ದಾವಣಗೆರೆ: ಜಿಲ್ಲೆಯಲ್ಲಿ ಇಂದು 323 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಸೋಂಕಿತರ ಸಂಖ್ಯೆ 4392ಕ್ಕೆ ಏರಿಕೆಯಾಗಿದೆ. ಇಂದು ಸೋಂಕಿಗೆ ಮೂವರು ಬಲಿಯಾಗಿದ್ದು, ಈವರೆಗೆ 114 ಮಂದಿ ಸಾವನ್ನಪ್ಪಿದ್ದಾರೆ.
ಇಲ್ಲಿನ ಜಾಲಿನಗರದ ನಿವಾಸಿ 70 ವರ್ಷದ ವೃದ್ಧ, ಬಿ. ಎಂ. ಲೇಔಟ್ ನ 64 ವರ್ಷದ ವೃದ್ಧ ಹಾಗೂ ಶ್ರೀನಿವಾಸ ನಗರದ 80 ವರ್ಷದ ವೃದ್ಧ ಚಿಕಿತ್ಸೆ ಫಲಕಾರಿಯಾಗದೇ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ದಾವಣಗೆರೆ 165, ಹರಿಹರ 64, ಜಗಳೂರು 16, ಚನ್ನಗಿರಿ 34, ಹೊನ್ನಾಳಿ 39, ಹೊರ ಜಿಲ್ಲೆಯಿಂದ ಬಂದಿದ್ದ 5 ಮಂದಿಯಲ್ಲಿ ಸೋಂಕು ಖಚಿತವಾಗಿದೆ. 224 ಜನರು ಗುಣಮುಖರಾಗಿ ಮನೆಗೆ ತೆರಳಿದ್ದು, ಇದುವರೆಗೂ 2892 ಮಂದಿ ಗುಣಮುಖರಾಗಿದ್ದಾರೆ. 1406 ಸಕ್ರಿಯ ಪ್ರಕರಣಗಳು ದಾಖಲಾಗಿವೆ.