ದಾವಣಗೆರೆ: ಸ್ನೇಹಿತರು, ಸಂಬಂಧಿಕರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ಆಗಬೇಕೆಂದು ಪ್ರತಿಯೊಬ್ಬರೂ ಕನಸು ಕಂಡಿರುತ್ತಾರೆ. ಆದರೆ ಇಲ್ಲೊಂದು ಮದುವೆಗೆ ಕರ್ಫ್ಯೂ ಬಿಸಿ ತಟ್ಟಿದ್ದು, ಮನೆಯರು ಸೇರಿ ಕೇವಲ ಹತ್ತು ಜನರ ಸಮ್ಮುಖದಲ್ಲಿ ವಿವಾಹ ನೆರವೇರಿದೆ.
ಇಂದು ನಿಗದಿಯಾಗಿದ್ದ ಮದುವೆ ಕೇವಲ 10 ಜನರ ಸಮ್ಮುಖದಲ್ಲಿ ನಡೆಯುತ್ತಿರುವುದ್ದರಿಂದ ಮನೆಯವರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ದಾವಣಗೆರೆ ನಗರದ ರಾಜನಳ್ಳಿ ಹನಮಂತಪ್ಪ ಕಲ್ಯಾಣ ಮಂಟದಲ್ಲಿ ಇಂದು ನಡೆದ ಪ್ರಕಾಶ್ ಮತ್ತು ಪೂಜಾ ಎಂಬ ಜೋಡಿಯ ಮದುವೆಗೆ ಸ್ನೇಹಿತರು, ಸಂಬಂಧಿಕರು ಬಾರದೆ ಇಡೀ ಕಲ್ಯಾಣ ಮಂಟಪ ಬಿಕೋ ಎನ್ನುತ್ತಿತ್ತು.
ಕರ್ಫ್ಯೂ ಹಿನ್ನೆಲೆಯಲ್ಲಿ ಜನರು ಮದುವೆಗೆ ಬರಲಾಗದೆ ಮನೆಯಲ್ಲಿ ಉಳಿದ್ದಿದ್ದರಿಂದ 10 ಜನರ ಸಮ್ಮುಖದಲ್ಲಿ ಮದುವೆ ನೆರವೇರಿದೆ. ಸರ್ಕಾರದ ಆದೇಶದಂತೆ ಮದುವೆಗೆ 50 ಜನರು ಬರಲು ಅವಕಾಶವಿದ್ದರೂ ಯಾರೂ ಕೂಡ ಮದುವೆಗೆ ಬಾರದೆ ಇರುವುದರಿಂದ ಮನೆಯವರೇ ಸೇರಿ ಮದುವೆ ಮಾಡಿದ್ದಾರೆ. ಮದುವೆ ದಿನಾಂಕ ಮೊದಲೇ ನಿಶ್ಚಯವಾಗಿದ್ದರಿಂದ ಬಂದವರು ಬರಲಿ ಎಂದು ನಾವು ಮದುವೆ ಮಾಡುತ್ತಿದ್ದೇವೆ ಎಂದು ಸಂಬಂಧಿಕರು ತಿಳಿಸಿದರು. ಸ್ನೇಹಿತರು, ಸಂಬಂಧಿಕರು ಇಲ್ಲದೆ ಮದುವೆಯಾಗುತ್ತಿರುವುದಕ್ಕೆ ನವಜೋಡಿ ಬೇಸರ ವ್ಯಕ್ತಪಡಿಸಿದ್ದಾರೆ.
ಓದಿ: ತಂದೆ ಆಸ್ಪತ್ರೆಯಲ್ಲಿದ್ದರೂ ಕೋವಿಡ್ ರೋಗಿಗಳ ಆರೈಕೆಗೆಗೆ ಧಾವಿಸಿದ ವೈದ್ಯ