ETV Bharat / state

ದಾವಣಗೆರೆ: ಹಿಟ್​ ಅಂಡ್​ ರನ್​ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​ - davangere accident case

ಹೊಸ ತಿರುವು ಪಡೆದುಕೊಂಡ ಮೂರು ಜನ ಯುವಕರ ಸಾವು - ಉದ್ದೇಶಪೂರ್ವಕವಾಗಿ ಲಾರಿ ಹತ್ತಿಸಿದ ಲಾರಿ ಚಾಲಕ - ಹೆದ್ದಾರಿಯಲ್ಲಿ ತಂಗಿದ್ದ ಲಾರಿಯನ್ನು ದರೋಡೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ಯುವಕರು.

davanagere-big-twist-in-hit-and-run-case
ದಾವಣಗೆರೆ: ಹಿಟ್​ ಅಂಡ್​ ರನ್​ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​
author img

By

Published : Feb 15, 2023, 6:33 PM IST

Updated : Feb 15, 2023, 9:33 PM IST

ದಾವಣಗೆರೆ: ಹಿಟ್​ ಅಂಡ್​ ರನ್​ ಪ್ರಕರಣಕ್ಕೆ ಬಿಗ್​ ಟ್ವಿಸ್ಟ್​

ದಾವಣಗೆರೆ: ರಸ್ತೆ ದುರಂತದಲ್ಲಿ ಮೂರು ಜನ ಯುವಕರ ಸಾವು ಪ್ರಕರಣ ಹೊಸ ತಿರುವು ಪಡೆದುಕೊಂಡಿದೆ. ಫೆ.11ರಂದು ದಾವಣಗೆರೆ ತಾಲೂಕಿನ ಆನಗೋಡು ಬಳಿಯ ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದ್ದ ಅಪಘಾತ ಪ್ರಕರಣಕ್ಕೆ ತಿರುವು ಸಿಕ್ಕಿದೆ. ಎರಡು ದ್ವಿಚಕ್ರವಾಹನದಲ್ಲಿ ಒಟ್ಟು ಆರು ಜನ ಸೇರಿ ಲಾರಿ ದರೋಡೆ ಮಾಡಲು ಯತ್ನಿಸಿದ್ದ ಯುವಕರ ಪೈಕಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ, ದರೋಡೆಗೊಳಗಾದ ಲಾರಿ ಚಾಲಕನೇ ಉದ್ದೇಶಪೂರ್ವಕವಾಗಿ ಮೂರು ಜನ ಯುವಕರ ಮೇಲೆ ಲಾರಿ ಹತ್ತಿಸಿ ಪ್ರಾಣ ತೆಗೆದಿದ್ದಾನೆ ಎಂದು ದಾವಣಗೆರೆ ಎಸ್​ಪಿ ಸಿಬಿ ರಿಷ್ಯಂತ್​ ಮಾಹಿತಿ ನೀಡಿದ್ದಾರೆ.

ರಾತ್ರಿ ಹೊತ್ತು ಹೆದ್ದಾರಿಯಲ್ಲಿ ತಂಗಿದ್ದ ಲಾರಿಯನ್ನು ರಾಬರಿ ಮಾಡಲು ತೆರಳಿದ್ದ ಆರು ಜನ ಯುವಕರು, ಲಾರಿ ಚಾಲಕನ ಹಲ್ಲೆ ನಡೆಸಿ ಮೊಬೈಲ್ ಹಾಗೂ ಎಂಟು ಸಾವಿರ ಹಣವನ್ನು ಕಸಿದುಕೊಂಡು ಪರಾರಿಯಾಗಲು ಪ್ರಯತ್ನಿಸಿದ್ದಾರೆ, ಯುವಕರ ಬೈಕ್​ಗಳನ್ನು ಹಿಂಬಾಲಿಸಿದ ಲಾರಿ ಚಾಲಕ ಮೊದಲು ಸ್ಪೆಂಡ್ಲರ್​ ಬೈಕ್​ಗೆ​ ಗುದ್ದಿ 3 ಯುವಕರನ್ನು ಪುಟ್​ಪಾತ್​ ಮೇಲೆ ಬೀಳಿಸಿದ್ದಾನೆ, ನಂತರ ಮುಂದೆ ಹೋಗುತ್ತಿದ್ದ ಡಿಯೋ ಬೈಕ್​ಗೆ​ ಗುದ್ದಿ ಆ ಬೈಕ್​ನಲ್ಲಿದ್ದ ಯುವಕರನ್ನು ಬೀಳಿಸಿ ಅವರ ಮೇಲೆ ಲಾರಿ ಹತ್ತಿಸಿಕೊಂಡು ಹೋಗಿದ್ದಾನೆ. ಈ ಘಟನೆಯಲ್ಲಿ ಆರು ಜನ ಯುವಕರ ಪೈಕಿ ಪರಶುರಾಮ್ (24) ಸಂದೇಶ (23) ಹಾಗೂ ಶಿವಕುಮಾರ (26) ಎಂಬ ಯುವಕರು ಸಾವನ್ನಪ್ಪಿದ್ದರು, ಇನ್ನುಳಿದ ಮೂರು ಜನ ಯುವಕರು ಗಾಯಗೊಂಡಿದ್ದರು.

ಇದನ್ನೂ ಓದಿ: ಪ್ರೇಮಿಗಳ ದಿನದಂದು ನಂದಿ ಬೆಟ್ಟದಲ್ಲಿ ಯುವಕ ಆತ್ಮಹತ್ಯೆ.. ಏನೇ ಕಷ್ಟ ಇದ್ದರೂ ಎದುರಿಸುವ ಛಲ ಇರಬೇಕು ಎಂದ ನಟ ಉಪೇಂದ್ರ

ಈ ಪ್ರಕರಣದ ಬಗ್ಗೆ ತನಿಖೆ ಆರಂಭಿಸಿದ ದಾವಣಗೆರೆ ಪೊಲೀಸರು, ಮೂವರು ಮಯುವಕರ ಮೇಲೆ ಲಾರಿ ಹತ್ತಿಸಿ ಚೆನ್ನೈಗೆ ಪರಾರಿಯಾಗಿದ್ದ ಉತ್ತರ ಪ್ರದೇಶ ಮೂಲದ ಲಾರಿ ಚಾಲಕ ಬೋಲಾ ಯಾದವ್​ (25)ನನ್ನು ದಾವಣಗೆರೆ ಪೊಲೀಸರು ಚೆನ್ನೈನಲ್ಲಿ ಲಾರಿ ಸಮೇತ ಬಂಧಿಸಿದ್ದಾರೆ, ಇತ್ತ ಲಾರಿ ದರೋಡೆ ಮಾಡಿದ್ದ ಆರು ಜನರ ಪೈಕಿ ಗಾಯಗೊಂಡಿದ್ದ ಗಣೇಶ್, ರಾಹುಲ್, ನಾಗರಾಜ್ ಎಂಬ ಯುವಕರನ್ನು ಪೊಲೀಸರು ಬಂಧಿಸಿ ದರೋಡೆ ಪ್ರಕರಣವನ್ನು ದಾಖಲು ಮಾಡಿದ್ದಾರೆ.

ಪ್ರಕರಣ ಬೆಳಕಿಗೆ ಬಂದಿದ್ದೇ ರೋಚಕ: ಘಟನೆಯಲ್ಲಿ ಗಾಯಗೊಂಡಿದ್ದ ಗಣೇಶ್, ರಾಹುಲ್, ನಾಗರಾಜ್ ಅವರನ್ನು ದಾವಣಗೆರೆ ಗ್ರಾಮಾಂತರ ಠಾಣೆಯ ಪೊಲೀಸರು ವಿಚಾರಣೆ ನಡೆಸಿದಾಗ ದರೋಡೆ ಬಗ್ಗೆ ಮೂವರು ಬಾಯಿಬಿಟ್ಟಿದ್ದಾರೆ, ಮಾಹಿತಿ ಕಲೆ ಹಾಕಿದ ಪೊಲೀಸರು ಸ್ಥಳೀಯವ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿದಾಗ ಆರು ಜನ ಯುವಕರು ರಾಷ್ಟ್ರೀಯ ಹೆದ್ದಾರಿಯಲ್ಲಿ ಚಾಲಕನ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದರೋಡೆ ಮಾಡಿದ ಬಳಿಕ ಲಾರಿ ಚಾಲಕನಿಂದಲೇ ಪರಶುರಾಮ್ (24) ಸಂದೇಶ (23 ಹಾಗೂ ಶಿವಕುಮಾರ (26) ಹತ್ಯೆ ಆಗಿದ್ದಾರೆ ಎಂದು ಎಸ್​ಪಿ ತಿಳಿಸಿದ್ದಾರೆ.

ಇದನ್ನೂ ಓದಿ: ಬರ್ತ್ ಡೇ ಗಿಫ್ಟ್ ವಿಚಾರಕ್ಕೆ ಲಿವ್​ ಇನ್​​​​​​​ ರಿಲೇಷನ್​​ಶಿಪ್​​ನಲ್ಲಿದ್ದ​ ಗೆಳತಿ ಹತ್ಯೆ ಮಾಡಿದ್ದ ಆರೋಪಿ ಬಂಧನ..

Last Updated : Feb 15, 2023, 9:33 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.