನ್ಎ ಪರೀಕ್ಷೆಗೆ ಮೊರೆ ಹೋಗಬೇಕಾದ ದುಃಸ್ಥಿತಿ ಬಂದದ್ದು ವಿಪರ್ಯಾಸವೇ ಸರಿ.

ಬೈಟ್- 01

ಡಾ. ನಾಗರಾಜ್, ಜಿಲ್ಲಾಸ್ಪತ್ರೆಯ ಅಧೀಕ್ಷಕರು

Body:KN_DVG_01_CHILD EXCHANGE_SCRIPT_02_7203307

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.