ದಾವಣಗೆರೆ: ಫೇಸ್ಬುಕ್ ಪೇಜ್ನಲ್ಲಿ ಫೇಕ್ ಲೀಡರ್ಸ್ ಎಂಬ ಕಾಮೆಂಟ್ ಮಾಡಿದ್ದಕ್ಕಾಗಿ ಬಿಜೆಪಿ ಮುಖಂಡನಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದಾರೆ. ದಾವಣಗೆರೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ಬಿ ಮಂಜಪ್ಪ ಹಾಗೂ ಹೊನ್ನಾಳಿ ಬಿಜೆಪಿ ಮುಖಂಡ ಸುದೀಪ್ ನಡುವೆ ವಾಕ್ಸಮರದ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗ್ತಿದೆ.
ಕಾಂಗ್ರೆಸ್ ಕಾರ್ಯಕರ್ತ ಮಧು ಗೌಡ ಎಂಬ ಕೈ ಕಾರ್ಯಕರ್ತ ಜಿಲ್ಲಾಧ್ಯಕ್ಷ ಮಂಜಪ್ಪನವರ ವಿಡಿಯೋವನ್ನು ತನ್ನ ಫೇಸ್ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಆ ಪೋಸ್ಟ್ಗೆ ಬಿಜೆಪಿ ಮುಖಂಡ ಸುದೀಪ್ ಫೇಕ್ ಲೀಡರ್ಸ್ ಎಂದು ಕಾಮೆಂಟ್ ಮಾಡಿದ್ದಕ್ಕಾಗಿ ಇಷ್ಟೆಲ್ಲ ರಾಧಾಂತಕ್ಕೆ ಕಾರಣ ಆಗಿದೆ. ಇಬ್ಬರು ಅವಾಚ್ಯ ಶಬ್ದಗಳಿಂದ ಪರಸ್ಪರ ನಿಂದನೆ ಮಾಡಿಕೊಂಡಿದ್ದಾರೆ.
ಓದಿ: ಅರಣ್ಯಾಧಿಕಾರಿಗಳಿಗೆ ನಿಂದನೆ, ಬೆದರಿಕೆ ಆರೋಪ.. ಶಾಸಕ ಸುರೇಶ್ ಗೌಡ ವಿರುದ್ಧ ಎಫ್ಐಆರ್